ಗ್ರಂಥಾಲಯಗಳು ಜ್ಞಾನದೇಗುವಿದ್ದಂತೆ

| Published : Nov 17 2024, 01:15 AM IST

ಸಾರಾಂಶ

ಗ್ರಂಥಾಲಯ ಹಲವಾರು ಓದುಗರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತ ವಾದ ಪುಸ್ತಕಗಳು ಲಭ್ಯವಿದೆ, ಹಾಗೂ ಮಕ್ಕಳಿಗಾಗಿ ಸಣ್ಣ ಕತೆ, ಕಾದಂಬರಿಗಳು, ಇನ್ನೂ ಹಲವಾರು ವಿವಿಧ ರೀತಿಯ ಮಹಾನ್ ಲೇಖಕರುಗಳ ಕೃತಿಗಳು ಇದ್ದು ಈ ಪುಸ್ತಕಗಳನ್ನು ಓದಿ ಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಂಥಾಲಯಗಳು ಎಲ್ಲಾ ವರ್ಗದ ಜನರಿಗೆ ಜ್ಙಾನ ದೇಗುಗಳವಿದ್ದಂತೆ. ಪ್ರತಿ ಗ್ರಾಮದಲ್ಲೂ ಗ್ರಂಥಾಲಯಗಳನ್ನು ಸರ್ಕಾರ ಆರಂಭಿಸುವ ಮೂಲಕ ಬಡ ಮಕ್ಕಳ ಜ್ಙಾನಾರ್ಜನೆ ಹೆಚ್ಚಿಸಬೇಕೆಂದು ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ ವಿ.ಲಕ್ಷ್ಮಯ್ಯ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಗೌತಮ್‌ನಗರದಲ್ಲಿರುವ ಕೊಳಚೆ ಪ್ರದೇಶ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹರಾದ ಎಸ್.ಆರ್.ರಂಗನಾಥನ್ ರವರ ನೆನಪುಗಳೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ರಾಜ್ಯ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ ವಿ.ಲಕ್ಷ್ಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು. ಪುಸ್ತಕ ಓದಿ ಜ್ಞಾನ ಬೆಳೆಸಿಕೊಳ್ಳಿ

ಗ್ರಂಥಾಲಯ ಹಲವಾರು ಓದುಗರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತ ವಾದ ಪುಸ್ತಕಗಳು ಲಭ್ಯವಿದೆ, ಹಾಗೂ ಮಕ್ಕಳಿಗಾಗಿ ಸಣ್ಣ ಕತೆ, ಕಾದಂಬರಿಗಳು, ಸಂಶೋಧನಾ ಪ್ರಬಂಧಗಳು, ಕವನ ಸಂಕಲನಗಳು ಇನ್ನೂ ಹಲವಾರು ವಿವಿಧ ರೀತಿಯ ಮಹಾನ್ ಲೇಖಕರುಗಳ ಕೃತಿಗಳು ಇದ್ದು ಈ ಪುಸ್ತಕಗಳನ್ನು ಓದಿ ಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಗ್ರಂಥಾಲಯ ಬಳಸಿಕೊಳ್ಳಿ

ಗ್ರಂಥಾಲಯದ ಮೇಲ್ವಿಚಾರಕರು ಆದ ವಿ.ರಾಮಕ್ಕ ಅವರು ಮಾತನಾಡಿ, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಂದರ್ಭದಲ್ಲಿ ಪುಸ್ತಕಗಳ ಪ್ರದರ್ಶನ ವನ್ನು ಏರ್ಪಡಿಸಲಾಗಿದ್ದು ಈ ಗ್ರಂಥಾಲಯದಲ್ಲಿರುವ ವಿವಿಧ ರೀತಿಯ ಪುಸ್ತಕಗಳ ಪ್ರಯೋಜನ ಪಡೆದು ಕೊಳ್ಳಬೇಕೆಂದರು ಹಾಗೂ ಪುಸ್ತಕಗಳನ್ನು ಎರವಲು ನೀಡಲಾಗುವುದು ಎಂದು ಗ್ರಂಥಾಲಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಓದುಗರಿಗೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟಾಚಲಪತಿ, ಉಪೇಂದ್ರ, ವೇಲು, ಶ್ರೀನಿವಾಸ್, ಓದುಗರಾದ ಮುನಿರಾಜ್, ತಿಮ್ಮಕ್ಕ, ನೀಲಮ್ಮ, ಮಂಜುಳ, ಇದ್ದರು.