ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಉತ್ಸುಕತೆ ತೋರುವ ನೇತ್ರತಜ್ಞರನ್ನು ಸರ್ಕಾರ ಪ್ರೋತ್ಸಾಹಿಸುವ ಕಾರ್ಯ ಗಂಭೀರವಾಗಿ ಮಾಡಬೇಕು
ಕನ್ನಡಪ್ರಭ ವಾರ್ತೆ ಸಿಂದಗಿ
ಇಂದಿನ ವೈಜ್ಞಾನಿಕಯುಗದ ಉಪಕರಣಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ, ಜೀವನ ಶೈಲಿಯ ಕಾಯಿಲೆಗಳು ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಬಡಜನತೆಗೆ ಅನುಕೂಲವಾಗುವ ಉದ್ದೇಶದಿಂದ ಸಾರಂಗಮಠದಲ್ಲಿ ಪ್ರತಿ ವರ್ಷ 2-3 ಬಾರಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠ- ಗಚ್ಚಿನಮಠದ ಕಾಯಕಯೋಗಿ ಲಿಂ.ಶ್ರೀ ಚೆನ್ನವೀರ ಸ್ವಾಮೀಜಿಗಳ 132ನೇ ಜಯಂತ್ಯುತ್ಸವ ನಿಮಿತ್ತ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ, ಲಿಂ.ಎನ್.ಚೆನ್ನಯ್ಯ ಸ್ವಾಮಿ ಮತ್ತು ಲಿಂ.ಶಾರಾದಾದೇವಿ ಜನಕಲ್ಯಾಣ ಫೌಂಡೇಶನ್ ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇತ್ರ ಆರೈಕೆಗೆ ಸಂಬಂಧಿಸಿದಂತೆ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ಪರಿಣತ ವೈದ್ಯರ ಕೊರತೆಯಿದೆ. ಹಳ್ಳಿಗಳಲ್ಲಿ ಕಣ್ಣಿ ತಪಾಸಣಾ ಕೇಂದ್ರಗಳನ್ನು ಬಲಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಉತ್ಸುಕತೆ ತೋರುವ ನೇತ್ರತಜ್ಞರನ್ನು ಸರ್ಕಾರ ಪ್ರೋತ್ಸಾಹಿಸುವ ಕಾರ್ಯ ಗಂಭೀರವಾಗಿ ಮಾಡಬೇಕು ಎಂದರು.ಈ ವೇಳೆ 130 ಜನರು ಕಣ್ಣಿನ ತಪಾಸಣೆಗೆ ಒಳಗಾಗಿದ್ದು ಅದರಲ್ಲಿ 45 ಜನರು ಶಸ್ತ್ರಚಿಕಿತ್ಸೆಗೆ ಅರ್ಹರಾಗಿದ್ದಾರೆ. ಶ್ರೀಮಠದ ಉತ್ತರಾಧಿಕಾರಿ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಅಶೋಕ ವಾರದ, ಡಾ.ಮಹಾಂತೇಶ ಹಿರೇಮಠ, ಡಾ.ಪ್ರವೀಣ ಹಿರೇಮಠ, ಸಂಗಮೇಶ ಪಾಟೀಲ, ಭಾವೇಶ ಚೌಧರಿ, ನಜೀಬ ಲಾಲಬಂದ, ಈರಪ್ಪ ಬಳುಂಡಗಿ, ಅಲ್ಲಮಪ್ರಭು ಸೇರಿ ಇತರರಿದ್ದರು.
;Resize=(128,128))
;Resize=(128,128))
;Resize=(128,128))