ಕಷ್ಟದಲ್ಲಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ: ಸುಜಿತ

| Published : Sep 13 2025, 02:04 AM IST

ಸಾರಾಂಶ

ತರೀಕೆರೆ, ಯಾವುದೇ ವ್ಯಕ್ತಿ ಕಷ್ಟದಲ್ಲಿರುವ ಸಂದರ್ಭದಲ್ಲಿ ನೆರವಾಗುವುದು ಪ್ರತಿಯೊಬ್ಬ ವ್ಯಕ್ತಿ ಕರ್ತವ್ಯ ಎಂದು ಉಡೇವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಚಿತ ಹೇಳಿದ್ದಾರೆ.

ಬಳಗದಿಂದ ಅಪಘಾತಕ್ಕೊಳಗಾದ ವ್ಯಕ್ತಿಗೆ ಹಣಕಾಸಿನ ನೆರವು ನೀಡುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಯಾವುದೇ ವ್ಯಕ್ತಿ ಕಷ್ಟದಲ್ಲಿರುವ ಸಂದರ್ಭದಲ್ಲಿ ನೆರವಾಗುವುದು ಪ್ರತಿಯೊಬ್ಬ ವ್ಯಕ್ತಿ ಕರ್ತವ್ಯ ಎಂದು ಉಡೇವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಚಿತ ಹೇಳಿದ್ದಾರೆ.ತಾಲೂಕು ನಾರಿ ಶಕ್ತಿ ಬಳಗದಿಂದ ಲಿಂಗದಹಳ್ಳಿ ಹೋಬಳಿ ಕೃಷ್ಣಾಪುರ ಗ್ರಾಮದಲ್ಲಿ ನಡೆದ ಅಪಘಾತಕ್ಕೊಳಗಾದ ವ್ಯಕ್ತಿಗೆ ಹಣಕಾಸಿನ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಕಸ್ಮಿಕವಾಗಿ ಮರದಿಂದ ಬಿದ್ದ ವ್ಯಕ್ತಿ ಗಾಯ ಗೊಂಡಾಗ ಕುಟುಂಬ ಅಪಾರ ನೋವಿನ ನಡುವೆ ಬದುಕುತ್ತದೆ. ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಹಾಸಿಗೆ ಹಿಡಿದರೆ ಅವರ ಕುಟುಂಬ ಬದುಕುವುದು ತುಂಬಾ ಕಷ್ಟ. ಇಂಥಹ ಸಮಯದಲ್ಲಿ ನಮ್ಮ ನಾರಿಶಕ್ತಿ ಬಳಗ ಒಂದಿಷ್ಟು ಹಣಕಾಸಿನ ಸಹಕಾರ ನೀಡಿದರೆ ಅವರ ಕುಟುಂಬ 5-6 ತಿಂಗಳು ಆಹಾರ ಪದಾರ್ಥ ಪಡೆದು ಬದುಕುವುದಕ್ಕೆ ಸಾಧ್ಯ ಎಂದು ಹೇಳಿದರು. ಈ ದಿನ ಈ ಕೃಷ್ಣಾಪುರ ಗ್ರಾಮದಲ್ಲಿ ಮರದಿಂದ ಕೆಳಗೆ ಬಿದ್ದ ವ್ಯಕ್ತಿ ಕುಟುಂಬಕ್ಕೆ ನಮ್ಮ ಬಳಗದಿಂದ ಸ್ವಲ್ಪ ಹಣಕಾಸಿನ ಸಹಕಾರ ನೀಡುತ್ತಿರುವುದು ನಮ್ಮ ಬಳಗಕ್ಕೆ ಬಹಳ ಸಂತೋಷ ತಂದಿದೆ. ಇಂಥಹ ಸಂದರ್ಭದಲ್ಲಿ ಮಾನವೀಯತೆ ಬಹಳ ಮುಖ್ಯ ಎಂದರು.

