ಸಾರಾಂಶ
ಸಂಘವು ಸದರಿ ಸಾಲಿನಲ್ಲಿ 25, 04, 446 ರು. ಲಾಭ ಗಳಿಸಿದೆ. ಶೇ. 12 ಡಿವಿಡೆಂಟ್ ವಿತರಿಸುವಂತೆ ತೀರ್ಮಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಂಘದಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿ ಸಂಘವು ಇನ್ನು ಹೆಚ್ಚಿನ ಲಾಭ ಗಳಿಸಿ ಅಭಿವೃದ್ಧಿ ಹೊಂದಲು ಸದಸ್ಯರು ಸಹಕರಿಸಬೇಕು ಎಂದು ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ಎ ರಘು ತಮ್ಮಯ್ಯ ಹೇಳಿದರು.ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಸದರಿ ಸಾಲಿನಲ್ಲಿ ಸಂಘವು 25, 04, 446 ರು. (ಇಪ್ಪತ್ತೈದು ಲಕ್ಷದ ನಾಲ್ಕು ಸಾವಿರ ನಾನೂರ ನಲವತ್ತಾರು) ಲಾಭ ಗಳಿಸಿದೆ ಎಂದರು.ಸದಸ್ಯರಿಗೆ ಶೇ. 12 ರಂತೆ ಡಿವಿಡೆಂಟ್ ವಿತರಿಸುವಂತೆ ತೀರ್ಮಾನಿಸಲಾಗಿದೆ. ಸಂಘವು ಸದಸ್ಯರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಗ್ಯಾಸ್ ಏಜನ್ಸಿಗೆ ಅರ್ಜಿ ಸಲ್ಲಿಸಿದ್ದು ಅನುಮತಿ ದೊರೆತ ನಂತರ ಗ್ಯಾಸ್ ಏಜನ್ಸಿ ತೆರೆಯುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾಸಭೆಯಲ್ಲಿ ಉಪಾಧ್ಯಕ್ಷೆ ಪ್ರಮೀಳ ಪೆಮ್ಮಯ್ಯ , ನಿರ್ದೇಶಕರಾದ ಬಡಕಡ ಎಂ ಬೆಳ್ಳಿಯಪ್ಪ, ಕಲಿಯಾಟಂಡ ಎಂ ಬೋಪಣ್ಣ, ನಿಡುಮಂಡ ಸಿ ಪೂವಯ್ಯ, ಕೋಡಿಮಣಿಯಂಡ ಎಂ ನಾಣಯ್ಯ ನಂಬಡಮಂಡ ಬಿ ಸುನಿತಾ, ಎ ಎನ್ ಲಕ್ಷ್ಮಣ, ಪರದಂಡ ಟಿ ಕರುಂಬಯ್ಯ, ಪಾಲೆ ಟಿ ಕಾರ್ಯಪ್ಪ, ಕುಡಿಯರ ಬಿ ಅಚ್ಚಯ್ಯ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸದಸ್ಯರು ಹಾಜರಿದ್ದರು.