ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡಪರ ಸಂಘಟನೆಗಳು ಕೇವಲ ನ. 1ರ ಕರ್ನಾಟಕ ರಾಜ್ಯೋತ್ಸವಕ್ಕೆ ಸೀಮಿತವಾಗದೇ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸೋಣ. ಜಿಲ್ಲಾ ಸಾಹಿತ್ಯ ಸಮ್ಮೇಳ ಸೇರಿದಂತೆ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಕನ್ನಡದ ತೇರುವ ಎಳೇಯಬೇಕು ಎಂದು ಅಂದುಕೊಂಡಿದ್ದೇನೆ. ಅದಕ್ಕೆವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷರ ಹಾಗೂ ಸದಸ್ಯರ ಹಿರಿಯ ಅಭಿಪ್ರಾಯ ಪಡೆಯುವುದು ಅತ್ಯವಶ್ಯಕವಾಗಿದೆ ಎಂದು ಕಸಾಪ ತಾಲೂಕು ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಹಾಗೂ ಕಾರ್ಯಕರ್ತರು, ಸಾಹಿತಿಗಳ ಸಮಾಲೋಚನೆ ಸಭೆ ನಡೆಸಲಾಯಿತು. ಸಭೆಯಲ್ಲಿ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ, ಶಿಕ್ಷಕ ಹಾಗೂ ಹಿರಿಯ ಸಾಹಿತಿ ಶಿವಕುಮಾರ ಹಡಪದ, ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ರಾಜುಗೌಡ ತುಂಬಗಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಲ್ಲನಗೌಡ ಗಂಗನಗೌಡರ, ಹಿರಿಯ ಸಾಹಿತಿ ಬಿ.ವಿ ಕೋರಿ, ಪುಂಡಲೀಕ ಮುರಾಳ, ಸೇರಿದಂತೆ ಅನೇಕರು ಮಾತನಾಡಿ, ಈ ಹಿಂದೆ ತಾಲೂಕಿನಲ್ಲಾಗಲಿ ಅಥವಾ ಜಿಲ್ಲೆಯಲ್ಲಾಗಲಿ ಕನ್ನಡ ಸಾಹಿತ್ಯ ಪರಿಷತ್ ಕೇವಲ ಪದಾಧಿಕಾರಿಗಳಿಗೆ ಸೀಮಿತವಾಗಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸುತ್ತಿತ್ತು. ಆದರೇ, ಕನ್ನಡದ ಯಾವ ಕಾರ್ಯಕ್ರಮಗಳಿಗೆ ಸರಿಯಾಗಿ ನಮಗೆ ಆಮಂತ್ರಣ ಸಿಗದೇ ಅಗೌರವದಿಂದ ಕಾಣಲಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯ ಮುದ್ದೇಬಿಹಾಳ ತಾಲೂಕಾ ಕಸಾಪ ನೂತನ ಅಧ್ಯಕ್ಷರಾಗಿರುವ ಕಾಮರಾಜ ಬಿರಾದಾರವರು ಪ್ರತಿ ನಿತ್ಯ ಸಾಹಿತ್ಯ ಚಟುವಟಿಕೆಯಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ತಾಲೂಕಿನ ಹಿರಿಯ ಸಾಹಿತಿಗಳ, ಚಿಂತಕರ, ಕನ್ನಡಾಸಕ್ತರ, ಪಟ್ಟಣದ ಗಣ್ಯರ ಮಾಧ್ಯಮದವರ ಸಭೆ ನಡೆಸಿ ಎಲ್ಲ ಹಿರಿಯರ ವಿಶ್ವಾಸದೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ನ್ನು ತಾಲೂಕಿನಲ್ಲಿ ಹೇಗೆಲ್ಲ ಕಟ್ಟಬೇಕು ಕನ್ನಡವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಅವರ ಅಭಿಪ್ರಾಯ ಸಂಘ್ರಹಿಸಿ ಮುನ್ನಡೆಯುತ್ತಿದ್ದಾರೆ. ಅವರ ನಡೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ತಾಲೂಕ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಎಲ್ಲ ಹಿರಿಯರು ಹಾಗೂ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರು ನನ್ನನ್ನು ಅಧ್ಯಕ್ಷರೆಂದು ಘೋಷಣೆ ಮಾಡಿದ ಕೂಡಲೇ ನಾನೇ ಆಶ್ಚರ್ಯಚಕಿತಗೊಂಡೆ ಎಂದು ಹೇಳಿದರು. ಅಲ್ಲದೇ, ಕನ್ನಡ ಸೇವೆಗೆ ತಾನು ಶ್ರಮಿಸುತ್ತೆನೆ ಎಂದು ಹೇಳಿದರು.ಈ ವೇಳೆ ಹಿರಿಯ ಮುಖಂಡ ವೈ.ಎಚ್.ವಿಜಯಕರ, ರಾಚಯ್ಯ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಕರವೇ ನಾರಾಯಣಗೌಡರ ಬಣದ ಅಧ್ಯಕ್ಷ ರಫೀಕ ಕೊಡಗಲಿ, ಮಹಾಂತೇಶ ಬೂದಿಹಾಳ, ರಫೀಕ ತೆಗ್ಗಿಮನಿ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಆರ್.ಮುಲ್ಲಾ, ಸದಾಶಿವ ಮಠ, ಸಂಗಣ್ಣ ಮೇಲಿನಮನಿ, ಶ್ರೀಶೈಲ ಪೂಜಾರಿ, ಹುಸೇನ ಮುಲ್ಲಾ, ಹಸೇನ ಕಾಳಗಿ, ಅಮರೇಶ ಗೂಳಿ, ಅಶೋಕ ಚೆಟ್ಟೇರ ಸೇರಿದಂತೆ ಹಲವರು ಇದ್ದರು.
----------------------------------------ಬಾಕ್ಸ್
ಕನ್ನಡ ಬೆಳೆಸುವ ತೀರ್ಮಾಣಇಂದು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಕಗ್ಗೊಲೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ, ಕನ್ನಡ, ನೆಲ, ಜಲ, ಭಾಷೆ ರಕ್ಷಣೆಗೆ ನಾವೆಲ್ಲರೂ ಸದಾ ಟೊಂಕಕಟ್ಟಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕವಿಗೋಷ್ಠಿಗಳನ್ನು ನಡೆಸಬೇಕಿದ್ದು, ತಾಲೂಕಿನಲ್ಲಿ ನಿರ್ಲಕ್ಷ್ಯಕ್ಕೊಳಗಾದ ಯುವ ಸಾಹಿತಿಗಳನ್ನು ಗೌರವಿಸುವಂತಾಗಬೇಕು, ದತ್ತಿಗಳನ್ನು, ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು. ಜೊತೆಗೆ ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಎಲ್ಲ ಕನ್ನಡ ಕಾರ್ಯಕ್ರಮಗಳಿಗೆ ತನು, ಮನ, ಧನದಿಂದ ಪ್ರಾಮಾಣಿಕವವಾಗಿ ಕೈಜೋಡಿಸಿ ಕನ್ನಡ ಬೆಳೆಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.