ವರ್ಷವೆಂದರೆ ಮಳೆ; ವರ್ಷದಲ್ಲಿ ಹೆಚ್ಚೆಂದರೆ ಆರು ತಿಂಗಳು ಇದ್ದೀತು. ಆದರೆ ಅಶೋಕೆಯ ವಿವಿವಿಯ ಆವರಣದಲ್ಲಿ ವರ್ಷದ ಎಲ್ಲ ದಿನಗಳೂ ಸ್ವರವರ್ಷವೇ ಆಗುತ್ತದೆ.

ಸ್ವರಾತ್ಮಗುರುಕುಲದ ಮೊದಲ ವರ್ಷದ ವರ್ಧಂತ್ಯುತ್ಸವದ, ಸ್ವರವರ್ಷ ಸಭೆ

ಕನ್ನಡಪ್ರಭ ವಾರ್ತೆ ಗೋಕರ್ಣ

ವರ್ಷವೆಂದರೆ ಮಳೆ; ವರ್ಷದಲ್ಲಿ ಹೆಚ್ಚೆಂದರೆ ಆರು ತಿಂಗಳು ಇದ್ದೀತು. ಆದರೆ ಅಶೋಕೆಯ ವಿವಿವಿಯ ಆವರಣದಲ್ಲಿ ವರ್ಷದ ಎಲ್ಲ ದಿನಗಳೂ ಸ್ವರವರ್ಷವೇ ಆಗುತ್ತದೆ ಎಂದು ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಎರಡು ದಿನಗಳ ಕಾಲ ನಡೆದ ಸ್ವರಾತ್ಮಗುರುಕುಲದ ಮೊದಲ ವರ್ಷದ ವರ್ಧಂತ್ಯುತ್ಸವದ, ಸ್ವರವರ್ಷ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್‌ ಮೂಲಕ ಆರ್ಶೀವಚನ ನೀಡಿದರು. ಇಲ್ಲಿ ಎಲ್ಲ ಭಾರತೀಯ ಕಲೆಗಳ ರಕ್ಷಣೆ, ಪೋಷಣೆಯೂ ಆಗಬೇಕು. ತನ್ಮೂಲಕ ಮಕ್ಕಳ ಆತ್ಮವಿಕಾಸವಾಗಬೇಕು. ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಾಡಿನ ಪ್ರಸಿದ್ಧ ಹಿಂದೂಸ್ತಾನೀ ಗಾಯಕ ಪಂಡಿತ ಪರಮೇಶ್ವರ ಹೆಗಡೆ ಮಾತನಾಡಿ, ಸ್ವರಾತ್ಮಗುರುಕುಲವು ಒಬ್ಬ ಒಳ್ಳೆಯ, ಉತ್ಸಾಹಿಯ ಜವಾಬ್ದಾರಿಗೆ ನೀಡಲ್ಪಟ್ಟಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದೇವಶ್ರವ ದೈವರಾತ ಶರ್ಮ ಮಾತನಾಡಿದರು.

ವೇದಿಕೆಯಲ್ಲಿ ವಿವಿವಿಯ ಅಶೋಕಲೋಕದ ಶ್ರೀಸಂಯೋಜಕ ಶ್ರೀ ಮಂಜುನಾಥ ಭಟ್ ಸುವರ್ಣಗದ್ದೆ, ವಿದ್ಯಾಪರಿಷತ್ತಿನ ಸಂಯೋಜಕ ಡಾ. ಶ್ರೀ ಜಿ.ಎಲ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪರೀಕ್ಷೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಹಾಗೂ ರಾಜ್ಯ ಆಕಾಶವಾಣಿಯ ಉತ್ತಮ ಶ್ರೇಣಿಯ ಕಲಾವಿದರು ಹಾಗೂ ಈಗಾಗಲೇ ದೇಶದ ಹಲವೆಡೆಗಳಲ್ಲಿ ಕಚೇರಿ ನೀಡಿದ ಸ್ವರಾತ್ಮ ಗುರುಕುಲದ ಹಿರಿಯ ವಿದ್ಯಾರ್ಥಿಗಳನ್ನು ಪ್ರಶಸ್ತಿಯೊಂದಿಗೆ ಪ್ರೋತ್ಸಾಹಿಸಿದ ಪ್ರತಿಭಾ ಪುರಸ್ಕಾರ ಮಾಡಲಾಯಿತು. ನಂತರ ನಾಡಿನ ಖ್ಯಾತ ಗಾಯಕರುಗಳಾದ ಪಂಡಿತ ಪರಮೇಶ್ವರ ಹೆಗಡೆ, ಪಂಡಿತ ದತ್ತಾತ್ರೇಯ ಗಾಂವ್ಕರ್ ಅವರ ಗಾಯನ ನಡೆಯಿತು. ಇವರಿಗೆ ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ, ಹಾರ್ಮೋನಿಯಂನಲ್ಲಿ ಡಾ. ಹರೀಶ ಹೆಗಡೆ, ತಂಬೂರಾದಲ್ಲಿ ಶ್ರೀಧರ ಹೆಗಡೆ ಕಲಭಾಗ, ಕವಿತಾ ಹೆಗಡೆ ಸಾಥ್ ನೀಡಿದರು.