ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಳವಳ್ಳಿ ಶಿವಣ್ಣ ಅವರನ್ನು ಅಭಿನಂದಿಸಿದ ಮದ್ದೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣೇಗೌಡ, ಶಿವಣ್ಣರ ಅಭಿಮಾನಿ ಬಳಗ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಳವಳ್ಳಿ ಶಿವಣ್ಣ ಅವರನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣೇಗೌಡ, ಶಿವಣ್ಣರ ಅಭಿಮಾನಿ ಬಳಗ ಅಭಿನಂದಿಸಿತು. ಶಿವಣ್ಣರ ಸಾಮಾಜಿಕ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ವರಿಷ್ಠರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಮಳವಳ್ಳಿ ಶಿವಣ್ಣ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ 1500ಕ್ಕೂ ಹೆಚ್ಚು ಲ್ಯಾಪ್ ಟ್ಯಾಪ್ ಗಳನ್ನು ನೀಡಿದ್ದಾರೆ. ಇವರ ಸಮಾಜ ಸೇವೆಗೆ ಪರಿಷತ್ ಸದಸ್ಯ ಸ್ಥಾನ ದೊರಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿರುವ ಶಿವಣ್ಣ ಅವರ ಸಮಾಜ ಸೇವೆ ಹಾಗೂ ರಾಜಕೀಯ ಕಾರ್ಯಗಳು ಹೀಗೆ ಮುಂದುವರಿಯಲಿ. ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಒಳ್ಳೆ ದಿನಗಳು ಬರಲಿ ಎಂದು ಹಾರೈಸಿದರು. ಈ ವೇಳೆ ತಾಲೂಕು ಕುರುಬರ ಸಂಘದ ಖಜಾಂಚಿ ಜವರಾಯಿ ಹೆಗ್ಗಡೆ, ನಿರ್ದೇಶಕರಾದ ಕುಮಾರ್ ಹೆಗ್ಗಡೆ, ಮುಖಂಡರಾದ ಮನು ಕುಮಾರ್, ಮರಿಕಾಳ ಹೆಗ್ಗಡೆ, ಶಿವು ಬೀರಯ್ಯ, ಕಿರಣ್, ಯಶ್ವಂತ್ ಹಾಗೂ ಮತ್ತತರು ಉಪಸ್ಥಿತರಿದ್ದರು.

ಕರಡಹಳ್ಳಿಯಲ್ಲಿ ಶಾಲಾ ಸಂಸತ್ ಚುನಾವಣೆ

ನಾಗಮಂಗಲ:ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನಿಯಾಗಿ ಕೆ.ನಾಗೇಶ್‌, ಉಪ ಪ್ರಧಾನಿಗಳಾಗಿ ಹರ್ಷಿತ್ ಗೌಡ, ಪ್ರತಿಕ್ಷಾ, ಆರ್.ಧನ್ವಂತ್, ಕ್ರೀಡಾ ಸಚಿವರಾಗಿ ಎಚ್.ಎಂ.ರಂಜಿತ್, ಆಹಾರ ಸಚಿವರಾಗಿ ದಿವ್ಯಶ್ರೀ, ಶಾಲಾ ಶಿಸ್ತು ಮತ್ತು ಸಂಸ್ಕಾರ ಸಚಿವರಾಗಿ ಶಮಿಕಾ ಜಾನವಿ, ಸ್ವಚ್ಛತಾ ಸಚಿವರಾಗಿ ಸೃಜನ್ ಹಾಗೂ ರವೀಂದ್ರ ಆಯ್ಕೆಯಾದರು.

ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಮತಪತ್ರದ ಮೂಲಕ ಗೌಪ್ಯ ಮತದಾನ ಮಾಡಿಸಲಾಯಿತು. ಅಭ್ಯರ್ಥಿಗಳಾಗಿದ್ದ 9 ವಿದ್ಯಾರ್ಥಿಗಳು ಇನ್ನುಳಿದ ವಿದ್ಯಾರ್ಥಿಗಳಿಂದ ಮತಯಾಚಿಸಿದರು. ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಸರತಿ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ಮತದಾನ ಮಾಡಿದರು.ಶಾಲೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಅಡುಗೆ ಸಿಬ್ಬಂದಿಗೂ ಕೂಡ ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು.

ಚುನಾವಣಾ ಉಸ್ತುವಾರಿಯಾಗಿ ಮುಖ್ಯ ಶಿಕ್ಷಕ ಎನ್.ಸಿ.ಶಿವಕುಮಾರ್, ಚುನಾವಣಾಧಿಕಾರಿಯಾಗಿ ಜಾಕಿರ್‌ಪಾಷ, ಚುನಾವಣಾ ಸಿಬ್ಬಂದಿ ಅಫ್ಷಾನ್ ಫಿರ್ದೋಸ್, ದೇವಿಕಾ, ಪುಷ್ಪ, ಸಂಗೀತ, ಹರೀಶ್ ಕರ್ತವ್ಯ ನಿರ್ವಹಿಸಿದರು.