ಸಾರಾಂಶ
- ಸಾಣೇಹಳ್ಳಿಯ ಚಿತ್ರದುರ್ಗ-ಚಿಕ್ಕಮಗಳೂರು ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಬೊಮ್ಮಾಯಿ
ಕನ್ನಡಪ್ರಭ ವಾರ್ತೆ ಹೊಸದುರ್ಗಬದುಕಿಗೆ ಆಹಾರ, ನೀರು ಹಾಗೂ ಗಾಳಿ ಮುಖ್ಯವಾಗಿರುವಂತೆ ಸಾಹಿತ್ಯವೂ ಮುಖ್ಯವಾಗಿದೆ. ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಸಾಹಿತ್ಯ ಅಭಿವ್ಯಕ್ತಿಯ ಶಕ್ತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಸಾಣೇಹಳ್ಳಿಯ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಚಿತ್ರದುರ್ಗ-ಚಿಕ್ಕಮಗಳೂರು ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಬದುಕಿಗೆ ಹತ್ತಿರವಾದ ಸಾಹಿತ್ಯ ಮಾತ್ರ ಜನಪ್ರಿಯತೆ ಪಡೆಯುತ್ತದೆ. ಜನರ ಜೀವನಶೈಲಿ ಬದಲಾದಂತೆ ಸಾಹಿತ್ಯವು ಬದಲಾಗಬೇಕು. ಸ್ವಂತಿಕೆಯ ವಿಚಾರವನ್ನು ಪ್ರಬಲವಾಗಿ ಹೇಳಿದರೆ ಮಾತ್ರ ಜನರು ಇಷ್ಟಪಡುತ್ತಾರೆ ಎಂದರು. ಸಾಹಿತ್ಯಕ್ಕೆ ಧರ್ಮಾಕಾರಿಗಳ ಆಶ್ರಯ ಹಾಗೂ ದಂಡದ ಅವಶ್ಯಕತೆಯಿದೆ. ಸಾಹಿತ್ಯಕ್ಕೆ ಅರಮನೆ ಹಾಗೂ ಗುರುಮನೆಗಳ ಸಂಬಂಧ ಪೂರ್ವಕಾಲದಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಪಂಡಿತಾರಾಧ್ಯ ಶ್ರೀಗಳು ಸಮ್ಮೇಳನದ ಅಧ್ಯಕ್ಷರಾಗಿರುವುದು ಅರ್ಥಪೂರ್ಣವಾಗಿದೆ ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ 2 ದಿನಗಳಿಂದ ನಡೆದ 8 ಗೋಷ್ಠಿಗಳಲ್ಲಿ ಮಂಡಿಸಿದ ವಿಚಾರ ಗಳು ಜನರನ್ನು ಚಿಂತನೆಗೆ ಅವಕಾಶ ನೀಡಿದವು. ಸಾಹಿತ್ಯಾಸಕ್ತರು ಸದ್ಭಾವನೆಯಿಂದ ಗೋಷ್ಠಿಗಳನ್ನು ಆಲಿಸಿದರು. ಊಟ ಮತ್ತು ಸಾಹಿತ್ಯ ಎರಡು ಗೌಣ ಅಲ್ಲ. ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಂಡರು ಎಂದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ವಿಜೃಂಭಿಸುವಂತಹ ಸಮ್ಮೇಳನ ನಡೆಸಿರುವುದು ಸ್ವಾಗತಾರ್ಹ. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ. ಕೆಲವೊಮ್ಮೆ ಆರ್ಹ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇಡೀ ಬದುಕನ್ನು ಕನ್ನಡದ ಸೇವೆಗೆ ಮುಡಿಪಾಗಿಟ್ಟವರಿಗೆ ಗೌರವ ಸಲ್ಲಿಸಲು ಇದೊಂದು ಸುಸಂದರ್ಭ ಎಂದೇ ಭಾವಿಸುತ್ತೇನೆ ಎಂದು ಹೇಳಿದರು. ಶಾಸಕ ಎಚ್.ಡಿ.ತಮ್ಮಯ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಣ್ಣ, ಆರ್.ಮಲ್ಲಿಕಾರ್ಜುನಯ್ಯ ಮತ್ತಿತರಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಕನ್ನಡ ಸಿರಿ ಪ್ರಶಸ್ತಿ ಪ್ರಧಾನ ಮಾಡಿದರು. ಚಿತ್ರಮಾಹಿತಿ3ಎಚ್.ಎಸ್.ಡಿ5: ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಎಸ್‌ಎಸ್ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಚಿತ್ರದುರ್ಗ ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಭಾಕ್ಸ್:
4 ಪ್ರಮುಖ ನಿರ್ಣಯಗಳ ಮಂಡನೆಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡದ ಬಹಿರಂಗ ಅವೇಶನದಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಬಂಸಿದಂತೆ 4 ಪ್ರಮುಖ ನಿರ್ಣಯಗಳನ್ನು ಮಂಡಿಸಿ ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು. 1. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಿ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗೆ ನೀರನ್ನು ಒದಗಿಸುವುದು ಹಾಗೂ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯು ನ್ಯಾಯಾಯುತವಾದ ಪರಿಹಾರವನ್ನು ಒದಗಿಸುವುದು.2. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಣ್ಣೆಹೊಳೆಯಲ್ಲಿ ಅಕ್ಕನಾಗಮ್ಮ ಐಕ್ಯರಾಗಿವ ಸ್ಥಳ ಖಾಸಗಿಯವರ ಒಡೆತನದಲ್ಲಿದೆ. ಅಲ್ಲಿ ಪ್ರಗತಿಯ ಕೆಲಸ ಆಗುತ್ತಿಲ್ಲ. ಸರಕಾರ ಆ ಸ್ಥಳವನ್ನು ವಶಪಡಿಸಿಕೊಂಡು ಕೂಡಲ ಸಂಗಮ ಮತ್ತು ಬಸವ ಕಲ್ಯಾಣದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.3. ಕನ್ನಡ ಉಳಿಸಿ ಬೆಳೆಸಲು ಕನ್ನಡ ಮತ್ತು ಸಂಸ್ಕೃತಿಗೆ ಆರ್ಥಿಕವಾಗಿ ಸದೃಢಗೊಳಿಸುವುದು ಹಾಗೂ ಕಲಾವಿದರಿಗೆ ಗೌರವಧನ ಹೆಚ್ಚಿಸುವುದು.4. ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯ ಪರಿಸರವನ್ನು ರಕ್ಷಿಸುವುದು.