ಸಾರಾಂಶ
ಜೀವವಿಮಾ ಪ್ರತಿನಿಧಿಗಳ ಅಧಿಕಾರಿಗಳ ತಂಡ ಅರಸೀಕೆರೆ ಶಾಖೆಗೆ ಭೇಟಿ ನೀಡಲು ಹೊರಟಿದ್ದಾಗ ಮಾರ್ಗ ಮಧ್ಯೆ ಪಟ್ಟಣದ ಸಮೀಪವಿರುವ ಬರಗೂರಿನಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸ್ವಾಗತ ಕೋರಿ ಪೂಜೆ ಸಲ್ಲಿಸಿದ ನಂತರ ಸನ್ಮಾನಿಸಿದರು. ನಮ್ಮ ಚನ್ನರಾಯಪಟ್ಟಣ ಶಾಖೆಗೆ ಸ್ವಂತ ಕಟ್ಟಡ ಬೇಕೆಂದು ಚರ್ಚಿಸಿದಾಗ ಜಾಗ ಗುರುತಿಸಿ ಶೀಘ್ರದಲ್ಲಿಯೇ ತಮ್ಮ ಬೇಡಿಕೆ ನೆರವೇರಿಸೋಣ. ಈ ಬಾರಿ ಶಾಖೆ ಉತ್ತಮ ಸಾಧನೆ ಮಾಡಿದರೆ ಮುಂದಿನ ಬಾರಿ ಸಾಧನೆಯ ಯಶಸ್ಸನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಹಿರಿಯ ವಿಭಾಗಧಿಕಾರಿಗಳಾದ ಎಂ. ಕೃಷ್ಣವೇಣಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತೀಯ ಜೀವ ವಿಮಾ ನಿಗಮದ ಕೇಂದ್ರೀಯ ಕಚೇರಿ ಮುಂಬೈನ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಾಟ್ನಾಯಕ್ ಅವರ ತಂಡವನ್ನು ಪಟ್ಟಣದ ಭಾರತೀಯ ಜೀವ ನಿಗಮದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಸ್ವಾಗತಿಸಿತು.ಜೀವವಿಮಾ ಪ್ರತಿನಿಧಿಗಳ ಅಧಿಕಾರಿಗಳ ತಂಡ ಅರಸೀಕೆರೆ ಶಾಖೆಗೆ ಭೇಟಿ ನೀಡಲು ಹೊರಟಿದ್ದಾಗ ಮಾರ್ಗ ಮಧ್ಯೆ ಪಟ್ಟಣದ ಸಮೀಪವಿರುವ ಬರಗೂರಿನಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸ್ವಾಗತ ಕೋರಿ ಪೂಜೆ ಸಲ್ಲಿಸಿದ ನಂತರ ಸನ್ಮಾನಿಸಿದರು. ನಮ್ಮ ಚನ್ನರಾಯಪಟ್ಟಣ ಶಾಖೆಗೆ ಸ್ವಂತ ಕಟ್ಟಡ ಬೇಕೆಂದು ಚರ್ಚಿಸಿದಾಗ ಜಾಗ ಗುರುತಿಸಿ ಶೀಘ್ರದಲ್ಲಿಯೇ ತಮ್ಮ ಬೇಡಿಕೆ ನೆರವೇರಿಸೋಣ. ಈ ಬಾರಿ ಶಾಖೆ ಉತ್ತಮ ಸಾಧನೆ ಮಾಡಿದರೆ ಮುಂದಿನ ಬಾರಿ ಸಾಧನೆಯ ಯಶಸ್ಸನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಹಿರಿಯ ವಿಭಾಗಧಿಕಾರಿಗಳಾದ ಎಂ. ಕೃಷ್ಣವೇಣಿ ತಿಳಿಸಿದರು.
ಸನ್ಮಾನಿಸುವ ಸಂದರ್ಭದಲ್ಲಿ ಝೋನಲ್ ಮ್ಯಾನೇಜರ್ ಆದ ಪುನೀತ್ ಕುಮಾರ್, ನಮ್ಮ ಹಿರಿಯ ವಿಭಾಗಾಧಿಕಾರಿಗಳಾದ ಎಂ. ಕೃಷ್ಣವೇಣಿ, ಹಾಗೂ ವಿಭಾಗೀಯ ಕಚೇರಿಯ ಮಾರುಕಟ್ಟೆ ವ್ಯವಸ್ಥಾಪಕರಾದ ಜೀವನ್ ಕುಮಾರ್, ವಿಕ್ರಯ ವ್ಯವಸ್ಥಾಪಕರಾದ ಎನ್. ಆರ್. ಸಿದ್ದೇಶ್, ಗುರುರಾಜ್ ಭಟ್, ಮೈಸೂರು ವಿಭಾಗೀಯ ಕಚೇರಿಯಿಂದ ಅರಸೀಕೆರೆ ಶಾಖಾ ಕಚೇರಿಗೆ ತೆರಳುವ ಸಂದರ್ಭದಲ್ಲಿ ಶಾಖಾಧಿಕಾರಿಗಳಾದ ಸಿ. ಜೆ. ರಾಘವೇಂದ್ರ ಹಾಗೂ ಉಪ ಶಾಖಾಧಿಕಾರಿ ಸೋಮೇಶ್, ಅಭಿವೃದ್ಧಿ ಅಧಿಕಾರಿಗಳ ತಂಡ, ವಿಭಾಗಿಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕರು ವಿ. ಜಿ.ಅಶೋಕ್, ಒಕ್ಕೂಟದ ಶಾಖೆಯ ಅಧ್ಯಕ್ಷ ಕಾಂತರಾಜು ಕಾರ್ಯದರ್ಶಿ ಶೇಖರ್, ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.