ಕನ್ನಡಪ್ರಭವಾರ್ತೆ ಮಡಿಕೇರಿ

ಸುಳ್ಯ ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 3 ದಿನಗಳ ಕಾಲ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ, ಮತ್ತು ಕೊಡಗಿನ ಭಕ್ತರು ಪಾಲ್ಗೊಂಡಿದ್ದರು. ವೆಂಕಟರಮಣ ಸ್ವಾಮಿ ಹರಿಸೇವೆ ನಡೆಯಿತು. ಶ್ರೀ ವಿಷ್ಣುಮೂರ್ತಿ, ಪಾಷಣಮೂರ್ತಿ, ಧರ್ಮದೈವ(ರುದ್ರಚಾಮುಂಡಿ) ಪಂಜುರ್ಳಿ, ಪೋಟ್ಟ ದೈವ, ಗುಳಿಗ, ಗುರುಕಾರೋಣ ದೈವ, ಕೋಲ ನಡೆಯಿತು. ವಯನಾಟ್ಕುಲವನ್ ದೈವಸ್ಥಾನದಲ್ಲಿ ವಿವಿಧ ಪೂಜಾ ವಿಧಾನಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಡೆಕಲ್ಲು ಕುಟುಂಬದ ಯಜಮಾನರಾದ ರಾಮಣ್ಣ, ಆಡಳಿತಗಾರರಾದ ಬಿಪಿನ್, ವಾಸುದೇವ, ಗಂಗಾಧರ ಕುಟುಂಬದ ಹಿರಿಯರು ಗ್ರಾಮಸ್ಥರು ಹಾಜರಿದ್ದರು.