ಲಾರಿ ಹಮಾಲರ ಸಂಘದಿಂದ ಕಾರ್ಮಿಕರ ದಿನಾಚರಣೆ

| Published : May 03 2024, 01:08 AM IST

ಲಾರಿ ಹಮಾಲರ ಸಂಘದಿಂದ ಕಾರ್ಮಿಕರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕೋರಿ ಚೌಕದಲ್ಲಿ ಜಿಲ್ಲಾ ಲಾರಿ ಹಮಾಲರ ಸಂಘದ ಸಿಐಟಿಯು ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಕೋರಿ ಚೌಕದಲ್ಲಿ ಜಿಲ್ಲಾ ಲಾರಿ ಹಮಾಲರ ಸಂಘದ ಸಿಐಟಿಯು ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ೧೮೮೬ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ ಹೇ ಮಾರ್ಕೆಟ್‌ ಚೌಕದಲ್ಲಿ ಕಾರ್ಮಿಕರು ಧರಣಿ ಕಾರ್ಯಕ್ರಮ ಮಾಡುತ್ತಿದ್ದರು. ಕಾರಣ ಅಲ್ಲಿಯ ಕಾರ್ಮಿಕರಿಗೆ ದಿನಕ್ಕೆ ೧೬ ತಾಸು ಕೆಲಸ ತೆಗೆದುಕೊಳ್ಳುತ್ತಿದ್ದರು. ಅದರ ವಿರುದ್ಧವಾಗಿ ಎಲ್ಲ ಕಾರ್ಮಿಕರು ಐಕ್ಯತೆಯಿಂದ ಹೇ ಮಾರ್ಕೆಟ್‌ನಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಕೆಲವು ಕಾರ್ಮಿಕರು ಪ್ರಾಣವನ್ನು ಕಳೆದುಕೊಂಡರು. ಅಂದಿನಿಂದ ಮೇ ೧ಅನ್ನು ಪ್ರಥಮವಾಗಿ ಕಾರ್ಮಿಕ ದಿನವೆಂದು ಆಚರಣೆ ಮಾಡುತ್ತ ಬರಲಾಗಿದೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಚೈತನ್ಯವಾಗಿದೆ. ಅದರಂತೆ ಮೇ ದಿನವನ್ನು ಕಾರ್ಮಿಕರ ಬೇಡಿಕೆಗಳು ಹೋರಾಟದ ಗುರಿಗಳನ್ನು ಇಟ್ಟುಕೊಂಡು ನಾವು ಮುಂದೆ ಸಾಗಬೇಕು ಎಂದರು.

ಅಪ್ಪಾಸಾಬ ಯರನಾಳ ಮಾತನಾಡಿದರು. ಅಧ್ಯಕ್ಷತೆ ಜಿಲ್ಲಾ ಲಾರಿ ಹಮಾಲರ ಸಂಘದ ಅಧ್ಯಕ್ಷ ಮೋಮಿನಸಾಬ ಮಮದಾಪೂರ ವಹಿಸಿದ್ದರು. ರವೀಂದ್ರ ಹಳಿಂಗಳಿ, ಸುನಂದಾ ನಾಯಕ, ಈರಣ್ಣ ಬೆಳ್ಳುಂಡಗಿ, ಸೋಮಪ್ಪ ಆಯಟ್ಟಿ, ಸಾಬು ಗೂಗದಡ್ಡಿ, ಹಮೀದ ಲೋಗಾಂವಿ, ಬಾಬು ಸೊನ್ನದ, ನಾಗು ಮುಂಜಾನಿ, ಮಳಸಿದ್ದ ನಾಯ್ಕೋಡಿ, ಸಂಗಪ್ಪ ಕಪಾಲಿ, ಮೋದಿನಸಾಬ ಮುಲ್ಲಾ, ಪರಸಪ್ಪ ತಳವಾರ, ಬಾಷಾಸಾಬ ಹೊನ್ನುಟಗಿ, ಬಾಷಾಸಾಬ ಹಿಪ್ಪರಗಿ, ರಾಜು ಮುಲ್ಲಾ ಮುಂತಾದವರು ಇದ್ದರು.