ಮಣಿಪಾಲ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ), ಕುಂದಾಪುರದ ಭಂಡಾರ್ಕರ್ಸ್ ಪಿಯು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಂಗವಾಗಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.
ಮಾಹೆ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಡಾ. ಪೂರ್ಣಿಮಾ ಪಿ. ಮುಖ್ಯ ಅತಿಥಿಯಾಗಿದ್ದರು. ಭಂಡಾರ್ಕರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಸರೋಜಾ ಮುಖ್ಯ ಅತಿಥಿಯಾಗಿದ್ದು, ಡಾ. ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು.ಮಾದಕ ದ್ರವ್ಯ ಸೇವನೆ ತಡೆಗಟ್ಟುವಿಕೆ ಮತ್ತು ಮಾದಕ ದ್ರವ್ಯ ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸಂವಾದಾತ್ಮಕ ಕಾರ್ಯಾಗಾರ ನಡೆಸಲಾಯಿತು. ದೃಶ್ಯ ಪ್ರಸ್ತುತಿ, ಚರ್ಚೆ ಮತ್ತು ಚಟುವಟಿಕೆಗಳ ಮೂಲಕ ಮಾದಕ ದ್ರವ್ಯ ಸೇವನೆ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಕಾನೂನು ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು, ಮಾಹೆಯ ಡಾ. ರಶ್ಮಿ ಯೋಗೇಶ್ ಪೈ, ಡಾ. ಅರವಿಂದ್ ಕುಮಾರ್ ಪಾಂಡೆ, ಡಾ. ರಾಯನ್, ಜೀವನ್, ಕರುಣಾ ಮತ್ತು ಅಚಲಾ ಅವರು ಭಾಗವಹಿಸಿದ್ದರು. ಕಾಲೇಜಿನ ಅತಿಥೇಯ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದರು.