ಸಾರಾಂಶ
ತಾಲೂಕು ಪ್ರೌಢಶಾಲೆಗಳ ಎ ವಲಯ ಮಟ್ಟದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ, ತರೀಕೆರೆಬಾವಿಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಡೆದ ತಾಲೂಕು ಪ್ರೌಢಶಾಲೆಗಳ ಎ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸತತ ಮೂರನೇ ಬಾರಿಗೆ ಸಮಗ್ರ ಪ್ರಶಸ್ತಿ ದೊರಕಿದೆ. ಬಾಲಕರ ವಿಭಾಗದಲ್ಲಿ100 ಮೀ ಓಟ ವಾಹಿದ್ ಖಾನ್ ದ್ವಿತೀಯ, 400 ಮೀ ಕಿರಣ್ ತೃತೀಯ, 800 ಮೀ ಗೌತಮ್ ದ್ವಿತೀಯ, ಶ್ರೀನಿವಾಸ ತೃತೀಯ, 1500 ಮೀ ದೀಪಕ್ ದ್ವಿತೀಯ, ಶ್ರೀನಿವಾಸ ತೃತೀಯ, 3000 ಮೀ ಪುನೀತ್ ಪ್ರಥಮ , 5000 ಮೀ ನಡಿಗೆ ಮುರುಗ ಪ್ರಥಮ, ಕಿರಣ (ದ್ವಿ), ಎತ್ತರ ಜಿಗಿತ ಶ್ರೀನಿವಾಸ ತೃತೀಯ, ತ್ರಿವಿದ ಜಿಗಿತ ದೀಪಕ್ ಪ್ರಥಮ, ಶಶಾಂಕ್ (ದ್ವಿ), ಗುಂಡು ಎಸೆತ ನಿತಿನ್ ತೃತೀಯ, ಚಕ್ರ ಎಸೆತ ನಿತಿನ್ ಪ್ರಥಮ, ಹ್ಯಾಮರ್ ಥ್ರೋ ನಿತಿನ್ ಪ್ರಥಮ, ಶಿವು (ದ್ವಿ), 4*100 ರಿಲೇ ಪ್ರಥಮ,4*400ರಿಲೇ ಪ್ರಥಮ, ಗುಂಪು ಆಟಗಳು, ಥ್ರೋ ಬಾಲ್ ಪ್ರಥಮ, ಖೋ ಖೋ (ದ್ವಿ), ಬಾಲ್ ಬ್ಯಾಡ್ಮಿಂಟನ್ ದ್ವಿತೀಯ.
ಬಾಲಕಿಯರ ವಿಭಾಗದಲ್ಲಿ 100 ಮೀ. ಓಟ ಸಮೀಕ್ಷಾ ಪ್ರಥಮ, 200 ಮೀ ಭೂಮಿಕಾ ಪ್ರಥಮ, 400ಮೀ ಸಿಂಚನ ದ್ವಿತೀಯ, 800 ಮೀ ಸಮೀಕ್ಷಾ ಪ್ರಥಮ, ಕೀರ್ತನ ದ್ವಿತೀಯ, 1500 ಮೀ ಜ್ಯೋತಿ ಪ್ರಥಮ, ರಾಣಿ ದ್ವಿತೀಯ, 3000 ಮೀ ಲೇಖನ ಪ್ರಥಮ. 3000 ನಡಿಗೆ ಮೋನಿಷಾ ಪ್ರಥಮ, ಪಲ್ಲವಿ ದ್ವಿತೀಯ, ಉದ್ದ ಜಿಗಿತ ಸಿಂಚನ ದ್ವಿತೀಯ, ಎತ್ತರ ಜಿಗಿತ ಗಾಯತ್ರಿ ದ್ವಿತೀಯ. ತ್ರಿವಿದ ಜಿಗಿತ ರಾಣಿ ದ್ವಿತೀಯ, ಗುಂಡು ಎಸೆತ ಸಮೀಕ್ಷಾ ತೃತೀಯ, ಚಕ್ರ ಎಸೆತ ಸ್ವಾತಿ ದ್ವಿತೀಯ, ಜಾವೆಲಿನ ಸಂಧ್ಯಾ ತೃತೀಯ, ಹ್ಯಾಮರ್ ಥ್ರೋ ನಿಶಾ ಪ್ರಥಮ, ಸ್ಮಿತಾ ದ್ವಿತೀಯ, 4*100 ರಿಲೇ ಪ್ರಥಮ 4*400 ರಿಲೇ ಪ್ರಥಮ ಗುಂಪು ಆಟಗಳುಃ ಖೋಖೊ ಪ್ರಥಮ, ಥ್ರೋಬಾಲ್ ಪ್ರಥಮ ಬಾಲ್ ಬ್ಯಾಡ್ಮಿಂಟನ್ ಪ್ರಥಮ.ಈ ಎಲ್ಲಾ ಮಕ್ಕಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷ ಮಹಿನುದ್ದಿನ್,ಎಲ್ಲಾ ಸದಸ್ಯರು ಹಾಗೂ ಮುಖ್ಯ ಶಿಕ್ಷಕರಾದ ವೀಣಾಬಾಯಿ, ದೈಹಿಕ ಶಿಕ್ಷಣ ಶಿಕ್ಷಕ ಬಿ ಪಿ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಚಿಕ್ಕಮಗಳೂರು, ತಂಡದ ಮೇಲ್ವಿಚಾರಕರಾದ ಅನಿತಾ ಬಿ ಆರ್, ಭುವನೇಂದ್ರ ಟಿ ಎನ್, ಪೂರ್ಣಚಂದ್ರ ವಿ, ಸುರೇಶ ಟಿ ಎಂ ಮಂಜುನಾಥ್ ಎಸ್ ಎಂ, ರಾಜಶೇಖರ್, ಅಶೋಕ್ ಕುಮಾರ್, ಮೂಡಲ ಗಿರಿಯಪ್ಪ, ಗಸ್ತಿ ಸರ್ ಎಲ್ಲರೂ ಶುಭಾಶಯ ಕೋರಿ ಅಭಿನಂದನೆಗಳು ತಿಳಿಸಿದ್ದಾರೆ.16ಕೆಟಿಆರ್.ಕೆ.4ಃ
ತರೀಕೆರೆಯ ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲೆ ಎ ವಲಯ ಕ್ರೀಡಾಕೂಟದಲ್ಲಿ ಸತತವಾಗಿ 3ನೇ ಬಾರಿಗೆ ಸಮಗ್ರ ಪ್ರಶಸ್ತಿ ದೊರಕಿದೆ.