ಕೋಟ: ಹಿಂಜಾವೇಯಿಂದ ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಶ್ರದ್ಧಾಂಜಲಿ

| Published : Jan 01 2025, 12:01 AM IST

ಕೋಟ: ಹಿಂಜಾವೇಯಿಂದ ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಹಾತೋಭಾರ ಹಿರೇಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ಕಾಶ್ಮೀರದಲ್ಲಿ ನಡೆದ ಇತ್ತೀಚೆಗೆ ಅವಘಡದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಹಾತೋಭಾರ ಹಿರೇಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ಕಾಶ್ಮೀರದಲ್ಲಿ ನಡೆದ ಇತ್ತೀಚೆಗೆ ಅವಘಡದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಟ ಅನಂತಕೃಷ್ಣ ಕಾಮತ್, ಮಡಿದ ವೀರ ಯೋಧ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಪುಷ್ಪ ನಮನಗೈದು, ಗಡಿಯಲ್ಲಿ ದೇಶ ಕಾಯಯವ ಕಾಯಕ ಶ್ರೇಷ್ಠವಾದದ್ದು., ಸೈನ್ಯ ವೃತ್ತಿಯ ಮೂಲಕ ತಮ್ಮನ್ನು ತಾವು ದೇಶಕ್ಕೆ ಸರ್ಪಸಿಕೊಂಡಂತೆ. ಈ ದಿಸೆಯಲ್ಲಿ ಅನೂಪ್ ಪೂಜಾರಿ ಮತ್ತು ಇತರ ಸಹಯೋಧರ ಅಕಾಲಿಕ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿದೆ. ಇಂತಹ ದೇಶಭಕ್ತರ ಬಲಿದಾನ ರಾಷ್ಟ್ರ ಪ್ರೇಮವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.ಅನೂಪ್ ಪೂಜಾರಿಯವರ ಸಹಪಾಠಿ, ಸೇನೆಯ ಹಿರಿಯ ಅಧಿಕಾರಿ ಸುಬೇದಾರ್ ಶಂಕರ ಗೌಡ ಪಾಟೀಲ್, ಅನೂಪ್‌ ಅವರ ದೇಶ ಸೇವೆಯನ್ನು ಸಭೆಯಲ್ಲಿ ತೆರೆದಿಟ್ಟರು. ಈ ವೇಳೆ ನಿವೃತ್ತ ಯೋಧರಾದ ರವಿಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್ ಪಡುಕರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನೂಪ್ ಪೂಜಾರಿಯವರಿಗೆ ನಮನಗಳನ್ನು ಸಲ್ಲಿಸಿದರು.ಕೋಟ ಹಿಂಜಾವೇ ಅಧ್ಯಕ್ಷ ಪವನ್ ಕುಂದರ್, ಕಾರ್ಯದರ್ಶಿ ಕೀರ್ತಶ್ ಪೂಜಾರಿ, ಗೌರವಾಧ್ಯಕ್ಷ ಆನಂದ್ ದೇವಾಡಿಗ, ಮುಖಂಡರಾದ ಶಂಕರ್ ಕೋಟ, ಸಮತಾ ಸುರೇಶ್, ನಾಗೇಶ್ ಪೂಜಾರಿ, ರತ್ನಾಕರ್ ಪೂಜಾರಿ, ರಾಘವೇಂದ್ರ ಕಾಂಚನ್, ಸತೀಶ್ ಬಾರಿಕೆರೆ, ಜಾಗರಣಾ ವೇದಿಕೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಪ್ರಮುಖರಾದ ರಂಜೀತ್ ಕುಮಾರ್ ನಿರ್ವಹಿಸಿದರು.