ಇಂದಿನಿಂದ ತಾಪಂನಲ್ಲಿ ಕಾನೂನು ಕಾರ್ಯಾಗಾರ

| Published : Sep 18 2025, 01:10 AM IST

ಇಂದಿನಿಂದ ತಾಪಂನಲ್ಲಿ ಕಾನೂನು ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಸೆ.18 ರಿಂದ 20 ರವರೆಗೆ ಕಾನೂನು ಕಾರ್ಯಾಗಾರವನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ ಎಂದು ವಕೀಲ ಸಂಘದ ಅಧ್ಯಕ್ಷ ಎಂ.ಪಿ.ಮೋಹನ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಸೆ.18 ರಿಂದ 20 ರವರೆಗೆ ಕಾನೂನು ಕಾರ್ಯಾಗಾರವನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ ಎಂದು ವಕೀಲ ಸಂಘದ ಅಧ್ಯಕ್ಷ ಎಂ.ಪಿ.ಮೋಹನ್ ತಿಳಿಸಿದ್ದಾರೆ.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಾಗಾರದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ನೆರವೇರಿಸುವರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್. ಎಸ್.ಮಿತ್ತಲಕೋಡ್, ಗುಬ್ಬಿ ನ್ಯಾಯಾಲಯದ ನಾಲ್ಕು ಕೋರ್ಟ್ ನ್ಯಾಯಾಧೀಶರಾದ ಅನುಪಮ.ಡಿ, ಪೂರ್ಣಿಮಾ ಕೆ ಯಾದವ್, ಎಂ.ಪಿ ಕಿರಣ್, ಮೇಧಾ ಪಿ. ಎಂ ರವರು ಉಪಸ್ಥಿತಿ ಇರುವರು. ಸೆ.18 ರಂದು ಸಂಪನ್ಮೂಲ ವ್ಯಕ್ತಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್ ಕುಮಾರ್ ರವರಿಂದ ನಿರ್ದಿಷ್ಟ ಪರಿಹಾರ ಕಾಯ್ದೆ ಬಗ್ಗೆ ಉಪನ್ಯಾಸ, 2.30ಕ್ಕೆ ಸಂಪನ್ಮೂಲ ವ್ಯಕ್ತಿ ನಿವೃತ್ತ ನ್ಯಾಯಮೂರ್ತಿ ವೆಂಕಟ ಸುದರ್ಶನ್ ರವರಿಂದ ಸ್ವತ್ತು ವರ್ಗಾವಣೆ ಅಧಿನಿಯಮದ ಬಗ್ಗೆ ಉಪನ್ಯಾಸ.ಸೆ. 19ರಂದು ಬೆಳಗ್ಗೆ 10.30 ಕ್ಕೆ ಸಂಪನ್ಮೂಲ ವ್ಯಕ್ತಿ ಸೈಬರ್ ಅಪರಾಧ ವಿಭಾಗದ ಉಪಾಧೀಕ್ಷಕ ಕೆ.ಎನ್. ಯಶವಂತ್ ಕುಮಾರ್ ರವರಿಂದ ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳು ಮತ್ತು ಅವುಗಳ ಪ್ರಸ್ತುತಿ, ಮಧ್ಯಾಹ್ನ 2.30ಕ್ಕೆ ಸಂಪನ್ಮೂಲವ್ಯಕ್ತಿ ಜೆ ಎಸ್ ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಕೆ .ಸುರೇಶ್ ರವರಿಂದ ಭಾರತೀಯ ನ್ಯಾಯ ಸಂಹಿತೆ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸೆ. 20 ರಂದು ಬೆಳಗ್ಗೆ 10.30ಕ್ಕೆ ಸಂಪನ್ಮೂಲ ವ್ಯಕ್ತಿ ಹಾಸನ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಆರ್.ರವಿಕುಮಾರ್ ರವರಿಂದ ಹಿಂದು ವಾರಸು ಕಾಯ್ದೆ, ಮಧ್ಯಾಹ್ನ 2.30ಕ್ಕೆ ಸಂಪನ್ಮೂಲ ವ್ಯಕ್ತಿ ಐದನೇ ಹೆಚ್ಚುವರಿ ನ್ಯಾಯಾಧೀಶರಾದ ಎಚ್. ಆರ್.ರವಿಕುಮಾರ್ ರವರಿಂದ ಯುವ ವಕೀಲರಿಗೆ ಕಾನೂನುಗಳ ಪಕ್ಷಿ ನೋಟದ ಬಗ್ಗೆ ಉಪನ್ಯಾಸ ಕಾರ್ಯಕ್ರಮ.ಇದೇ ದಿನ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮರವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ಎಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ವಕೀಲರು ಭಾಗವಹಿಸುವರು ಎಂದು ತಿಳಿಸಿದರು.