ಮಂಗಳೂರು ಹಿಂದಿ ಪ್ರಚಾರ ಸಮಿತಿ 80ನೇ ವಾರ್ಷಿಕೋತ್ಸವ

| Published : Oct 27 2025, 12:30 AM IST

ಸಾರಾಂಶ

ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವ ನಗರದ ಮಣ್ಣಗುಡ್ಡೆಯಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವ ನಗರದ ಮಣ್ಣಗುಡ್ಡೆಯಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್, 80 ವರ್ಷಗಳ ಹಿಂದೆ ಮಂಗಳೂರಿನ ಹಿಂದಿ ಪ್ರಚಾರ ಸಮಿತಿ ಆರಂಭಗೊಂಡಿದ್ದು, ಸಮಿತಿಯಲ್ಲಿ ಇದ್ದ ಹಲವು ವ್ಯಕ್ತಿಗಳು ನಗರದಲ್ಲಿ ಹಿಂದಿ ಭಾಷೆಯನ್ನು ಬೆಳೆಸಲು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ನೆನಪಿಸಿಕೊಂಡರು.

ಜನರು ಇಂದು ಟಿವಿ ಮಾಧ್ಯಮದ ಮೂಲಕ ಹಿಂದಿ ಭಾಷೆ ಕಲಿತುಕೊಳ್ಳುವ ಮೂಲಕ ಮನೆ ಮನೆಯಲ್ಲಿ ಹಿಂದಿ ಭಾಷೆ ಜನಜನಿತವಾಗಿದೆ. ಮುಂದೆ ಹಿಂದಿ ಪ್ರಚಾರ ಸಮಿತಿಯ ನೂತನ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳಿಗೆ ತನ್ನಿಂದಾಗುವ ಸಂಪೂರ್ಣ ರೀತಿಯ ಸಹಕಾರ ನೀಡುತ್ತೇನೆ ಎಂದರು.

ಎಂಆರ್‌ಪಿಎಲ್‌ ಅಧಿಕಾರಿ ಡಾ. ಲಲಿತ್ ರಾಜ್ ಪುರೋಹಿತ್ ಮಾತನಾಡಿ, ಹಿಂದಿ ರಾಷ್ಟ್ರ ಭಾಷೆ ಅಲ್ಲದೆ ಒಂದು ಸರಳ ಭಾಷೆ ಕೂಡ ಆಗಿ, ತುಂಬಾ ವೈವಿಧ್ಯತೆಯನ್ನು ಹೊಂದಿದೆ ಎಂದರು.

ಮಾಜಿ ಎಂಎಲ್ಸಿ ಕ್ಯಾ. ಗಣೇಶ ಕಾರ್ಣಿಕ್ ಮಾತನಾಡಿ, ಮಂಗಳೂರಿನ ಭವಿಷ್ಯದ ಭಾಗವಾಗಿ, ಸಾಂಸ್ಕೃತಿಕವಾಗಿ ಹಿಂದಿ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸ್ಥೆಗೆ ತಮ್ಮಿಂದಾಗುವ ಸಹಾಯ, ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಮಾಜಿ ಅಧ್ಯಕ್ಷ ಡಾ.ರಾಮ್ ಮೋಹನ್ ರಾವ್, ಅಧ್ಯಕ್ಷ ಡಾ. ಮುರಳೀಧರ ನಾಯಕ, ಸಂಜೀವ್ ಶೆಟ್ಟಿ ಸಂಸ್ಥೆಯ ಉದ್ಯಮಿ ಸಂಜೀವ್ ಶೆಟ್ಟಿ ಇದ್ದರು. ನಾಗರತ್ನಾ ರಾವ್ ಪ್ರಸ್ತಾವನೆ ಮಾಡಿದರು. ಪ್ರೊ. ಸುಮತಿ ಸ್ವಾಗತಿಸಿದರು. ಡಾ.ಪಿ.ವಿ. ಶೋಭಾ ಕಾರ್ಯಕ್ರಮ ನಿರ್ವಹಿಸಿದರು.