ಸಾರಾಂಶ
ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ ಕಡಿಯಾಳಿಯ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿ ಶುಕ್ರವಾರ, 41ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು. ವೇದಮೂರ್ತಿ ಪಾಡಿಗಾರು ಶ್ರೀನಿವಾಸ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ವೃಂದದವರು ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ ಕಡಿಯಾಳಿಯ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿ ಶುಕ್ರವಾರ, 41ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು. ವೇದಮೂರ್ತಿ ಪಾಡಿಗಾರು ಶ್ರೀನಿವಾಸ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ವೃಂದದವರು ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು.ಶ್ರೀ ದೇವರಿಗೆ ವಿಶೇಷ ಅಲಂಕಾರ ನಡೆಸಿ, ವಿಶೇಷವಾಗಿ ರಚಿಸಿದ ಮಂಡಲದಲ್ಲಿ ಕಳಶ ಪ್ರತಿಷ್ಠೆ, ಸಾಮೂಹಿಕ ಕುಂಕುಮ ಅರ್ಚನೆ, ಲಲಿತಾ ಸಹಸ್ರನಾಮ ಪಠಣೆ, ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದೇವಳದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ವಿಜಯ ರಾಘವೇಂದ್ರ, ಸಮಾಜಸೇವಕಿ ಪೂರ್ಣಿಮಾ ಸುರೇಶ್ ನಾಯಕ್, ಮಾತೃ ಮಂಡಳಿಯ ಪ್ರಮುಖರಾದ ಸುಪ್ರಭಾ ಆಚಾರ್ಯ, ಪದ್ಮಾರತ್ನಾಕರ್, ತಾರಾ ಉಮೇಶ್ ಆಚಾರ್ಯ, ಜ್ಯೋತಿ ಪೈ, ಜಯಶ್ರೀ ಶೇಟ್ ಹಾಗೂ 500ಕ್ಕೂ ಹೆಚ್ಚಿನ ಮುತೈದೆಯರು ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಮಲ್ಪೆ ರಾಮಮಂದಿರದಲ್ಲಿ:ಮಲ್ಪೆಯ ಜಿ.ಎಸ್.ಬಿ. ಸಮಾಜದ ಶ್ರೀ ರಾಮಮಂದಿರ, ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಶ್ರೀ ರಾಮದೇವರ ಸನ್ನಿಧಿಯಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ ಶುಕ್ರವಾರ ನಡೆಯಿತು. ವೇದಮೂರ್ತಿ ಶರತ್ ಭಟ್ ನೇತೃತ್ವದಲ್ಲಿ ಮಂದಿರದ ಅರ್ಚಕರಾದ ಶೈಲೇಶ್ ಭಟ್, ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ದೇವರಿಗೆ ವಿಶೇಷ ಅಲಂಕಾರ, ಸಮೂಹಿಕ ಕುಂಕುಮಾರ್ಚನೆ, ಲಲಿತಾ ಸಹಸ್ರ ನಾಮ, ಭಜನಾ ಕಾರ್ಯಕ್ರಮ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆಡೆಯಿತು.ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ, ಜಿ.ಎಸ್.ಬಿ. ಮಹಿಳಾ ಮಂಡಳಿ ಅಧ್ಯಕ್ಷೆ ಶಾಲಿನಿ ಪೈ, ಸೇವಾದಾರರಾದ ಮಲ್ಪೆ ಯೋಗೀಶ್ ಪೈ ದಂಪತಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಎಂ. ದೇವರಾಯ ಭಟ್, ಸುಧೀರ್ ಶೆಣೈ, ಅನಿಲ್ ಕಾಮತ್, ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಸಮಾಜಭಾಂದವರು ಉಪಸ್ಥಿತರಿದ್ದರು.