ಸಾರಾಂಶ
ಶಿವಮೊಗ್ಗ : ಭಾರತ ರತ್ನ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ನಿಧನ ಹಿನ್ನೆಲೆ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮನಮೋಹನ್‍ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಚ್.ಎಂ.ಚಂದ್ರಶೇಖರ್, ಮನಮೋಹನ್‍ಸಿಂಗ್ ಅವರು ಈ ದೇಶದ ಬಹು ದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶ ಆರ್ಥಿಕ ಹಿನ್ನಡೆ ಅನುಭವಿಸಿದಾಗ ತಮ್ಮ ಚಾಣಾಕ್ಷತನದಿಂದ ಅದನ್ನು ಪಾರು ಮಾಡಿದರು. ಭಾರತ ದೇಶ ಒತ್ತೆ ಇಟ್ಟ ಚಿನ್ನವನ್ನು ಮರಳಿ ತಂದವರು ಎಂದು ಸ್ಮರಿಸಿದರು.ಮನಮೋಹನ್‍ಸಿಂಗ್ ಅವರು ಎರಡು ಬಾರಿ ಪ್ರಧಾನಿಯಾಗಿದ್ದರು. ಸರ್ಕಾರದ ಎಲ್ಲಾ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಕಾಲದಲ್ಲಿ ಆಧಾರ್, ಕೂಲಿಗಾಗಿ ಕಾಳು ಯೋಜನೆ, ಬ್ಯಾಂಕ್‍ಗಳಿಗೆ ಶಕ್ತಿ ನೀಡಿದ್ದರು. ಆರ್ಥಿಕ ತಜ್ಞರಾಗಿದ್ದ ಅವರು ದೇಶವನ್ನು ಸುಸ್ಥಿರವನ್ನಾಗಿಸಲು ಪ್ರಯತ್ನಿಸಿದವರು ಎಂದು ತಿಳಿಸಿದರು.ಮನಮೋಹನ್‍ಸಿಂಗ್ ಅವರು ಮೌನೀಯಾಗಿದ್ದರು ಕೂಡ ತಮ್ಮ ಕೆಲಸದಲ್ಲಿ ಮೌನತನ ಇರಲಿಲ್ಲ. ಅತ್ಯಂತ ಸರಳವಾಗಿದ್ದರು, ಎಲ್ಲರ ಜೊತೆ ಪ್ರೀತಿ ಬೆಳೆಸಿಕೊಂಡಿದ್ದರು. ಭಾರತದ ಅರ್ಥವ್ಯವಸ್ಥೆಯನ್ನು ನೆಹರು ಯುಗದಿಂದ ಬಿಡಿಸಿ ಒಬ್ಬ ಯುಗ ಪ್ರವರ್ತರಾಗಿ ಇತಿಹಾಸದಲ್ಲಿ ಸ್ಥಾನ ಪಡೆದವರು ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು, ಪ್ರಮುಖರಾದ ಯು.ಶಿವಾನಂದ್, ಜಿ.ಡಿ.ಮಂಜುನಾಥ್, ಸೀತಾರಾಮ್ ನಾಯಕ್, ಸುವರ್ಣನಾಗರಾಜ್, ಭಾರತಿ ರಾಮಕೃಷ್ಣ, ಮಹಮ್ಮದ್ ಆರೀಫುವುಲ್ಲಾ, ಶ್ಯಾಮ್‍ಸುಂದರ್, ಎ.ಬಿ.ಮಾರ್ಟಿಸ್, ಎಂ.ಎಸ್.ಸಿದ್ದಪ್ಪ, ಶಿವಣ್ಣ, ಎನ್.ಟಿ.ಕುಮಾರ್, ಶಿವಕುಮಾರ್, ಎಸ್.ಕೆ.ಪ್ರಕಾಶ್, ಎಚ್.ಎ.ಮಧು, ಆಫ್ರಿದಿ, ನವುಲೆ ಮಂಜುನಾಥ್ ಮೊದಲಾದವರಿದ್ದರು. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದಿಂದ ಶ್ರದ್ಧಾಂಜಲಿ:
ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್‌ರವರಿಗೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಡಾ.ಮನಮೋಹನ್‌ಸಿಂಗ್ ಅವರು ಅನುಷ್ಠಾನಗೊಳಿಸಿದ ಜನಪರ ಯೋಜನೆಗಳನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ ಸಂತಾಪ :ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್‌ರವರ ನಿಧನಕ್ಕೆ ಮಲೆನಾಡು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ., ಶಿವಮೊಗ್ಗದಿಂದ ಸೊಸೈಟಿಯ ಅಧ್ಯಕ್ಷ ಕೆ.ಎನ್.ರಾಮಕೃಷ್ಣ ರವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೃತರಾಗಿರುವುದು, ನಮಗೆಲ್ಲಾ ತುಂಬಾ ದುಃಖವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಕುಟುಂಬದವರಿಗೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ಎನ್.ಟಿ.ಸತೀಶ್, ಜಿ.ಆರ್.ನಾಗೇಶ್, ಎಚ್.ಜಿ.ಕೃಷ್ಣಮೂರ್ತಿ, ಎನ್.ದಿನೇಶ್, ಎಂ.ಪಿ.ಸುರೇಂದ್ರ, ಪಿ.ಹಿರಿಯಣ್ಣ ಸಿಬ್ಬಂದಿ ವರ್ಗದವರು, ಪಿಗ್ಗಿ ಸಂಗ್ರಾಹಕರು ಹಾಗೂ ಸದಸ್ಯರಾದ ಸೇರಿ ಶೃದ್ಧಾಂಜಲಿ ಅರ್ಪಿಸಿದರು.ಕುವೆಂಪು ವಿವಿ: ಪರೀಕ್ಷೆ ಮುಂದೂಡಿಕೆ
ಶಂಕರಘಟ್ಟ: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದ್ದರಿಂದ ಡಿ.27ರಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ Non-NEP ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಉಪ ಕುಲಸಚಿವ ಡಾ.ಪಿ.ಧರಣಿಕುಮಾರ್ ತಿಳಿಸಿದ್ದಾರೆ.