ಇಂದು ಡಾ.ಬಸವಲಿಂಗ ಸ್ವಾಮೀಜಿ ಅದ್ಧೂರಿ ಜನ್ಮೋತ್ಸವ

| Published : Jan 01 2025, 12:01 AM IST

ಇಂದು ಡಾ.ಬಸವಲಿಂಗ ಸ್ವಾಮೀಜಿ ಅದ್ಧೂರಿ ಜನ್ಮೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶರಣ ಡಾ.ಬಸವಲಿಂಗ ಶ್ರೀಗಳ ಜನ್ಮ ದಿನೋತ್ಸವ ಜ.೧ರಂದು ನಡೆಯಲಿದ್ದು, ವಿವಿಧ ಶ್ರೀಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸುವರು ಎಂದು ಶ್ರೀ ಕುಂಬಳೇಶ್ವರ ೧೦೮ ಲಿಂಗೇಶ್ವರ ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಜಿ.ನಂಜಪ್ಪ ಹರಿಹರದಲ್ಲಿ ಹೇಳಿದ್ದಾರೆ.

- ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಭಾಗಿ: ಜಿ.ನಂಜಪ್ಪ ಮಾಹಿತಿ - - - ಕನ್ನಡಪ್ರಭ ವಾರ್ತೆ ಹರಿಹರ

ಶರಣ ಡಾ.ಬಸವಲಿಂಗ ಶ್ರೀಗಳ ಜನ್ಮ ದಿನೋತ್ಸವ ಜ.೧ರಂದು ನಡೆಯಲಿದ್ದು, ವಿವಿಧ ಶ್ರೀಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸುವರು ಎಂದು ಶ್ರೀ ಕುಂಬಳೇಶ್ವರ ೧೦೮ ಲಿಂಗೇಶ್ವರ ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಜಿ.ನಂಜಪ್ಪ ಹೇಳಿದರು.

ನಗರದ ೧೦೮ ಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ೭೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರ ಜನ್ಮದಿನವನ್ನು ಭಕ್ತರ ಸಮ್ಮುಖ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.

ಅಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಸರ್ವೋದಯ ಮಠದ ಶಿವಕುಮಾರ ಶ್ರೀ ಸಾನಿಧ್ಯ ವಹಿಸುವರು. ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ವಿವಿಧ ಗಣ್ಯರು ಭಾಗವಹಿಸುವರು ಎಂದ ಅವರು, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜ.೨ರಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡು ದಿನ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಬೇಕೆಂದು ಅವರು ಕೋರಿದರು.

ಡಾ.ಬಸವಲಿಂಗ ಶ್ರೀ ಮಾತನಾಡಿ, ಈ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಭಕ್ತರಲ್ಲಿ ಒಡಮೂಡಿತ್ತು. ಅದರಂತೆ ನೂತನ ಸಮಿತಿ ಹಲವು ಯೋಜನೆಗಳನ್ನು ರೂಪಿಸಿದೆ. ದೇವಸ್ಥಾನ ಆವರಣದಲ್ಲಿ ಮಳಿಗೆ, ಗೋಪುರ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಉದ್ದೇಶಕ್ಕೆ ಹಲವಾರು ಗಣ್ಯರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಬೆಣ್ಣಿ ರೇವಣಸಿದ್ದಪ್ಪ, ಖಜಾಂಚಿ ಬೆಣ್ಣಿ ಸಿದ್ದೇಶ್, ಉಪಾಧ್ಯಕ್ಷ ಹರಪನಹಳ್ಳಿ ಬಸವರಾಜಪ್ಪ, ಕಾರ್ಯದರ್ಶಿ ಮಾಲತೇಶ್, ಸದಸ್ಯರಾದ ಗಜೇಂದ್ರ, ಮುರಿಗೆಮ್ಮ, ಹಾವನೂರು ಈರಣ್ಣ, ಮಜ್ಜಿಗೆ ಚಂದ್ರಪ್ಪ, ನೀಲಗುಂದ ಪರಮೇಶ್ವರಪ್ಪ, ಬೆಟ್ಟಪ್ಪ, ಪಂಡಿತರಾದ ರುದ್ರಯ್ಯ ಅರ್ಚಕರಾದ ಮಹಾರುದ್ರಪ್ಪ ಮತ್ತಿತರರಿದ್ದರು.

- - -

-೩೦ಎಚ್‌ಆರ್‌ಆರ್೦೩:

ಹರಿಹರದ ೧೦೮ ಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಅಧ್ಯಕ್ಷ ಜಿ.ನಂಜಪ್ಪ, ಶರಣ ಡಾ. ಬಸವಲಿಂಗ ಶ್ರೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.