ಸಾರಾಂಶ
ನಾವು ಬೆಳೆದು ಉನ್ನತ ಹುದ್ದೆಯನ್ನು ಅಲಂಕರಿಸಿದರು ನಾವು ಓದಿದ ಮತ್ತು ಬೆಳೆದ ಗ್ರಾಮ, ಶಾಲೆಗಳನ್ನು ಮರೆಯಬಾರದು ಎಂದು ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ನಾವು ಬೆಳೆದು ಉನ್ನತ ಹುದ್ದೆಯನ್ನು ಅಲಂಕರಿಸಿದರು ನಾವು ಓದಿದ ಮತ್ತು ಬೆಳೆದ ಗ್ರಾಮ, ಶಾಲೆಗಳನ್ನು ಮರೆಯಬಾರದು ಎಂದು ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ಹೇಳಿದರು.ತಾಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೆಪಿಎಸ್ ಶಾಲೆ ಎಚ್ ಪಿ ಎಸ್ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ವತಿಯಿಂದ ಏರ್ಪಡಿಸಿದ್ದ ಶತಮಾನೋತ್ಸವ ಹಾಗೂ ಗುರುವಂದನಾ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಸಮಗಮ, ಶಾಲಾ ಮಕ್ಕಳಿಂದ ಕಲಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಎಷ್ಟೇ ಬೆಳೆದರೂ ನಾವು ತಿರುಗಿ ನೋಡಿದಾಗ ಮಾತ್ರ ಗ್ರಾಮ ಅಭಿವೃದ್ಧಿ ಯಾಗುತ್ತದೆ. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಸಂಘ ರಚನೆ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿರುವುದು ಸಂತೋಷದಾಯಕ. ಸಿ ಎಸ್ ಪುರದಲ್ಲಿ ಸಂಸ್ಕಾರ ಕಲಿತಿರುವುದರಿಂದ ನಾನು ಉನ್ನತಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಶಾಸಕರ ಸಹಕಾರ ಪಡೆದು ಈ ಶಾಲೆಯನ್ನು ಇನ್ನು ಉನ್ನತ ಮಟ್ಟಕ್ಕೆ ಸಂಗವು ಕೊಂಡೊಯ್ಯಬೇಕು ಎಂದು ತಿಳಿಸಿದರು.ಶಾಸಕ ಎಂ.ಟಿ ಕೃಷ್ಣಪ್ಪ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ರಾಜಕೀಯ ಬಿಟ್ಟು ಅನುದಾನ ತಂದು ಅಭಿವೃದ್ಧಿ ಮಾಡಬೇಕು. ಶಿಕ್ಷಕರನ್ನು ದೇವರ ರೀತಿ ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿರುವುದು ನಾವು ಶಿಕ್ಷಕ ಸಮುದಾಯಕ್ಕೆ ಸಲ್ಲಿಸಿದ ಗೌರವ ಎಂದರು.
ನಿವೃತ್ತಿ ಹೊಂದಿದ ಶಿಕ್ಷಕರನ್ನು ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ನಂತರ ಅಭಿನಂದನೆ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ಎಸ್.ಗಿರೀಶ್, ಗೌರವಾಧ್ಯಕ್ಷ ಎಂಡಿ ನಯಾಜ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಮಧುಸೂಧನ್ , ಕೆ.ಎಸ್.ಲೋಕೇಶ್ ,ಸಿಆರ್ ಪಿ ಶೀಲಾ ಡಿ.ಎಸ್. ಚನ್ನೇನಹಳ್ಳಿ ನರಸಿಂಹಮೂರ್ತಿ, ನಾಗರಾಜು,ಗೋಪಾಲಕೃಷ್ಣ, ಸುರೇಶ್, ವಕೀಲ ಜಗದೀಶ್, ವೆಂಕಟಾಚಲಯ್ಯ, ಗೋವಿಂದರಾಜು, ಬಿ.ಎಸ್ ಗಂಗಮ್ಮ,ಅನಂತರಾಮು, ಜಗದೀಶ್ ಶೆಟ್ಟರು.