ಪತ್ರಕರ್ತರ ಪರಂಪರಾವಲೋಕನ ಸಂಸ್ಥೆ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ 121ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಡಿ. 26ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಪತ್ರಕರ್ತರ ಪರಂಪರಾವಲೋಕನ ಸಂಸ್ಥೆ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ 121ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಡಿ. 26ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ ಅಧ್ಯಕ್ಷ ಡಿ. ಶಶಿಕುಮಾರ್ ತಿಳಿಸಿದ್ದಾರೆ.ಅಂದು ಪತ್ರಿಕಾ ಮಾಧ್ಯಮ ಅಂದು-ಇಂದು-ಮುಂದು ಕುರಿತು ವಿಚಾರಮಂಥನ, ಸಾಧಕ ಪತ್ರಕರ್ತರಿಗೆ ಅಭಿನಂದನೆ, ಸಮಾಜಮುಖಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಧ್ಯಕ್ಷತೆಯನ್ನು ಅಂಕಣಕಾರ ಬಿ.ಚಂದ್ರೇಗೌಡ ವಹಿಸುವರು. ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನೆರವೇರಿಸುವರು. ಅಕ್ಷರ ದೃಶ್ಯ ಹೊತ್ತಗೆಯನ್ನು ವಿಚಾರವಾದಿ ಕೆ.ಮಾಯಿಗೌಡ ಲೋಕಾರ್ಪಣೆ ಮಾಡುವರು. ಪತ್ರಿಕಾ ಮಾಧ್ಯಮ ಅಂದು-ಇಂದು-ಮುಂದು ಕುರಿತು ಕನ್ನಡ ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ವಿಚಾರಮಂಥನ ಮಾಡಲಿದ್ದಾರೆ.ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು, ವರದಿಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಎಸ್.ಮಣಿ, ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಕೌಡ್ಲೆ ಚನ್ನಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರಾಘವೇಂದ್ರ ಭಾಗವಹಿಸುವರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಶಾಸಕ ಪಿ.ರವಿಕುಮಾರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರು ಸಾಧಕ ಪತ್ರಕರ್ತರಾದ ಎಂ.ಎನ್.ಯೋಗೇಶ್, ಮೇಲುಕೋಟೆಯ ಸಂತಾನ್‌ರಾಮನ್ ಅವರನ್ನು ಅಭಿನಂದಿಸುವರು.ಪರಂಪರ ಪತ್ರಕರ್ತರ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು, ಉದಯಕಾಲ ಸಂಪಾದಕ ಕೆ.ಎನ್.ಪುಟ್ಟಲಿಂಗಯ್ಯ, ಬೆಳ್ಳೂರು ಕೆ.ಶ್ರೀನಿವಾಸ್, ಗಣಂಗೂರು ನಂಜೇಗೌಡ, ಚಿನಕುರಳಿ ಲೋಕೇಶ್, ಎಂ.ಅಫ್ರೋಜ್ ಖಾನ್, ಎಲ್.ಸಿದ್ದರಾಜು, ಎಸ್.ವೆಂಕಟೇಶ್, ಅರುಣ್‌ಕುಮಾರ್, ಮಾಗನೂರು ಶಿವಕುಮಾರ್, ಮಂಜುಳಾ ಕಿರುಗಾವಲು, ಆನಂದ, ಎಚ್.ಎಸ್.ಮಹೇಶ್, ಛಾಯಾಗ್ರಾಹಕ ಎಂ.ಬಿ.ಮಲ್ಲಿಕಾರ್ಜುನ, ಸಂಘಟಕ ಎಸ್.ನಾರಾಯಣ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದಿದ್ದಾರೆ.