ದೊಶಿಸ್ ಚಾರಿಟಬಲ್ ಫೌಂಡೇಶನ್‌ನಿಂದ ಸ್ವಚ್ಛತೆ

| Published : Sep 30 2024, 01:18 AM IST

ಸಾರಾಂಶ

ಚಾಮರಾಜನಗರ: ನಗರದ 10ನೇ ವಾರ್ಡ್‌ ಬುದ್ಧನಗರದಲ್ಲಿ ದೊಶಿಸ್ ಚಾರಿಟಬಲ್ ಫೌಂಡೇಶನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಚಾಮರಾಜನಗರ: ನಗರದ 10ನೇ ವಾರ್ಡ್‌ ಬುದ್ಧನಗರದಲ್ಲಿ ದೊಶಿಸ್ ಚಾರಿಟಬಲ್ ಫೌಂಡೇಶನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಾರ್ಡ್‌ನ ಯುವ ಮುಖಂಡ ಭಾನುಪ್ರಕಾಶ್.ಎಸ್ ಮಾತನಾಡಿ, ಬುದ್ಧನಗರದಲ್ಲಿ ಈ ಜಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಚ್ಛತೆ ಕಾಣದ ಜಾಲಿಮುಳ್ಳಿನ ಗಿಡಗಳು ಬೆಳೆದು ಹಂದಿಕಾಟ, ವಿಷಜಂತುಗಳ ಆವಾಸ ಸ್ಥಾನವಾಗಿತ್ತು. ನಗರಸಭೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಇಲ್ಲಿ ಕಸದ ರಾಶಿ ಗುಡ್ಡೆ ಬಿದ್ದು ಮಳೆಬಂದರೆ ಗಬ್ಬುನಾರುತ್ತಿತ್ತು. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇತ್ತು. ಇದನ್ನು ಸ್ವಚ್ಛಗೊಳಿಸಿಕೊಡುವಂತೆ ಅನೇಕ ಬಾರಿ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಕ್ರಮವಹಿಸಲಿಲ್ಲ. ಸಾರ್ವಜನಿಕ ಸಹಕಾರದಲ್ಲಿ ದೊಶಿಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೆಸಿಬಿ, ಟ್ರ್ಯಾಕ್ಟರ್‌ನಿಂದ ಸ್ವಚ್ಛತೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತೇಜಸ್, ಮನೋಜ್, ಪುಟ್ಟಮಾದಮ್ಮ, ಮಹದೇವಯ್ಯ, ಜಾರ್ಜ್, ಹುಸೇನ್, ಪುಟ್ಟಮಾದಯ್ಯ ಇತರರು ಹಾಜರಿದ್ದರು.