ಕನ್ನಡಪ್ರಭ ವಾರ್ತೆ ಹುಕ್ಕೇರಿ

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗೆ ಲೈಫ್ ಟೈಮ್ ಅಚೀವಮೆಂಟ್ ಅವಾರ್ಡ್-ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರು ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಸಹೇಲಿ ಸಂಸ್ಥೆ ಹಾಗೂ ಆಧ್ಯಾತ್ಮ ಪೀಠದಿಂದ ಸ್ವಾಮೀಜಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರಧಾನ ಮಾಡಿದ ಮೈಸೂರಿನ ಇತಿಹಾಸ ತಜ್ಞ ಪ್ರೊ.ಸೆಲ್ವ್ ಪಿಳ್ಳಿ ಅಯ್ಯಂಗಾರ್ ಮಾತನಾಡಿ, ಹುಕ್ಕೇರಿ ಹಿರೇಮಠದ ಸಂಸ್ಥಾನ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಮಾಜಮುಖಿ ಕಾರ್ಯ ಮಾಡುತ್ತಿದೆ. ಇಂತವರಿಗೆ ಪ್ರಶಸ್ತಿ ದೊರಕಿರುವುದು ಸಂತೋಷ ತಂದಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹೇಲಿ ಸಂಸ್ಥೆ 30ನೇ ವರ್ಷದ ಅಪರೂಪದ ಕಾರ್ಯಕ್ರಮವನ್ನು ಮಾಡುವ ಜೊತೆಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.ಟಿ.ನರಸೀಪುರದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಸರ್ವಧರ್ಮ ಸಮನ್ವಯ ಸೌಹಾರ್ದ ಪೀಠದ ಡಾ.ವಿಜಯಾನಂದ ಗುರೂಜಿ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ವಿದ್ವನ್ ಮನಿಗಳಾದ ಬಿ.ಎಸ್.ಜ್ಞಾನಂದ ಚೆನ್ನರಾಜೆ ಅರಸರು, ನಟ ಶಂಕರ ಅಶ್ವಥ, ಹಿಮಾಲಯದ ಮಹಾಕಾಳ ಸಚ್ಚಿದಾನಂದ ಮಹಾತ್ಮರು ಸೇರಿ ಹಲವರು ಇದ್ದರು.ಮಹಾರಾಜ ಯದುವೀ ರ ಮೆಚ್ಚುಗೆ:ಮೈಸೂರು ಸಂಸದ ಯದವೀರ ನರಸಿಂಹರಾಜ ಒಡೆಯರ್ ಅವರು ಪ್ರಶಸ್ತಿ ಪಡೆದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಭಿನಂದಿಸಿ, ನಾವು ಕೂಡ ಹುಕ್ಕೇರಿಗೆ ಹೋಗಿ ಬಂದಿದ್ದೇವೆ. ಅವರ ಕಾರ್ಯವನ್ನು ನೋಡಿ ಸಂತೋಷ ಪಟ್ಟಿದ್ದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.