ರಾಮನಗರ: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿದ್ದು, ಜಿಲ್ಲಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ

ರಾಮನಗರ: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿದ್ದು, ಜಿಲ್ಲಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದರೆ, ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆಯೂ ಕಾಣುತ್ತಿದೆ. ಹೀಗಾಗಿ ಸಿಲಿಂಡರ್‌ಗಾಗಿ ಜನರು ಮುಗಿ ಬಿದ್ದಿದ್ದಾರೆ. ಬುಕ್ಕಿಂಗ್ ಹೆಚ್ಚಾಗಿರುವ ಕಾರಣ ಗ್ಯಾಸ್ ಸಿಲಿಂಡರ್ ಏಜೆನ್ಸಿಗಳ ಸರ್ವರ್ ಕೂಡ ಡೌನ್ ಆಗಿದೆ.

ರೆಸಾರ್ಟ್, ಹೋಟೆಲ್ ಗಳು, ಫಾಸ್ಟ್ ಫುಡ್ ಸೇರಿದಂತೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದ್ದು, ಇದರಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ಆಹಾರ ತಯಾರಿಕೆಗೆ ತೊಂದರೆ ಉಂಟಾಗಿ, ಮಾಲೀಕರು ಆತಂಕದಲ್ಲಿದ್ದಾರೆ.

ಜಿಲ್ಲಾ ಕೇಂದ್ರ ರಾಮನಗರದಲ್ಲಿಯೇ 100ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಬಹುತೇಕ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅವಲಂಬಿತವಾಗಿವೆ. ಆದರೀಗ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಟೆಲ್‌ಗಳ ದೈನಂದಿನ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ.

ಇದರ ನಡುವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಿರುವುದರಿಂದ ಹೋಟೆಲ್ ಮಾಲೀಕರಿಗೆ ಹೊರೆ ಹೆಚ್ಚಾಗಿದೆ. ಕೆಲವರು ಹೆಚ್ಚುವರಿ ದರ ನೀಡಿ ಖಾಸಗಿ ಮೂಲಕ ಸಿಲಿಂಡರ್ ಖರೀದಿಸಬೇಕಾದ ಸ್ಥಿತಿ ಎದುರಾಗಿದೆ.

3 ಲಕ್ಷ 12 ಸಾವಿರ ಗ್ಯಾಸ್ ಸಂಪರ್ಕ :

ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ನ ಅಡುಗೆ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಗಳು ಜಿಲ್ಲೆಗೆ ಪೂರೈಕೆಯಾಗುತ್ತಿವೆ. ಜಿಲ್ಲೆಯಲ್ಲಿ ಒಟ್ಟು 29 ಗ್ಯಾಸ್ ಏಜೆನ್ಸಿಗಳಿದ್ದು, ಉಜ್ವಲ ಯೋಜನೆ ಅಡಿಯಲ್ಲಿನ 64,342 ಸೇರಿದಂತೆ ಒಟ್ಟು 3,12,252 ಗ್ಯಾಸ್ ಸಂಪರ್ಕಗಳಿವೆ.

ಅಡುಗೆ ಅನಿಲ ಸಿಲಿಂಡರ್ ಗಳ ಕೊರತೆ:

ಜಿಲ್ಲಾ ಕೇಂದ್ರ ರಾಮನಗರಕ್ಕೆ ಮೈಸೂರು ಘಟಕದಿಂದ ಪ್ರತಿನಿತ್ಯ 1500 ಎಚ್‌ಪಿ ಅಡುಗೆ ಅನಿಲ ಸಿಲಿಂಡರ್‌ಗಳು ಪೂರೈಕೆಯಾಗುತ್ತಿತ್ತು. ಈಗ ಕೇವಲ 650 ಸಿಲಿಂಡರ್‌ ಮಾತ್ರ ಸರಬರಾಜಾಗುತ್ತಿವೆ. ನಿತ್ಯ 150 ಕಮರ್ಷಿಯಲ್ ಸಿಲಿಂಡರ್ ನೀಡಲಾಗುತ್ತಿತ್ತು. ಆ ಸಿಲಿಂಡರ್ ಪೂರೈಕೆ ನಾಲ್ಕು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎನ್ನುತ್ತಾರೆ ಎಚ್‌ಪಿ ಗ್ಯಾಸ್ ಗೋದಾಮಿನ ವ್ಯವಸ್ಥಾಪಕರು.

ಈ ಮೊದಲು ಅಡುಗೆ ಅನಿಲ ಸಿಲಿಂಡರ್ ಗಳನ್ನು ಬುಕಿಂಗ್ ಮಾಡಿದ ಮರು ದಿನವೇ ಗ್ರಾಹಕರ ಮನೆ ಬಾಗಿಲು ತಲುಪುತ್ತಿತ್ತು. ಆದರೀಗ ಬುಕಿಂಗ್ ಮಾಡಿದ 4ರಿಂದ 5 ದಿನಗಳವರೆಗೆ ಕಾಯುವ ಪರಿಸ್ಥಿತಿ ಎದುರಾಗಿದೆ.

ಕಾಳಸಂತೆಯಲ್ಲಿ ಸಿಲಿಂಡರ್ ಬೆಲೆ ಗಗನಕ್ಕೇರಿದ್ದು, ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಹೋಟೆಲ್ ಉದ್ಯಮ ಸಿಲಿಂಡರ್ ಸಿಗದೆ ಕಂಗಾಲಾಗಿದೆ. ಈ ಅಂತಾರಾಷ್ಟ್ರೀಯ ಬಿಕ್ಕಟ್ಟು ಹೋಟೆಲ್ ಉದ್ದಿಮೆದಾರರು ಮಾತ್ರವಲ್ಲದೆ ಜನ ಸಾಮಾನ್ಯರ ನಿದ್ದೆ ಗೆಡೆಸಿದೆ.

