ಸಮಸ್ಯೆಗಳ ಪರಿಹಾರಕ್ಕೆ ಲೋಕಾಯುಕ್ತ ಆದ್ಯತೆ

| Published : Nov 22 2024, 01:16 AM IST

ಸಮಸ್ಯೆಗಳ ಪರಿಹಾರಕ್ಕೆ ಲೋಕಾಯುಕ್ತ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸದಲ್ಲಿ ಯಾವುದೇ ಅಧಿಕಾರಿ, ನೌಕರ ಕರ್ತವ್ಯ ಲೋಪ, ವಿಳಂಬ ಮಾಡದೆ ಜನರಿಗೆ ಸಕಾಲಕ್ಕೆ ಸ್ಪಂದಿಸಬೇಕು. ಭ್ರಷ್ಟಾಚಾರ, ಪಕ್ಷಪಾತವನ್ನು ಅಧಿಕಾರಿಗಳು ಮಾಡಬಾರದು. ಸಕಾಲಕ್ಕೆ ಕಾರ್ಯ ಅಥವಾ ಕೆಲಸ ನಿರ್ವಹಿಸಬೇಕು.

ಧಾರವಾಡ:

ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಲೋಕಾಯುಕ್ತ ಸಂಸ್ಥೆ ಮೊದಲ ಆದ್ಯತೆ ನೀಡುತ್ತದೆ. ಕರ್ತವ್ಯ ಲೋಪದ ಬಗ್ಗೆ ನಂತರ ತನಿಖೆ, ಕ್ರಮ ಜಾರಿಯಾಗಲಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎಂ. ಫಣೀಂದ್ರ ಹೇಳಿದರು.

ಇಲ್ಲಿಯ ಜಿಪಂ ಸಭಾಂಗಣದಲ್ಲಿ ಗುರುವಾರ ಸಾರ್ವಜನಿಕರಿಂದ ಕುಂದು-ಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಕೆಲಸದಲ್ಲಿ ಯಾವುದೇ ಅಧಿಕಾರಿ, ನೌಕರ ಕರ್ತವ್ಯ ಲೋಪ, ವಿಳಂಬ ಮಾಡದೆ ಜನರಿಗೆ ಸಕಾಲಕ್ಕೆ ಸ್ಪಂದಿಸಬೇಕೆಂದು ಸೂಚಿಸಿದರು.ಭ್ರಷ್ಟಾಚಾರ, ಪಕ್ಷಪಾತವನ್ನು ಅಧಿಕಾರಿಗಳು ಮಾಡಬಾರದು. ಸಕಾಲಕ್ಕೆ ಕಾರ್ಯ ಅಥವಾ ಕೆಲಸ ನಿರ್ವಹಿಸಬೇಕು. ಕರ್ತವ್ಯ ಲೋಪವಾದರೆ ಸಾರ್ವಜನಿಕರ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದರು. ಜತೆಗೆ ಜನರಿಗೆ ಲೋಕಾಯುಕ್ತ ಕಚೇರಿಯ ಬಗ್ಗೆ ತಿಳಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಅಧಿಕಾರಿಗಳು ನೈತಿಕ ಮೌಲ್ಯ ಅರಿತು ಕೆಲಸ ಮಾಡಬೇಕು. ಅಂದಾಗ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಇದರಿಂದ ಯಾವುದೇ ದೂರುಗಳು ಸಹ ಬರುವುದಿಲ್ಲ ಎಂದು ಹೇಳಿದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಸಿ.ಆರ್. ರವೀಶ, ಮಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಲೋಕಾಯುಕ್ತ ಬೆಂಗಳೂರು ಕಚೇರಿಯಲ್ಲಿನ ವಿವಾರಣಾ ವಿಭಾಗದ ಅಪರ ನಿಬಂಧಕ ಪಿ. ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ. ಪಾಟೀಲ್, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಇದ್ದರು.