ಸಾರಾಂಶ
ಕಾರ್ಕಳ ರಾ.ಹೆ. 169ರ ರಸ್ತೆ ಬದಿಯಲ್ಲಿ ಕಸ ಸುಡಲು ಹಾಕಿದ ಬೆಂಕಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ಸಂಪೂರ್ಣವಾಗಿ ಸುಟ್ಟು ಹಾನಿಗೊಳಗಾಗಿದೆ. ಪರಿಣಾಮವಾಗಿ ಕುಡಿಯುವ ನೀರು ವ್ಯರ್ಥವಾಗಿ ಹರಿದುಹೋಗುವಂತಾಯಿತು.
ಕಾರ್ಕಳ: ರಾ.ಹೆ. 169ರ ರಸ್ತೆ ಬದಿಯಲ್ಲಿ ಕಸ ಸುಡಲು ಹಾಕಿದ ಬೆಂಕಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ಸಂಪೂರ್ಣವಾಗಿ ಸುಟ್ಟು ಹಾನಿಗೊಳಗಾಗಿದೆ. ಪರಿಣಾಮವಾಗಿ ಕುಡಿಯುವ ನೀರು ವ್ಯರ್ಥವಾಗಿ ಹರಿದುಹೋಗುವಂತಾಯಿತು.
ಸೋಮವಾರ ಸಾಣೂರು ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ಜಯಂತ ಅವರು ಶ್ರದ್ಧಾನಂದ ಕುಡ್ವರ ಮನೆಯಿಂದ ಸಮೀಪದಲ್ಲಿ ನೀರು ಪೋಲಾಗುತ್ತಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಪೈಪ್ ಬೆಂಕಿಗೆ ಕರಕಲಾಗಿರುವುದು ಪತ್ತೆಯಾಯಿತು. ವಿಚಾರಣೆ ನಡೆಸಿದಾಗ ಸ್ಥಳೀಯ ನಿವಾಸಿ ಕಸ ಸುಡಲು ಬೆಂಕಿ ಹಚ್ಚಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ತಿಳಿದ ಕೂಡಲೇ, ಸಾಣೂರು ಗ್ರಾ.ಪಂ. ಪಿಡಿಒ ವಿಶ್ವನಾಥ್ ಹಾಗೂ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಮ್ಯಾನೇಜರ್ ಬಾಲಾಜಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದರು. ತಕ್ಷಣವೇ ಸುಟ್ಟು ಹಾನಿಗೊಳಗಾದ ಪೈಪ್ ಲೈನ್ ದುರಸ್ತಿ ಮಾಡಿ, ಕುಡಿಯುವ ನೀರಿನ ಸರಬರಾಜನ್ನು ಶೀಘ್ರದಲ್ಲೇ ಪುನಃಸ್ಥಾಪಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
ನಿರ್ಲಕ್ಷ್ಯದಿಂದ ಉಂಟಾದ ಈ ಘಟನೆ ಮುಂದೆ ಪುನರಾವರ್ತನೆಯಾಗದಂತೆ ಜಾಗೃತಿಯಾಗಿರಬೇಕೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.;Resize=(128,128))
;Resize=(128,128))
;Resize=(128,128))