ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿ ಆಯ್ಕೆ

| Published : Oct 27 2025, 12:30 AM IST

ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆ ಕದ್ರಿ ಪಾರ್ಕ್ ಬಳಿಯ ಲಯನ್ ಅಶೋಕ ಸೇವಾಭವನದಲ್ಲಿ ಕಿಶೋರ್ ಡಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆ ಕದ್ರಿ ಪಾರ್ಕ್ ಬಳಿಯ ಲಯನ್ ಅಶೋಕ ಸೇವಾಭವನದಲ್ಲಿ ಕಿಶೋರ್ ಡಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಸ್ವಾಗತಿಸಿ 2024ನೇ ಸಾಲಿನ ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರಗಳನ್ನು ಮಹಾಸಭೆಯಲ್ಲಿ ಮಂಡಿಸಿದರು.

ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ ಮತ್ತು ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ್ ಕುಮಾರ್ ಮಲ್ಲೂರ್, ಕೋಶಾಧಿಕಾರಿಯಾಗಿ ಮೋಹನ ಕೊಪ್ಪಲ ಕದ್ರಿ, ಕ್ಷೇಮನಿಧಿ ಪ್ರಧಾನ ಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ರಾಘವೇಂದ್ರ ರಾವ್ ಶರವು, ಜೊತೆ ಕಾರ್ಯದರ್ಶಿ ತುಳಸೀದಾಸ್ ಉರ್ವ, ಸಲಹಾ ಸಮಿತಿ ಸದಸ್ಯರಾಗಿ ತಮ್ಮ ಲಕ್ಷ್ಮಣ, ಶೋಭಾ ಶೆಟ್ಟಿ, ಶರತ್ ಶೆಟ್ಟಿ ಮುಂಡ್ಕೂರು, ಸಂಘಟನಾ ಕಾರ್ಯದರ್ಶಿಯಾಗಿ ಮಧು ಬಂಗೇರ, ಪ್ರಚಾರ ನಿರ್ದೇಶಕರಾಗಿ ರತ್ನದೇವ್ ಪುಂಜಾಲಕಟ್ಟೆ, ಆಡಳಿತ ಸಮಿತಿ ಸದಸ್ಯರಾಗಿ ಕಿಶೋರ್ ಕುಮಾರ್ ಜೋಗಿ ಉಬಾರ್, ಕಿಶೋರ್ ಡಿ.ಕೆ., ಸುಧಾಕರ ಶೆಟ್ಟಿ ಬೆದ್ರ, ಸಂಜೀವ ಅಡ್ಯಾರ್, ನಾಗೇಶ್ ದೇವಾಡಿಗ ಕದ್ರಿ, ಮೋಹನ್ ಕೆ. ಬೋಳಾರ್, ಅಶ್ವಿನಿ ರೈ, ಕಿಶನ್ ಮಂಗಳಾದೇವಿ, ಹರೀಶ್ ಕೆ. ಶಕ್ತಿನಗರ, ಮನೋಜ್ ಕುಮಾರ್, ನರೇಂದ್ರ ಎಸ್. ಅಂಚನ್, ಸುರೇಶ್ ಬಲ್ಮಠ, ಉದಯರವಿ ಶೆಟ್ಟಿ, ರಾಜಶೇಖರ ಶೆಟ್ಟಿ, ನಿತಿನ್ ಕುಮಾರ್ ಕನೀರ್‌ತೋಟ, ವಿನಾಯಕ ಜೆಪ್ಪು, ದಿನೇಶ್ ಕುಂಪಲ, ನರೇಂದ್ರ ಕೆರೆಕಾಡು, ತಾರಾನಾಥ್ ಉರ್ವ, ರಂಜನ್ ಬೋಳೂರು ಆಯ್ಕೆಯಾದರು.

ಮೋಹನ ಕೊಪ್ಪಲ ಕದ್ರಿ ನಿರ್ವಹಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು.