ನಿಗದಿತ ಜಾಗದಲ್ಲಿ ಸೋಲಾರ್ ಫೆನ್ಸಿಂಗ್ ನಿರ್ಮಾಣಕ್ಕೆ ಒತ್ತಾಯ

| Published : Nov 23 2025, 01:30 AM IST

ನಿಗದಿತ ಜಾಗದಲ್ಲಿ ಸೋಲಾರ್ ಫೆನ್ಸಿಂಗ್ ನಿರ್ಮಾಣಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರುಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದ ಪುನಗನಮಕ್ಕಿ-ಜುಲ್ಮನಹರಕ್ಕೆ ಮಂಜೂರಾಗಿರುವ ಸೋಲಾರ್ ಫೆನ್ಸಿಂಗ್ ಲೈನ್ ನಿಗದಿತ ಜಾಗದಲ್ಲೇ ನಿರ್ಮಿಸಲು ಒತ್ತಾಯಿಸಿ ಗ್ರಾಮಸ್ಥರು ಹೆಬ್ಬೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪುನಗನಮಕ್ಕಿ-ಜುಲ್ಮನಹರ ಗ್ರಾಮಕ್ಕೆ ಸೋಲಾರ್ ಫೆನ್ಸಿಂಗ್‌ಗೆ ಅನುದಾನ ಬಿಡುಗಡೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದ ಪುನಗನಮಕ್ಕಿ-ಜುಲ್ಮನಹರಕ್ಕೆ ಮಂಜೂರಾಗಿರುವ ಸೋಲಾರ್ ಫೆನ್ಸಿಂಗ್ ಲೈನ್ ನಿಗದಿತ ಜಾಗದಲ್ಲೇ ನಿರ್ಮಿಸಲು ಒತ್ತಾಯಿಸಿ ಗ್ರಾಮಸ್ಥರು ಹೆಬ್ಬೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

2025-26ನೇ ಸಾಲಿನ ಮಾನವ ಪ್ರಾಣಿ ಸಂಘರ್ಷ ತಡೆ ಯೋಜನೆಯಡಿ ಬಿದರೆ ಗ್ರಾಮದ ಪುನಗನಮಕ್ಕಿ-ಜುಲ್ಮನಹರ ಗ್ರಾಮಕ್ಕೆ ಸೋಲಾರ್ ಫೆನ್ಸಿಂಗ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಅನುದಾನದಲ್ಲಿ ಅಧಿಕಾರಿಗಳು ನಿಗದಿತ ಜಾಗದಲ್ಲಿ ಫೆನ್ಸಿಂಗ್ ನಿರ್ಮಿಸದೆ ಬಿದರೆ ಗ್ರಾಮದ ಸರ್ವೆ ನಂ.237ರ ಗೋಮಾಳ ಮೂಲಕ ಸೋಲಾರ್ ಫೆನ್ಸಿಂಗ್ ಹಾಕುತ್ತಿದ್ದಾರೆ.

ಬಿದರೆ ಗ್ರಾಮದ ಸರ್ವೆ ನಂ.237ರಲ್ಲಿ ಸರ್ಕಾರಿ ಶಾಲೆ, ವಸತಿ ನಿವೇಶನಗಳು, ಕಸ ವಿಲೇವಾರಿ ಘಟಕ, ಸಾರ್ವಜನಿಕ ಸ್ಮಶಾನ, ದೇವಸ್ಥಾನ ಮುಂತಾದ ಸೌಲಭ್ಯಗಳಿಗೆ ಜಮೀನಿ ಕಾಯ್ದಿರಿಸಲಾಗಿದೆ. ಈ ಪ್ರದೇಶದಲ್ಲಿ ಸೋಲಾರ್ ಫೆನ್ಸಿಂಗ್ ನಿರ್ಮಿಸಿದರೆ ಸರ್ಕಾರಿ ಮತ್ತು ಸಾರ್ವಜನಿಕ ಸೌಲಭ್ಯಗಳಿಗೆ ಅಡಚಣೆಯಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸರ್ವೆ ನಂ.237ರಲ್ಲಿ ಕಾಡಾನೆ ಅಥವಾ ಬೇರೆ ಯಾವುದೇ ಕಾಡುಪ್ರಾಣಿಗಳ ಉಪಟಳ ಇಲ್ಲದಿರುವ ಸೋಲಾರ್ ಫೆನ್ಸಿಂಗ್ ನಿರ್ಮಾಣ ಮಾಡುವ ಅವಶ್ಯಕತೆಯಿಲ್ಲ. ಇಲ್ಲಿ ಫೆನ್ಸಿಂಗ್ ಮಾಡುವುದರಿಂದ ಸರ್ಕಾರಿ ಹಣ ಅನಾವಶ್ಯಕವಾಗಿ ವ್ಯಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ವ್ಯಾಪ್ತಿಯಿಂದ ಕೈಬಿಡಬೇಕು.

ಬಿದರೆ ಗ್ರಾಮದಲ್ಲಿ ಸೋಲಾರ್ ಫೆನ್ಸಿಂಗ್ ಅವಶ್ಯಕತೆಯಿದ್ದಲ್ಲಿ ಕ್ರಿಯಾ ಯೋಜನೆಯಲ್ಲಿ ಗುರುತಿಸಿ ನಿಗದಿಪಡಿಸಿದ ಪುನಗನಮಕ್ಕಿ-ಜುಲ್ಮನಹರದವರೆಗೆ ಮಾತ್ರ ನಿರ್ಮಿಸಬೇಕು. ಸ.ನಂ.237ರಲ್ಲಿ ಹೊಸದಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಪ್ರಸ್ತಾವನೆಯನ್ನು ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಂತರ ಅರಣ್ಯ ಗಡಿ ಗುರುತಿಸಿ ಕಂದಾಯ ಭೂಮಿ ಹೊರತುಪಡಿಸಿ ಅನುಷ್ಠಾನಗೊಳಿಸಲು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗ್ರಾಮದ ಪ್ರಮುಖರಾದ ಜಯಶೀಲ್, ಪೂರ್ಣೇಶ್ ಉಜ್ಜಿನಿ, ಸಂದೇಶ್, ಜಯ, ಯು.ಪಿ.ಗೋಪಾಲ, ಜಯರಾಮ್, ಸಿದ್ದಯ್ಯ, ಪರಮೇಶ, ವೀರಪ್ಪಶೆಟ್ಟಿ, ಯು.ಆರ್.ಮಂಜುನಾಥ, ಹೂವಪ್ಪಗೌಡ, ನರಸಿಂಹಮೂರ್ತಿ, ವೀರಭದ್ರಯ್ಯ, ನಿರಂಜನ, ಸುರೇಶ್, ಅರುಣ್ ಆಚಾರ್ಯ, ಶೇಷಪ್ಪಶೆಟ್ಟಿ ಮತ್ತಿತರರು ಹಾಜರಿದ್ದರು.೨೨ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಮದ ಸ.ನಂ.237ರಲ್ಲಿ ಸೋಲಾರ್ ಫೆನ್ಸಿಂಗ್ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಹೆಬ್ಬೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.