ಕಾರಂತ ಲೇಔಟ್‌ನಲ್ಲಿ ಕಟ್ಟಡಕ್ಕೆ ಪುರೋಭಿವೃದ್ಧಿ ತೆರಿಗೆ

| Published : Sep 18 2024, 01:45 AM IST

ಕಾರಂತ ಲೇಔಟ್‌ನಲ್ಲಿ ಕಟ್ಟಡಕ್ಕೆ ಪುರೋಭಿವೃದ್ಧಿ ತೆರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 3,546 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಖಾಸಗಿ ಲೇಔಟ್‌, ಕಂದಾಯ ಲೇಔಟ್‌ಗಳ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪುರೋಭಿವೃದ್ಧಿ ತೆರಿಗೆ (ಬೆಟರ್‌ಮೆಂಟ್‌ ಟ್ಯಾಕ್ಸ್‌) ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 3,546 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಖಾಸಗಿ ಲೇಔಟ್‌, ಕಂದಾಯ ಲೇಔಟ್‌ಗಳ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪುರೋಭಿವೃದ್ಧಿ ತೆರಿಗೆ (ಬೆಟರ್‌ಮೆಂಟ್‌ ಟ್ಯಾಕ್ಸ್‌) ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

2018ಕ್ಕೂ ಮೊದಲೇ ನಿರ್ಮಾಣಗೊಂಡಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೀಘ್ರದಲ್ಲೇ ಬಿಡಿಎ ಪುರೋಭಿವೃದ್ಧಿ ತೆರಿಗೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಈ ತೆರಿಗೆ ಪಾವತಿಸಿದ ನಂತರವೇ ಖಾತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸಿರುವ 2018ನೇ ಸಾಲಿನ ವಸತಿ ಉದ್ದೇಶದ ನಿವೇಶನ ಮೌಲ್ಯ ಹಾಗೂ 2024ನೇ ಸಾಲಿನ ವಸತಿ ಉದ್ದೇಶದ ನಿವೇಶನ ಮೌಲ್ಯದಲ್ಲಿನ ವ್ಯತ್ಯಾಸದ ಮೊತ್ತದ 1/3 ರಷ್ಟು ಮೌಲ್ಯವನ್ನು ಪುರೋಭಿವೃದ್ಧಿ ತೆರಿಗೆಯಾಗಿ ವಿಧಿಸಬೇಕು ಅದಕ್ಕೆ ಸ್ವತ್ತಿನ ವಸತಿ ಮತ್ತು ವಾಣಿಜ್ಯ ಉಪಯೋಗದ ಅಂಶವನ್ನು ಗಮನದಲ್ಲಿರಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ ಅನ್ವಯ ದರ ವಿಧಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ.

ಶೇ.50ರಷ್ಟು ಹೆಚ್ಚುವರಿ ದರ:

ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ, ಬೈಲಕೆರೆ, ಗಾಣಿಗರಹಳ್ಳಿ, ದೊಡ್ಡ ಬೆಟ್ಟಹಳ್ಳಿ, ಹಾರೋಹಳ್ಳಿ, ವಡೇರಹಳ್ಳಿ ಸೇರಿದಂತೆ 17 ಹಳ್ಳಿಗಳಲ್ಲಿ ನ್ಯಾ. ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳ ಮಾಲೀಕರು ಪುರೋಭಿವೃದ್ಧಿ ತೆರಿಗೆ ದರವನ್ನು ಪಾವತಿಸಿ ಖಾತೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಪುರೋಭಿವೃದ್ಧಿ ತೆರಿಗೆ ದರವನ್ನು ಆಯಾ ಗ್ರಾಮಗಳ ವಸತಿ ಪ್ರದೇಶಗಳಿಗೆ ನಿಗದಿಪಡಿಸಲಾಗಿದ್ದು, ವಾಣಿಜ್ಯ ಉದ್ದೇಶದ ಪ್ರದೇಶಗಳಿದ್ದ ಸಂದರ್ಭದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯವರ ಮಾರ್ಗಸೂಚಿಯಂತೆ ಶೇ.50ರಷ್ಟು ಹೆಚ್ಚುವರಿ ದರವನ್ನು ವಿಧಿಸಲು ಹಾಗೂ ಸ್ವಲ್ಪ ಮೂಲೆ ನಿವೇಶನವಾಗಿದ್ದಲ್ಲಿ ಅಥವಾ ಸ್ವತ್ತಿನ ಎರಡು ಕಡೆ ರಸ್ತೆ ಹೊಂದಿದ್ದಲ್ಲಿ ಶೇ.10ರಷ್ಟು ಹೆಚ್ಚಿನ ದರ ನಿಗದಿಪಡಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಂಪಾಪುರದಲ್ಲಿ ಹೆಚ್ಚು ತೆರಿಗೆ

ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಹಳ್ಳಿಗಳಲ್ಲೇ ಕೆಂಪಾಪುರದಲ್ಲಿ ಹೆಚ್ಚು ತೆರಿಗೆ ದರವಿದ್ದು, ಕೆಂಪನಹಳ್ಳಿಯಲ್ಲಿ ಕಡಿಮೆ ಶುಲ್ಕ ವಿಧಿಸಲಾಗಿದೆ. ಕೆಂಪಾಪುರದಲ್ಲಿ ಒಂದು ಚದರ ಮೀಟರ್‌ಗೆ ₹12,367 (ಚ.ಅಡಿಗೆ 1,149) ತೆರಿಗೆ ನಿಗದಿಪಡಿಸಲಾಗಿದೆ. ಕೆಂಪನಹಳ್ಳಿಯಲ್ಲಿ ಪ್ರತಿ ಚದರ ಮೀಟರ್‌ಗೆ ₹465 (ಚದರ ಅಡಿಗೆ ₹43) ಶುಲ್ಕ ನಿಗದಿ ಮಾಡಲಾಗಿದೆ. ಮಾರುಕಟ್ಟೆ ವೌಲ್ಯದ ಮಾರ್ಗಸೂಚಿ ದರದ ಹಿನ್ನೆಲೆಯಲ್ಲಿ ಅಭಿವೃದ್ಧಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಗ್ರಾಮದ ಹೆಸರುಪ್ರತಿ ಚ.ಮೀಟರ್‌ ತೆರಿಗೆ ದರಪ್ರತಿ ಚದರ ಅಡಿ ತೆರಿಗೆ ದರ

ಸೋಮಶೆಟ್ಟಿಹಳ್ಳಿ5,000465

ಗಾಣಿಗರಹಳ್ಳಿ5,000465

ಬ್ಯಾಲಕೆರೆ1,833 170

ರಾಮಗೊಂಡನಹಳ್ಳಿ11,0671,028

ದೊಡ್ಡಬೆಟ್ಟಹಳ್ಳಿ8,667805

ಕೆಂಪಾಪುರ12,3671,149

ಆವಲಹಳ್ಳಿ6042 561

ಹಾರೋಹಳ್ಳ1790166

ಮೇಡಿ ಅಗ್ರಹಾರ 667 62

ಶಾಮರಾಜಪುರ1833 170

ವೀರಸಾಗರ 73368

ವಡೇರಹಳ್ಳಿ83377

ಕೆಂಪನಹಳ್ಳಿ465 43

ಜೆ.ಬಿ. ಕಾವಲ್ 2000186

ಕಾಳತಮ್ಮನಹಳ್ಳಿ1,167180

ಲಕ್ಷ್ಮೀಪುರ5000 465

ಗುಣಿ ಅಗ್ರಹಾರ 2,333217