ವಿಶ್ವಕರ್ಮರು ವಿಶ್ವದ ಸೃಷ್ಟಿಕರ್ತರು

| Published : Sep 18 2025, 01:10 AM IST

ಸಾರಾಂಶ

ಶ್ವಕರ್ಮ ಸಮುದಾಯದವರು ತಮ್ಮ ಕಲೆಗಳ ಮೂಲಕ ಜಗತ್ತಿಗೆ ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಅವರು ವಿಶ್ವ ನಿರ್ಮಾತೃಗಳು ಎಂದು ಪುರಾಣ ಹೇಳುತ್ತದೆ,

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣವಿಶ್ವಕರ್ಮರನ್ನು ದೇವರುಗಳ ಶಿಲ್ಪಿ ಎಂದು ಪರಿಗಣಿಸಲಾಗುತ್ತದೆ. ವಿಶ್ವಕರ್ಮರು ಜಗತ್ತಿನ ಎಲ್ಲ ದೇವತೆಗಳನ್ನು ಮತ್ತು ಜೀವಿಗಳನ್ನು ಸೃಷ್ಟಿ ಮಾಡಿರುವುದರಿಂದ ಅವರನ್ನು ವಿಶ್ವದ ಸೃಷ್ಟಿಕರ್ತರು ಎಂದು ಕರೆಯುತ್ತಾರೆ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಲೋಕೇಶ್ ಹೇಳಿದರು.ತಾಲೂಕಿನ ಕುಂದನಹಳ್ಳಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ವಿಶ್ವಕರ್ಮ ಸಮುದಾಯದವರು ತಮ್ಮ ಕಲೆಗಳ ಮೂಲಕ ಜಗತ್ತಿಗೆ ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಅವರು ವಿಶ್ವ ನಿರ್ಮಾತೃಗಳು ಎಂದು ಪುರಾಣ ಹೇಳುತ್ತದೆ, ಆದರೆ ಪ್ರಸ್ತುತ ದಿನಗಳಲ್ಲಿ ವಿಶ್ವಕರ್ಮ ಜನಾಂಗದವರು ಪರಿಶ್ರಮದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಆರ್ಥಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಿದ್ದರೂ ಜಗತ್ತಿನಲ್ಲಿ ಸ್ನೇಹಮಯ ಜನಾಂಗವಿದ್ದರೆ ಅದು ವಿಶ್ವಕರ್ಮ ಜನಾಂಗ ಎಂದರು.ಸಂಘದ ಗೌರವಾಧ್ಯಕ್ಷ ನಾಗರಾಜ್ ಚಾರ್, ಉಪಾಧ್ಯಕ್ಷರಾದ ಸುರೇಶ್, ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮನುಕುಮಾರ್, ಕಾರ್ಯದರ್ಶಿ ಕೀರ್ತಿರಾಜ್, ಖಜಾಂಚಿ ರವಿ, ಸಂಘದ ಪದಾಧಿಕಾರಿಗಳಾದ ಗಿರೀಶ್, ವೀರಭದ್ರ ಚಾರ್, ಕೆ.ಕೆ. ರವಿ, ಮಧು, ಸುಬ್ರಹ್ಮಣ್ಯ ಚಾರ್, ಕುಮಾರ್, ಸುಬ್ರಹ್ಮಣ್ಯ, ನಾಗೇಶ್, ಮಂಜು ಇದ್ದರು.