ನಮ್ಮ ನಾರಿ ಶಕ್ತಿ ಬಳಗ ಸದಸ್ಯರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಅಭಿವೃದ್ಧಿ , ಮಕ್ಕಳಿಗೆ ನೋಟ್ ಬುಕ್ ವಿತರಣೆ ,ಉತ್ತಮ ಸೇವೆ ಮಾಡಿದ ವೈದ್ಯ ದಂಪತಿಗೆ ಸನ್ಮಾನ. ಆಸ್ಪತ್ರೆಗೆ ಬಿಪಿ್‌ ಕಿಟ್ಟು ಕೊಡುವುದು, ಆರೋಗ್ಯ ಕ್ಯಾಂಪ್‌, ನೊಂದ ವರಿಗೆ ಮತ್ತು ಅವರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಹೀಗೆ ನಾವು ಹಲವಾರು ಕಾರ್ಯಕ್ರಮ ಮಾಡುತ್ತಿದೆ. ನಾರಿ ಶಕ್ತಿ ಬಳಗದ ಸದಸ್ಯೆ ಅರುಂಧತಿ ಹೆಗಡೆ ಮಾತನಾಡಿ, ನಮ್ಮ ನಾರಿ ಶಕ್ತಿ ಬಳಗ ಇಡೀ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ ನಮ್ಮ ನಾರಿಶಕ್ತಿ ಬಳಗದ ಸದಸ್ಯರ ಸಮಾಜಮುಖಿಯಾಗಿ ಸೇವೆಯಿಂದ ಬಳಗ ಬೆಳೆಯುತ್ತಿದೆ. ಸಮಾಜದ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮ ಮಾಡುತ್ತಾ ಮಹಿಳೆ ಮತ್ತು ಮಕ್ಕಳ ಬೆಳವಣಿಗೆಗೆ ಬೇಕಾದ ಕೆಲಸಗಳು ಜೊತೆಗೆ ನೊಂದ ಕುಟುಂಬಗಳ ಕೈ ಹಿಡಿಯುವಂತ ಕೆಲಸವನ್ನು ಇಂದು ನಾರಿ ಶಕ್ತಿ ಬಳಗ ಮಾಡುತ್ತಿರುವುದು ಸಂತೋಷ. ಅಪಘಾತಕ್ಕೆ ಒಳಗಾದ ಈ ಕುಟುಂಬಕ್ಕೆ ಸರ್ಕಾರದೊಂದಿಗೆ ಮಾತನಾಡಿ ಅಗತ್ಯವಾದ ಇನ್ನೂ ಹೆಚ್ಚಿನ ಸಹಕಾರ ಕೊಡಿಸಲು ನಾನು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.ತಾಪಂ ಮಾಜಿ ಅಧ್ಯಕ್ಷೆ, ನಾರಿ ಶಕ್ತಿ ಬಳಗದ ಸದಸ್ಯೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ, ನಾರಿ ಶಕ್ತಿ ಬಳಗದ ಎಲ್ಲ ಸದಸ್ಯರು ಹಣ ಹಾಕಿ ಇದನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ವಿಚಾರ. ಮುಂದಿನ ದಿನದಲ್ಲಿ ಇನ್ನು ಅನೇಕ ಉತ್ತಮ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಹೇಳಿದರು.ಹಾದಿಕೆರೆ ಗ್ರಾಪಂ ಅಧ್ಯಕ್ಷೆ, ನಾರಿ ಶಕ್ತಿ ಬಳಗದ ಸದಸ್ಯರಾದ ರೇಖಾ, ದೋರನಾಳು ಗ್ರಾಪಂ ಅಧ್ಯಕ್ಷೆ ಶೀಲಾವತಿ ಮಾತನಾಡಿದರು. ಸುಧಾ ಶ್ರೀನಿವಾಸ್ ಗ್ರಾಪಂ ಸದಸ್ಯರಾದ ತಿಪ್ಪೇಶಪ್ಪ, ಶಾಲಾ ಮುಖ್ಯ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು11ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಕೃಷ್ಣಾಪುರ ಗ್ರಾಮದಲ್ಲಿ ನಾರಿಶಕ್ತಿ ಬಳಗ ದಿಂದ ಅಪಘಾತಕ್ಕೊಳಗಾದ ವ್ಯಕ್ತಿಗೆ ಹಣಕಾಸಿನ ನೆರವು ನೀಡುವ ಕಾರ್ಯಕ್ರಮದಲ್ಲಿ ಉಡೇವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಚಿತ ಇತರರಿದ್ದರು.