ಬಾಕ್ಸ್ ................

ಸಮರೋಪಾದಿಯಲ್ಲಿ ಗ್ಯಾಸ್ ಬುಕ್ಕಿಂಗ್ :

ಡೊಮೆಸ್ಟಿಕ್ ಗ್ಯಾಸ್ ಗೆ ಬೇಡಿಕೆ ಹೆಚ್ಚಾಗಿದೆ. ಗೃಹ ಬಳಕೆಯ ಗ್ಯಾಸ್‌ಗೂ ಅಭಾವ ಉಂಟಾಗುವ ಭೀತಿಯ ಹಿನ್ನೆಲೆಯಲ್ಲಿ ಗ್ಯಾಸ್ ಬುಕ್ಕಿಂಗ್ ಗೆ ಜನ ಮುಗಿಬಿದ್ದಿದ್ದಾರೆ. ಗ್ಯಾಸ್ ಸಿಲಿಂಡರ್ ಸಿಗಲ್ಲ ಎಂದು ಆತಂಕದಲ್ಲಿ ಸಮರೋಪಾದಿಯಲ್ಲಿ‌ ಗ್ಯಾಸ್ ಬುಕ್ಕಿಂಗ್‌ ಗೆ ಜನರು ಮುಂದಾಗಿದ್ದಾರೆ.

ಬಾಕ್ಸ್.........

ಬುಕ್ಕಿಂಗ್ ಸರ್ವರ್ ಸ್ಲೋ :

ಬುಕ್ಕಿಂಗ್ ಹೆಚ್ಚಾದ ಹಿನ್ನೆಲೆ ಗ್ಯಾಸ್ ಬುಕ್ಕಿಂಗ್ ಸಾಫ್ಟ್‌ ವೇರ್ ಸ್ಲೋ ಆಗಿದೆ. ನಗರದ ಎಲ್ಲಾ ಬುಕ್ಕಿಂಗ್ ಏಜೆನ್ಸಿಗಳಲ್ಲಿ ಬುಕ್ಕಿಂಗ್ ಸರ್ವರ್ ಸ್ಲೋ ಆಗಿದ್ದು, ಗ್ಯಾಸ್ ಬುಕ್ ಆಗುತ್ತಿಲ್ಲ. ಒಂದೇ ದಿನದಲ್ಲಿ ಸುಮಾರು ಶೇಕಡ 70ರಷ್ಟು ಬುಕಿಂಗ್ ಹೆಚ್ಚಳವಾಗಿದೆ. ಎಚ್‌ಪಿ, ಇಂಡಿಯನ್‌, ಭಾರತ್ ಎಲ್ಲಾ ಕಂಪನಿಗಳ ಸರ್ವರ್ ಕೂಡ ಡೌನ್ ಆಗಿದೆ.

ಕೋಟ್ ...........................

ಮೊದಲು ಒಂದೇ ಹೋಟೆಲ್‌ಗೆ ಸರಾಸರಿ 2ರಿಂದ 3 ಸಿಲಿಂಡರ್‌ ಪೂರೈಕೆಯಾಗುತ್ತಿದ್ದವು. ಆದರೆ ಈಗ ಅದೇ ಹೋಟೆಲ್‌ಗೆ ಒಂದು ಸಿಲಿಂಡರ್‌ ಕೂಡ ಸಿಗುತ್ತಿಲ್ಲ. ಆಹಾರ ತಯಾರಿಕೆಯಲ್ಲಿ ಸಮಸ್ಯೆ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದ್ದು, ಹೋಟೆಲ್‌ಗಳು ಬಾಗಿಲು ಹಾಕುವುದು ಅನಿವಾರ್ಯ.

-ಹೋಟೆಲ್ ಉದ್ಯಮಿ, ರಾಮನಗರ

ಕೋಟ್ ................

ಬೆಂ.ದಕ್ಷಿಣ ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗಿದೆ. ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇನ್ನು ಆಸ್ಪತ್ರೆ, ವಸತಿ ನಿಲಯಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.

- ಶಿಲ್ಪಾ, ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬೆಂ.ದಕ್ಷಿಣ ಜಿಲ್ಲೆ

ಬಾಕ್ಸ್ .................

ಗ್ಯಾಸ್ ಏಜೆನ್ಸಿ ಎಲ್ ಪಿಜಿ ಕನೆಕ್ಷನ್ ವಿವರ

ತಾಲೂಕುಬಿಪಿಸಿಎಲ್ಎಎಚ್‌ಪಿಸಿಎಲ್ಐಒಸಿಎಲ್‌ಒಟ್ಟು

ಚನ್ನಪಟ್ಟಣ0045,11530,34575,460

ಕನಕಪುರ 42,3500047,78490,134

ಮಾಗಡಿ35,8058,9020044,707

ರಾಮನಗರ23,08946,78232,0801,01,951

ಒಟ್ಟು1,01,2441,00,7991,10,2093,12,252

11ಕೆಆರ್ ಎಂಎನ್ 7.ಜೆಪಿಜಿ

ಸಿಲಿಂಡರ್ ಗಳ ಸಾಂದರ್ಭಿಕ ಚಿತ್ರ