ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯನವರದ್ದು ಅತಿಯಾಯ್ತು. ಮುಸ್ಲಿಮರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಂಡಂತೆ ಹಿಂದೂಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಿ. ಈ ಮೂಲಕ ಜಾತ್ಯಾತೀತ ಎಂದು ಎಲ್ಲರನ್ನೂ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕಲಬುರಗಿ ಜಿಲ್ಲೆ ಆಳಂದದ ಲಾಡ್ಲೆ ಮಷಾಕ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ವರ್ಷಕ್ಕೆ ಪ್ರಕರಣವನ್ನು ಹಿಂಪಡೆದ ಸರ್ಕಾರದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಪ್ರಕರಣಗಳನ್ನು ಕ್ಯಾಬಿನೆಟ್‌ನಲ್ಲಿ ಸರ್ಕಾರ ಹಿಂಪಡೆದಿದ್ದು, ಇದು ಸಿದ್ದರಾಮಯ್ಯರ ಅತಿರೇತಕದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.ಇಟಲಿ ಪ್ರಧಾನಿ ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಚಾಕೋಲೇಟ್ ನೀಡಿದ ವಿಚಾರವಾಗಿ ಕಾಂಗ್ರೆಸ್ ನಾಯಕರಿಂದ ವಿರೋಧ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಯತ್ನಾಳ ಟೀಕೆ ಮಾಡಿದರು. ರಾಹುಲ್ ಗಾಂಧಿ ಜೋಕರ್‌, ತಲೆನೂ ಇಲ್ಲಾ ಡಿಗ್ನಿಫೈ ಇಲ್ಲ. ಮೋದಿ ಅವರು ಪಾರ್ಲೆ ಕಂಪನಿ ಚಾಕೊಲೇಟ್ ಕೊಟ್ಟಿದ್ದು ತಪ್ಪಲ್ಲ. ರಾಜೀವ್ ಗಾಂಧಿಯಂತೆ ಇಂಡಿಯನ್ ನೇವಿ ಹಡಗಿನಲ್ಲಿ ದೇಶದ್ರೋಹಿಗಳ ಜೊತೆ ಪಾರ್ಟಿ ಮಾಡಿಲ್ಲ. ಗಾಂಧಿ ಹತ್ಯೆಯಾದಾಗ ನೆಹರು ನಮ್ಮ ಮನೆಯಲ್ಲಿ ನನ್ನ ತಾಯಿ ಜೊತೆಗಿದ್ದ ಎಂದು ಮೌಂಟ್ ಬ್ಯಾಟನ್ ಮಗಳು ಬರೆದಿದ್ದಾಳೆ ಎಂದು ಟೀಕಿಸಿದರು.

ಸಂಸತ್ತಿಗೆ ಹೇಗೆ ಬರಬೇಕೆಂದು ರಾಹುಲ್ ಗಾಂಧಿಗೆ ಗೊತ್ತಿಲ್ಲ. ಎಂತೆಂಥ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ. ಪಟೇಲ್ ಶಾಸ್ತ್ರಿಯವರಂತ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ.ದೇಶದ ಪ್ರಾಡೆಕ್ಟ್ ಆಗಿರುವ ಪಾರ್ಲೆಯನ್ನು ಇಟಲಿ ಪ್ರಧಾನಿಗೆ ಕೊಟ್ಟಿದ್ದಾರೆ. ಇಟಲಿ ಪ್ರಧಾನಿಯೇ ಮೋದಿ ಪರಿಶ್ರಮಿ ಎಂದಿದ್ದಾರೆ. ಶರದ್ ಪವಾರ ಸಹ ಮೋದಿ ಪರ ಮಾತನಾಡಿದ್ದಾರೆ. ಪ್ರಧಾನಿ ಮೋದಿ ವಿದೇಶ ಪ್ರವಾಸ ಅಪಮಾನ ಮಾಡಬಾರದು ಎಂದಿದ್ದಾರೆ. ದೇಶಕ್ಕೆ ಅನಕೂಲವಾಗಲೆಂದು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಚೋಳರ ಕಾಲದ ಕುರುಹು ಇಟಲಿಯಲ್ಲಿ ಪತ್ತೆ ಆಗಿದೆ, ಮೋದಿಗೆ ಚೋಳ ರಾಜನ ಇತಿಹಾಸ ಕುರಿತು ಮಾಹಿತಿ ನೀಡಿದ್ದಾರೆ. ಇಟಲಿಯಲ್ಲಿ ಚೋಳ ರಾಜ ಕಟ್ಟಿದ ದೇವಾಲಯವಿದೆ ಎಂದು ಹೇಳಿದರು.

ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಚಲನ ವಿಚಾರವಾಗಿ ಪ್ರತಿಕ್ರಿಯಿಸಿ, ತಾಂತ್ರಿಕವಾಗಿ ಏನನ್ನಾದರೂ ಮಾಡಬಹುದು. ಕಾಕ್ರೋಚ್‌ ಪಾರ್ಟಿ ವ್ಯವಸ್ಥಿತವಾಗಿ ದೇಶವನ್ನು ಅತಂತ್ರ ಮಾಡಬೇಕೆಂಬುದಿದೆ. ಪ್ರಧಾನಿ ಮೋದಿಯವರನ್ನು ಕೆಳಗಿಳಿಸೋ ಉದ್ದೇಶವಾಗಿದೆ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗೋದನ್ನು ತಡೆಯಬೇಕೆಂಬ ಉದ್ದೇಶವಿದೆ. ರಾಹುಲ್ ಗಾಂಧಿ ಚೀನಾದ ಏಜೆಂಟ್ ರೀತಿ ಇದ್ದಾನೆ. ಪಾಕಿಸ್ತಾನ ಪರ ಮಾತನಾಡಿದ್ದಾನೆ. ಕಾಂಗ್ರೆಸ್ ದೇಶದ್ರೋಹದ ಪಕ್ಷವಾಗಿದೆ. ಎಡಪಂಥೀಯರು ಕಮ್ಯುನಿಷ್ಟರಿಗೆ ದೇಶದ ಬೆಳವಣಿಗೆ ನೋಡಲು ಆಗುತ್ತಿಲ್ಲ. ಕಾಕ್ರೋಚ್‌ ಜನತಾ ಪಾರ್ಟಿಗೆ ಪಾಕಿಸ್ತಾನದವರು ಸದಸ್ಯರಾದರೆ ಭಾರತಕ್ಕೇನು ಸಂಬಂಧ?, ಪಾಕಿಸ್ತಾನದಲ್ಲೇ ತಿನ್ನೋಕೆ ಆಹಾರವಿಲ್ಲ. ಪಾಕಿಸ್ತಾನದಲ್ಲಿನ ಪ್ರದೇಶಗಳಿಗೆ ಹಿಂದೂಗಳ ಹೆಸರು ಇಡುತ್ತಿದ್ದಾರೆ. ವರ್ಡ್ ಹೆರಿಟೇಜ್ ನ ಹಣ ಹೊಡೆಯೋಕೆ ಪಾಕ್ ನಲ್ಲಿ ಹಿಂದೂ ಹೆಸರು ಇಡುತ್ತಿದ್ದಾರೆ ಎಂದು ಆರೋಪಿಸಿದರು.


ರಾಜ್ಯ ಬಿಜೆಪಿ ಅಧ್ಯಕ್ಷ ಬದಲಾವಣೆ ವಿಚಾರವಾಗಿ ಮಾತನಾಡಿ, ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಲು ಕೇಂದ್ರ ಬಿಜೆಪಿ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮನವಾಗಿದೆ. ರಾಜ್ಯಕ್ಕೆ ಆಗಮಿಸಿದ ವೀಕ್ಷಕರು 35 ಜನರ ಜೊತೆಗೆ ಮಾತನಾಡಿದ್ದಾರೆ, ಹಾಗೆ ಮಾಡಬಾರದು. ಹಾಲಿ ಶಾಸಕರು, ಸಂಸದರನ್ನು ಮಾತನಾಡಿಸಬೇಕು. ಎಲ್ಲರ ಅಭಿಪ್ರಾಯ ಪಡೆದು ಸರ್ವೇ ಮಾಡಬೇಕು ಎಂದರು.

ಪಶ್ಚಿಮ ಬಂಗಾಲದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಸಿಎಂ ಆಗಿದ್ದರೆ ಬಾಂಗ್ಲಾದ ಭಾಗ ಆಗುತ್ತಿತ್ತು. ಮುಸ್ಲಿಂ ತುಷ್ಟೀಕರಣ ಪಶ್ಚಿಮ ಬಂಗಾಲದಲ್ಲಿ ಹೆಚ್ಚಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದರು. ಅದೇ ರೀತಿ ಕರ್ನಾಟಕದಲ್ಲಿಯೂ ಆಗುತ್ತಿದೆ. ಇಲ್ಲಿ ಸಿದ್ದರಾಮಯ್ಯನವರದ್ದು ಅತೀಯಾಯ್ತು. ಕೇಂದ್ರ ಸಚಿವರ ಕಾರಿನ ಮೇಲೆ ಕಲ್ಲು ತೂರಿದವರನ್ನು, ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆ ಮಾಡಿದವರ ಕೇಸ್ ವಾಪಸ್ ತೆಗೆದುಕೊಂಡರೆ ಹೇಗೆ?. ಇದರಿಂದ ರಾಜ್ಯದಲ್ಲಿ ಅರಾಜಕತೆ ಆಗುತ್ತದೆ. ಮುಂದಿನ 2028ರ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ನ್ನು ಬುಡಸಮೇತ ಕಿತ್ತೊಗೆಯುತ್ತಾರೆ.

- ಬಸನಗೌಡ ಪಾಟೀಲ ಯತ್ನಾಳ, ಶಾಸಕ