ಮಾಗಡಿ: ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಕನ್ನಡಪ್ರಭ ತಾಲೂಕು ವರದಿಗಾರ ಎಚ್.ಆರ್.ಮಾದೇಶ್ ಹಾಗೂ ಪ್ರಜಾವಾಣಿ ತಾಲೂಕು ವರದಿಗಾರರಾದ ಸಿ.ಕೆ.ಸುಧೀಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ಮಾಗಡಿ: ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಕನ್ನಡಪ್ರಭ ತಾಲೂಕು ವರದಿಗಾರ ಎಚ್.ಆರ್.ಮಾದೇಶ್ ಹಾಗೂ ಪ್ರಜಾವಾಣಿ ತಾಲೂಕು ವರದಿಗಾರರಾದ ಸಿ.ಕೆ.ಸುಧೀಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ನೂತನ ಅಧ್ಯಕ್ಷ ಎಚ್.ಆರ್. ಮಾದೇಶ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಹಿನ್ನೆಲೆಯಲ್ಲಿ ನೂತನ ಸಂಘ ಆರಂಭಿಸಿದ್ದು ಪತ್ರಕರ್ತರ ಹಿತ ಕಾಯಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದ ಸಂಘದ ತಾಲೂಕು ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ:ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಆರ್. ಮಾದೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ. ಸುಧೀಂದ್ರ, ಖಜಾಂಚಿಯಾಗಿ ವಿಜಯಕರ್ನಾಟಕದ ಎಸ್.ಜಗದೀಶ್,
ಗೌರವಾಧ್ಯಕ್ಷರಾಗಿ ಪ್ರಜಾಪ್ರಗತಿ ವರದಿಗಾರ ದೊಡ್ಡಬಾಣಗೆರೆ ಮಾರಣ್ಣ, ಉಪಾಧ್ಯಕ್ಷರಾಗಿ ಹೊಸದಿಗಂತದ ಸಿ.ಜಿ.ಗಿರೀಶ್, ಕಟ್ಟೆಚ್ಚರ ರಘು.ಜೆ, ನಿರ್ದೇಶಕರಾಗಿ ರಂಗನನಾಡು ಎಂ.ಪಿ.ದೇವರಾಜ್, ಸಂಯುಕ್ತ ಕರ್ನಾಟಕ ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ವಿಶ್ವವಾಹಿನಿಯ ಬೆಳಗುಂಬ ವಿಶ್ವನಾಥ್, ಜಿ ಟಿವಿ ನ್ಯೂಸ್ ವೆಂಕಟೇಶ್, ಕೋಲಾರವಾಣಿ ನಾಗರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಕುದೂರು ಪುರುಷೋತ್ತಮ್, ಹನುಮಂತಯ್ಯ ಭಾಗವಹಿಸಿದ್ದರು.