ಗಣೇಶ ಉತ್ಸವದ ಶೋಭಾಯಾತ್ರೆ ಯಶಸ್ವಿಗೊಳಿಸಿ

| Published : Sep 09 2024, 01:44 AM IST

ಸಾರಾಂಶ

ಸುಮಾರು ಆರು ವರ್ಷಗಳಿಂದ ನಗರದ ಬಿಇಒ ಕಚೇರಿ ಆವರಣದಲ್ಲಿ ಹಿಂದೂ ಮಹಾಗಣಪತಿ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶೋಭಾಯಾತ್ರೆಯೂ ಸೇರಿದಂತೆ ಗಣೇಶನ ಉತ್ಸವಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜು ಮನವಿ ಮಾಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಅವರು, ಹಿಂದೂ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತರ ಸಹಕಾರದಿಂದ ಇನ್ನೂ ಹೆಚ್ಚಿನ ಒತ್ತು ನೀಡಿ ಪೂಜಾ ಕಾರ್ಯವನ್ನು ನೆರವೇರಿಸಲಾಗುತ್ತಿದೆ. ನಾವೆಲ್ಲರೂ ಪ್ರತಿನಿತ್ಯ ಗಣೇಶನನ್ನು ಆರಾಧಿಸುವವರಾಗಿದ್ದೇವೆ. ನಾಡಿನ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮ ನಿರಂತರ ನಡೆಯಲಿದೆ ಎಂದರು.

ವಿಶ್ವಹಿಂದೂಪರಿಷತ್ ಅಧ್ಯಕ್ಷ ಡಾ. ಡಿ.ಎನ್. ಮಂಜುನಾಥ ಮಾತನಾಡಿ, ಈ ಬಾರಿ ಚರ್ತುಭುಜ ಗಣಪತಿಯ ಪ್ರತಿಷ್ಟಾಪನೆ ಮಾಡಲಾಗಿದೆ. ಬೆಂಗಳೂರಿನಿಂದ ಸಿದ್ದಪಡಿಸಿದ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಪೂಜಾ ಕಾರ್ಯವನ್ನು ನಡೆಸಲಾಗುತ್ತಿದೆ. ಸೆ.23ರಂದು ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯ ಗಣೇಶನ ಭಕ್ತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಅನಂತರಾಮ್‌ಗೌತಮ್, ಶೋಭಾಯಾತ್ರೆ ಸಮಿತಿ ಅಧ್ಯಕ್ಷ ಬಿ.ಎಸ್. ಶಿವಪುತ್ರಪ್ಪ, ಬಾಳೆಮಂಡಿ ರಾಮದಾಸ್, ಪಿ. ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಸಿ. ಶ್ರೀನಿವಾಸ್, ಟಿ. ಮಲ್ಲಿಕಾರ್ಜುನ್, ಸಿ.ಎಂ. ವಿಶುಕುಮಾರ್, ಕವಿತಾನಾಯಕಿ, ಡಿ. ಸೋಮಶೇಖರ ಮಂಡಿಮಠ, ಜೆ.ಪಿ. ಜಯಪಾಲಯ್ಯ, ಕಾರ್ಯದರ್ಶಿ ಕೆ.ಎಂ. ಯತೀಶ್, ಮಾತೃಶ್ರೀ ಎನ್. ಮಂಜುನಾಥ, ಬಾಬು, ಚಿದಾನಂದ, ಕರೀಕೆರೆ ತಿಪ್ಫೇಸ್ವಾಮಿ, ಲಕ್ಷ್ಮೀ ಶ್ರೀವತ್ಸ, ಮಂಜುಳಾ ನಾಗರಾಜು, ಗುತ್ತಿಗೆದಾರ ವಿಜಯೇಂದ್ರಪ್ಪ, ಹನುಮಂತಪ್ಪ, ಜಗದೀಶ್, ಉಮೇಶ್, ಮಹಂತೇಶ್, ರಿಯಲ್‌ಎಸ್ಟೇಟ್ ಉದ್ಯಮಿ ರೇವಣ್ಣ, ಟಿ. ತಿಮ್ಮಪ್ಪ ಮುಂತಾದವರು ಉಪಸ್ಥಿತರಿದ್ದರು.