ಸಾರಾಂಶ
ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತ ಮಾಡಬೇಕು. ಸಾರ್ವಜನಿಕರ ಠೇವಣಿ ನಷ್ಟವಾಗಬಾರದೆಂದು ಕಾನೂನುಗಳನ್ನು ಮಾಡಬೇಕು. ಸಹಕಾರಿ ರಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತ ಮಾಡಬೇಕು. ಸಾರ್ವಜನಿಕರ ಠೇವಣಿ ನಷ್ಟವಾಗಬಾರದೆಂದು ಕಾನೂನುಗಳನ್ನು ಮಾಡಬೇಕು. ಸಹಕಾರಿ ರಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಒಂದು ಸಂಸ್ಥೆ ಬೆಳೆಯಬೇಕೆಂದರೆ ಹಲವಾರು ಜನರು ಕಠಿಣ ಶ್ರಮ ವಹಿಸಿ, ತ್ಯಾಗ ಮಾಡಿ, ತಮ್ಮ ಸ್ವಂತ ಸಂಸ್ಥೆ ಎಂದು ಹಣಕಾಸಿನ ವ್ಯವಹಾರವನ್ನು ಸ್ವಚ್ಛವಾಗಿ ದಕ್ಷವಾಗಿ ಇಟ್ಟು ಮಾಡುವುದು ದೊಡ್ಡ ಶ್ರಮ ಇರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಬ್ಯಾಂಕ್‌ಗಳು ಹುಟ್ಟುವುದು ಬಹಳ ಸುಲಭ ಮುಚ್ಚುವುದು ಸುಲಭ ಅಮೆರಿಕಾದಲ್ಲಿ ಅತಿ ಹೆಚ್ಚು ಬ್ಯಾಂಕ್‌ಗಳಿವೆ. ಬ್ಯಾಂಕ್‌ಗಳು ದಿವಾಳಿಯಾಗುವುದು ಅತಿ ಹೆಚ್ಚು. ನಮ್ಮ ದೇಶದಲ್ಲಿ ಬ್ಯಾಂಕ್‌ಗಳು ಹುಟ್ಟುವುದು ಕಡಿಮೆ ಮುಚ್ಚುವುದು ಕಡಿಮೆ. ಅಮೆರಿಕೆಯಲ್ಲಿ ಖರ್ಚು ಮಾಡುವ ಸಂಸ್ಕೃತಿ, ನಮ್ಮದು ಉಳಿತಾಯ ಸಂಸ್ಕೃತಿ, ನಮ್ಮ ತಾಯಂದಿರು ಉಳಿತಾಯ ಮಾಡಿರುವುದು ದೇಶದ ಸಂಪತ್ತು. ಬಂಗಾರ, ದುಡ್ಡಿನ ಠೇವಣಿ ಉಳಿಯುತ್ತಿರುವುದು ಮಹಿಳೆಯರಿಂದ, ದೇಶದಲ್ಲಿರುವ ಬಡ ಮನೆತನಗಳು ಇವತ್ತು ತಮ್ಮ ಬದುಕನ್ನು ಸ್ವಾಭಿಮಾನದಿಂದ ನಡೆಸಲು ಸಾಧ್ಯವಾಗಿದೆ ಎಂದರು.ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಸಹಕಾರ ರಂಗದವರು ಸರ್ಕಾರವನ್ನು ಆಳುತ್ತಾರೆ. ಇಲ್ಲಿ ಸರ್ಕಾರ ಸಹಕಾರ ರಂಗವನ್ನು ಆಳಲು ಬಯಸುತ್ತದೆ. ಅದು ಬದಲಾಗಬೇಕು. ಸಹಕಾರ ರಂಗವನ್ನು ಅಧಿಕಾರಶಾಹಿ ಮುಕ್ತಮಾಡಬೇಕು. ಸಾರ್ವಜನಿಕರ ಠೇವಣಿ ನಷ್ಟವಾಗಬಾರದೆಂದು ಕಾನೂನುಗಳನ್ನು ಮಾಡಬೇಕು. ಅದರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.ಸಾನ್ನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ಶರೀರ ಸೊರಗಬಾರದು. ಸಂಪತ್ತು ಕರಗಬಾರದು, ಸಂಬಂಧಗಳು ಮುರಿಯಬಾರದು, ಜೀವ ಹೋಗಬಾರದು ಎಂಬುದು ನಮ್ಮ ಇಚ್ಛೆ. ಆದರೆ ಜಗದ ಇಚ್ಛೆ ಇದಕ್ಕೆ ತದ್ವಿರುದ್ಧವಾಗಿರುತ್ತದೆ. ವೇದ, ಪುರಾಣ, ಶಾಸ್ತ್ರ, ಆಗಮ, ವಚನ ಇವೆಲ್ಲವನ್ನು ಓದುವುದರಿಂದ ಜೀವನ ಸಾರ್ಥಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಸಿದವರಿಗೆ ಅನ್ನ ಹಾಕುವುದರಿಂದ ಪರೋಪಕಾರಿಯಾಗಬೇಕು. ಜಗತ್ತಿನಲ್ಲಿ ಮನುಷ್ಯ ಉತ್ತಮನಾಗಬೇಕು, ಉಪಕಾರಿಯಾಗಬೇಕು. ನಿಸರ್ಗ ಬದುಕಿರುವುದು ಉಪಕಾರ ಸ್ಮರಣಿಯದಿಂದ. ದೇವರಿಗೆ ಲಕ್ಷ ದೀಪ ಹಚ್ಚುವುದರಿಂದ ಉಪಕಾರ ಸಿಗುವುದಿಲ್ಲ, ಲಕ್ಷವೃಕ್ಷ ಬೆಳೆಸಿದರೆ ಕೃತಜ್ಞತಾ ಭಾವ ನೀಡಿದ ಹಾಗೆ. ಒಂದು ಉತ್ತಮವಾದ ಕೃತಜ್ಞತಾ ಭಾವ ಒಂದು ಜಗತ್ತನ್ನು ಕಟ್ಟುತ್ತದೆ. ಅದಕ್ಕಾಗಿ ಪರೋಪಕಾರ ಭಾವ ಬೆಳೆಸಿಕೊಳ್ಳಬೇಕು ಎಂದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕೃಷಿಕರು, ಕೃಷಿಯನ್ನೇ ಅವಲಂಬಿಸಿರುವ ದೇಶದಲ್ಲಿ ಎಲ್ಲ ಚಟುವಟಿಕೆ ನಡೆಸಲು ಆರ್ಥಿಕ ಜೀವನಾಡಿಯಾಗಿ ಬ್ಯಾಂಕು ಮುನ್ನಡೆದಿದೆ. ಬ್ಯಾಂಕುಗಳ ಮೇಲೆ ಭರವಸೆ ಇಟ್ಟು ಗ್ರಾಹಕರು ವ್ಯವಹಾರ ಮಾಡುತ್ತಿದ್ದಾರೆ. ಗ್ರಾಹಕರ ನಂಬಿಕೆ ವಿಶ್ವಾಸ ಪಡೆದುಕೊಂಡು ಕೆಲಸ ಮಾಡುತ್ತಿದೆ ಎಂದರು. --- ೮ ಎಚ್‌ವಿಆರ್ ೮ ---ಹಾವೇರಿ ನಗರದ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.