ನಾವು ಭಾಷಾಂಧರಾಗದೇ ಎಲ್ಲರನ್ನೂ ಪ್ರೀತಿಸೋಣ: ಶಾಸಕ ಆರಗ ಜ್ಞಾನೇಂದ್ರ

| Published : Nov 23 2025, 01:45 AM IST

ನಾವು ಭಾಷಾಂಧರಾಗದೇ ಎಲ್ಲರನ್ನೂ ಪ್ರೀತಿಸೋಣ: ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಗೆ ಸರಿಯಾಗಿ ನೂರು ವರ್ಷ ತುಂಬಿದ್ದು, ಕನ್ನಡಿಗರಾದ ನಾವು ಭಾಷಾಂಧರಾಗದೇ ಎಲ್ಲರನ್ನೂ ಪ್ರೀತಿಸುವ ಹೃದಯವಂತಿಕೆಯನ್ನು ಹೊಂದಬೇಕಿದ್ದು, ಈ ದೇಶದ ಘನತೆಯನ್ನು ಎತ್ತಿ ಹಿಡಿಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಗೆ ಸರಿಯಾಗಿ ನೂರು ವರ್ಷ ತುಂಬಿದ್ದು, ಕನ್ನಡಿಗರಾದ ನಾವು ಭಾಷಾಂಧರಾಗದೇ ಎಲ್ಲರನ್ನೂ ಪ್ರೀತಿಸುವ ಹೃದಯವಂತಿಕೆಯನ್ನು ಹೊಂದಬೇಕಿದ್ದು, ಈ ದೇಶದ ಘನತೆಯನ್ನು ಎತ್ತಿ ಹಿಡಿಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಂಸ್ಕೃತಿ ವೇದಿಕೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣ ವ್ಯಾಪ್ತಿಯ ಶಾಲೆಗಳ ಸಂಯುಕ್ತ ಸಹಯೋಗದಲ್ಲಿ ಪಟ್ಟಣದ ಕುವೆಂಪು ವೃತ್ತದಲ್ಲಿ ಆಯೋಜಿಸಿದ್ದ ನಾಡಗೀತೆ ಸಮೂಹ ಗಾಯನದಲ್ಲಿ ಕುವೆಂಪು ಪ್ರತಿಮೆಗೆ ಹಾರ ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನಾಡಗೀತೆ ಮನರಂಜನೆಗಾಗಿ ಹಾಡುವ ಗೀತೆಯಲ್ಲ. ಕನ್ನಡ ಮತ್ತು ಭಾರತೀಯತೆಯ ಹೆಗ್ಗಳಿಕೆ ಪರಂಪರೆಯನ್ನು ಸಾರುವ ಗೀತೆಯಾಗಿದೆ. ನೆಲದ ಪಾವಿತ್ರ್ಯತೆಯನ್ನು ಎತ್ತಿ ಹಿಡಿದಿರುವ ಈ ಗೀತೆಯ ಆಶಯದಂತೆ ಪೂಜ್ಯ ಭಾವನೆಯಿಂದ ಕರ್ನಾಟಕ ಮಾತೆ ಭಾರತಮಾತೆಗೆ ಪುತ್ರಿ ಸಮಾನಳಾಗಿದ್ದು ಕನ್ನಡಿಗರಾದ ನಾವು ಭಾಷಾಂಧರಾಗದೇ ಎಲ್ಲರನ್ನೂ ಪ್ರೀತಿಸುವ ಹೃದಯವಂತಿಕೆಯನ್ನು ಹೊಂದಬೇಕಿದೆ. ವಂದೇಮಾತರಂ ಗೀತೆಗೂ 150 ವರ್ಷ ಪೂರ್ಣಗೊಂಡಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಸದಾಶಯದ ಮತ್ತು ಶ್ರೇಷ್ಠವಾದ ಮಧುರತೆಯ ನಾಡಗೀತೆ ಬೇರೆ ಇಲ್ಲ ಎಂದರು. ಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಕುವೆಂಪು ಜನಿಸಿದ ಮಣ್ಣಿನಲ್ಲಿ ಕೆಲಸ ಮಾಡುವ ಪುಣ್ಯ ದೊರೆತಿರುವುದು ಭಾಗ್ಯ ಎಂದರು.

ತಾಲೂಕು ಕನ್ನಡ ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷೆ ರೇಣುಕಾ ಹೆಗ್ಡೆ ಮತ್ತು ಪಧಾಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿರಾಜ್ ಮುಂತಾದವರು ಇದ್ದರು.