ಮಹದಾಯಿ: ರಸ್ತೆ ತಡೆದು ಪ್ರತಿಭಟನೆ

| Published : Sep 13 2025, 02:04 AM IST

ಸಾರಾಂಶ

ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಮನೆ ಬಿದ್ದವರಿಗೆ ಪರಿಹಾರ ನೀಡಬೇಕು. ಕಳಸಾ ಬಂಡೂರಿ ಯೋಜನೆ ಶೀಘ್ರ ಆರಂಭಿಸಬೇಕು

ನವಲಗುಂದ: ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು ಹಾಗೂ ರೈತರ ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಶುಕ್ರವಾರ ರೈತರು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್, ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಯಿಂದ ರೈತರು ಬೆಳೆದ ಹಲವಾರು ಬೆಳೆಗಳು ನೀರು ಪಾಲಾಗಿದ್ದು, ಪರಿಹಾರ ನೀಡುವಂತೆ ಹಲವಾರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಮನೆ ಬಿದ್ದವರಿಗೆ ಪರಿಹಾರ ನೀಡಬೇಕು. ಕಳಸಾ ಬಂಡೂರಿ ಯೋಜನೆ ಶೀಘ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಸುಧೀರ ಸಾಹುಕಾರ ರೈತರ ಮನವಿ ಸ್ವೀಕರಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ, ಮಲ್ಲೇಶ ಉಪ್ಪಾರ, ಸಿದ್ದಲಿಂಗಪ್ಪ ಹಳ್ಳದ, ವಿಕ್ರಂ ಕುರಿ, ಗಂಗಪ್ಪ ಸಂಗಟಿ, ರವಿ ತೋಟದ, ಮಲ್ಲಪ್ಪ ಬಸೆಗೊಣ್ಣವರ, ನಿಂಗಪ್ಪ ತೋಟದ, ಗುರಪ್ಪ ಮೂಲಂಗಿ, ಗೋವಿಂದರಡ್ಡಿ ಮೊರಬದ, ಹುಸೇನಸಾಬ್‌ ನದಾಫ್‌, ಬಸಪ್ಪ ಮುಪ್ಪಯ್ಯನವರ ಸೇರಿದಂತೆ ಮತ್ತಿತರರಿದ್ದರು.