ನನ್ನ ಪತಿ ನವೀನ್ ಕುಮಾರ್ ಅವರು ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿ 2 ಲಕ್ಷ ರು. ಖರ್ಚಾಗಿದೆ. ಹತ್ತು ದಿವಸ ಇಂಜೆಕ್ಷನ್ ನೀಡಬೇಕಾಗಿದ್ದು, ಒಂದು ದಿನಕ್ಕೆ 6,500 ರು. ಆಗಲಿದೆ. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೆಲ್ಲಹಳ್ಳಿ ನಿವಾಸಿ, ಲಾರಿ ಚಾಲಕ ಎಸ್.ನವೀನ್ ಕುಮಾರ್ ಅವರಿಗೆ ಜೆಡಿಎಸ್‌ ಮುಖಂಡ ಅಣ್ಣೂರು ನವೀನ್ ಅವರು 10,500 ರು. ನೆರವು ನೀಡಿದರು.

ನಂತರ ಮಾತನಾಡಿದ ನವೀನ್ ಅವರು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನವೀನ್ ಕುಮಾರ್ ಅವರ ಚಿಕಿತ್ಸೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿದ್ದು, ಧನ ಸಹಾಯ ಮಾಡುವುದಾಗಿ ತಿಳಿಸಿದ್ದು, ಶೀಘ್ರವೇ ಇನ್ನಷ್ಟು ಧನ ಸಹಾಯ ಮಾಡುವುದಾಗಿ ಹೇಳಿದರು.

ರೋಗಿ ನವೀನ್ ಕುಮಾರ್ ಅವರ ಪತ್ನಿ ಸೌಂದರ್ಯ ಮಾತನಾಡಿ, ನನ್ನ ಪತಿ ನವೀನ್ ಕುಮಾರ್ ಅವರು ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿ 2 ಲಕ್ಷ ರು. ಖರ್ಚಾಗಿದೆ. ಹತ್ತು ದಿವಸ ಇಂಜೆಕ್ಷನ್ ನೀಡಬೇಕಾಗಿದ್ದು, ಒಂದು ದಿನಕ್ಕೆ 6,500 ರು. ಆಗಲಿದೆ. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ. ದಾನಿಗಳು ನೆರವು ನೀಡುವಂತೆ ಮನವಿ ಮಾಡಿದರು.

ಮನೆ ನಿರ್ಮಿಸಿಕೊಳ್ಳಲು ಬಡವರಿಗೆ 25 ಸಾವಿರ ರು. ನೆರವು ನೀಡಿದ ರಾಜೇಶ್

ಹಲಗೂರು:ಬ್ಯಾಡರಹಳ್ಳಿ ಗ್ರಾಪಂ ಮಾಜಿ ಸದಸ್ಯ, ಗೊಲ್ಲರಹಳ್ಳಿಯ ರಾಜೇಶ್ ಅವರು ತಮ್ಮ ಗ್ರಾಮದ ಶಿವಣ್ಣ ಅವರಿಗೆ ನೂತನ ಮನೆ ನಿರ್ಮಿಸಿಕೊಳ್ಳಲು ತಮ್ಮ ಪುತ್ರಿ ಪರಿಣಿತ ಅವರ ಮೂಲಕ 25 ಸಾವಿರ ರು. ಚೆಕ್ ನೀಡಿ ನೆರವಾದರು.

ಬಡವರಾಗಿರುವ ಶಿವಣ್ಣ ಶೆಡ್ಡಿನಲ್ಲಿ ವಾಸವಾಗಿದ್ದರು. ಮನೆ ನಿರ್ಮಿಸಿಕೊಳ್ಳಲು ವಸತಿ ಯೋಜನೆ ಅಡಿ ಅನುದಾನಕ್ಕೆ ಅರ್ಜಿ ಸಲ್ಲಿಸಿ ಪಂಚಾಯ್ತಿಯಿಂದ ಅನುದಾನ ಕೊಡುವಂತೆ ರಾಜೇಶ್ ಅವರಿಗೆ ಮನವಿ ಮಾಡಿಕೊಂಡಿದ್ದರು.ಗ್ರಾಪಂಗೆ ಬಂದಿದ್ದ 8 ವಸತಿ ಯೋಜನೆ ಅಡಿಯಲ್ಲಿ ಇವರಿಗೆ ಅನುದಾನ ಸಿಗದ ಕಾರಣ ರಾಜೇಶ್ ಅವರು ತಮ್ಮ ಸ್ವಂತ ಹಣ 25,000, ರುಗಳನ್ನು ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ಮಗಳಾದ ಪರಿಣಿತ ಅವರ ಕೈಯಿಂದ ಚೆಕ್ ರೂಪದಲ್ಲಿ ನೀಡಿ ನಿಮಗೆ ಅನುದಾನ ಸಿಗದ ಕಾರಣ ನನ್ನ ದುಡಿಮೆಯಿಂದ ನಿಮಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇದನ್ನು ಮನೆ ಕಟ್ಟಿಕೊಳ್ಳಲು ಉಪಯೋಗಿಸಿಕೊಳ್ಳಿ ಎಂದರು.

ಚೆಕ್ ಸ್ವೀಕರಿಸಿದ ಶಿವಣ್ಣ ಮಾತನಾಡಿ, ನನಗೆ ಸರ್ಕಾರದಿಂದ ಅನುದಾನ ಸಿಗದ ಕಾರಣ ರಾಜೇಶ್ ಅವರು ನನಗೆ ಹಣದ ಸಹಾಯ ಮಾಡಿದ್ದಾರೆ ಎಂದರು. ಗ್ರಾಮದ ಮುಖಂಡ ಕಾಂತರಾಜ್ ಅವರು ರಾಜೇಶ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.ಈ ವೇಳೆ ಕಾಳ ವೆಂಕಟೇಗೌಡ ,ಹೊನ್ನಪ್ಪ, ಸಿದ್ದರಾಜು, ಸಣ್ಣವನು, ಪುಟ್ಟಸ್ವಾಮಿ, ಮಹೇಶ, ಶ್ರೀನಿವಾಸ, ಮುತ್ತರಾಜು, ಸೇರಿದಂತೆ ರಾಜೇಶ್ ಅವರ ಪುತ್ರಿ ಕು.ಪರಿಣಿತ ಮತ್ತು ಇತರರು ಇದ್ದರು.