ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಹಿಡಿಯಲು ಬೇಲೂರು ತಾಲೂಕಿನಲ್ಲಿ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಆನೆ ಸುಮಾರು ೨೫ ದಿನಗಳ ಹಿಂದೆ ಕೊಡಗು ಜಿಲ್ಲೆಯಿಂದ ಆಲೂರು ತಾಲೂಕಿಗೆ ಬಂದಿದ್ದು, ಸದ್ಯ ಬೇಲೂರು ವಲಯ ವ್ಯಾಪ್ತಿಯಲ್ಲಿ ಓಡಾಡುತ್ತಿದೆ. ಆನೆ ಸೆರೆ ಸಿಕ್ಕಿದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೇಡಿಯೊ ಕಾಲರ್‌ ಅಳವಡಿಕೆ ಮತ್ತು ಕಾರ್ಯಾಚರಣೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಂಡದ ಮುಖ್ಯಸ್ಥರು ತಿಳಿಸಿದರು. ಆನೆಗಳಿಗೆ ಆಹಾರವಾಗಿ ಹುಲ್ಲು, ಬೈನೆ, ಗೋಣಿ, ಹಲಸು ಸೊಪ್ಪು, ಭತ್ತ, ಬೆಲ್ಲ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಆಲೂರುಎರಡು ದಿನಗಳ ಹಿಂದೆ ಸಕಲೇಶಪುರ ತಾಲ್ಲೂಕು ಮೂಗಲಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ನೆರೆಯ ಕೊಡಗು ಜಿಲ್ಲೆಯ ದುಬಾರೆ ಆನೆಗಳ ಶಿಬಿರದಿಂದ ಶ್ರೀರಾಮ, ಸುಗ್ರೀವ, ಧನಂಜಯ, ಲಕ್ಷ್ಮಣ ಮತ್ತು ಐಯ್ಯಪ್ಪ ಎಂಬ ಹೆಸರಿನ ಐದು ಸಾಕಾನೆಗಳು ಆಲೂರು ಕಸಬಾ ಭೈರಾಪುರ ವಲಯ ಅರಣ್ಯ ಕಚೇರಿ ಬಳಿ ಗುರುವಾರ ರಾತ್ರಿ ೧೦ ಗಂಟೆಗೆ ಲಾರಿಯಲ್ಲಿ ಬಂದಿಳಿದವು. ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಹಿಡಿಯಲು ಬೇಲೂರು ತಾಲೂಕಿನಲ್ಲಿ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಆನೆ ಸುಮಾರು ೨೫ ದಿನಗಳ ಹಿಂದೆ ಕೊಡಗು ಜಿಲ್ಲೆಯಿಂದ ಆಲೂರು ತಾಲೂಕಿಗೆ ಬಂದಿದ್ದು, ಸದ್ಯ ಬೇಲೂರು ವಲಯ ವ್ಯಾಪ್ತಿಯಲ್ಲಿ ಓಡಾಡುತ್ತಿದೆ. ಆನೆ ಸೆರೆ ಸಿಕ್ಕಿದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೇಡಿಯೊ ಕಾಲರ್‌ ಅಳವಡಿಕೆ ಮತ್ತು ಕಾರ್ಯಾಚರಣೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಂಡದ ಮುಖ್ಯಸ್ಥರು ತಿಳಿಸಿದರು. ಆನೆಗಳಿಗೆ ಆಹಾರವಾಗಿ ಹುಲ್ಲು, ಬೈನೆ, ಗೋಣಿ, ಹಲಸು ಸೊಪ್ಪು, ಭತ್ತ, ಬೆಲ್ಲ ನೀಡಲಾಗುತ್ತಿದೆ.ಬೇಲೂರು ತಾಲೂಕಿನಲ್ಲಿ ಕಾಡಾನೆ ಇರುವ ಸುದ್ದಿ ತಿಳಿದ ತಕ್ಷಣ, ಮದ್ಯಾಹ್ನ ಸಾಕಾನೆಗಳನ್ನು ಲಾರಿಯಲ್ಲಿ ಕರೆದುಕೊಂಡು ಹೋಗಲಾಯಿತು.