ಜಿಲ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞವೈದ್ಯ ಡಾ. ವೀರೇಶ ಮಾತನಾಡಿ, ಚರ್ಮ ಕಾಯಿಲೆಯನ್ನು ನಿಯಂತ್ರಿಸಲು ವೈಯಕ್ತಿಕ ಶುಚಿತ್ವವನ್ನು ಕಾಯ್ದುಕೊಂಡು, ಮನೆಯಲ್ಲಿ ಹಾಗೂ ಸಮುದಾಯದಲ್ಲಿ ಶುಚಿತ್ವವನ್ನು ಕಾಯ್ದುಕೊಳ್ಳಬೇಕು ಹಾಗೂ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕೆಂದರು.

ಗದಗ: ಎಚ್ಐವಿ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ಮನವಿ ಮಾಡಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ ಸಹಯೋಗದೊಂದಿಗೆ ಕೈದಿಗಳಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಚ್ಐವಿ ಹರಡುವ ವಿಧಗಳು ಹಾಗೂ ನಿಯಂತ್ರಿಸುವ ಮಾರ್ಗಗಳು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುವ ಎಲ್ಲ ಸೇವಾ ಸೌಲಭ್ಯಗಳನ್ನು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞವೈದ್ಯ ಡಾ. ವೀರೇಶ ಮಾತನಾಡಿ, ಚರ್ಮ ಕಾಯಿಲೆಯನ್ನು ನಿಯಂತ್ರಿಸಲು ವೈಯಕ್ತಿಕ ಶುಚಿತ್ವವನ್ನು ಕಾಯ್ದುಕೊಂಡು, ಮನೆಯಲ್ಲಿ ಹಾಗೂ ಸಮುದಾಯದಲ್ಲಿ ಶುಚಿತ್ವವನ್ನು ಕಾಯ್ದುಕೊಳ್ಳಬೇಕು ಹಾಗೂ ಪೌಷ್ಟಿಕ ಆಹಾರವನ್ನು ಸೇವೆನೆ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜೈಲರ್ ಅಧಿಕಾರಿ ಸುನಂದಾ ಮಾತನಾಡಿ, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳು ಹೇಳಿದಂತೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸ್ವಚ್ಛತೆ ಹಾಗೂ ಶಿಸ್ತಿನ ಜೀವನ ನಡೆಸಲು ಅಣಿಯಾಗಬೇಕೆಂದು ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಪ್ರವೀಣ ಅವರು, ಸುಮಾರು 18 ಸಂಶಯಾಸ್ಪದ ರೋಗಿಗಳಿಗೆ ಚರ್ಮರೋಗ ಹಾಗೂ ಲೈಂಗಿಕ ರೋಗದ ತಪಾಸಣೆ ಮಾಡಿದರು. ಶಿಬಿರದಲ್ಲಿ 38 ಜನರಿಗೆ ಎಚ್ಐವಿ, ಟಿಬಿ ಸಿಫಲೀಸ್, ಹೆಪಟೆಟಿಸ್ ಬಿ, ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.

ಈ ವೇಳೆ ಐಸಿಟಿಸಿ ಕೇಂದ್ರದ ಚೆನ್ನಮ್ಮ ಶ್ಯಾಡಲಗೇರಿ, ಮಂಜುನಾಥ ಅಂಗಡಿ, ಜಾನಕಿದೇವಿ ಕಳಸಾಪೂರ, ಸೌಮ್ಯ ರಾವ್, ರುದ್ರಮ್ಮ ಚಲವಾದಿ, ಸೋಮಶೇಖರ, ಶ್ರೀದೇವಿ, ಕುರುಬರ ಹಾಗೂ ಇನ್ನಿತರ ಸಿಬ್ಬಂದಿ ಇದ್ದರು.