ಸಾರಾಂಶ
ಕುದೂರು: ಥೇಟ್ ಅಮ್ಮನ ಮನೆ ಊಟದ ರುಚಿ, ಹಳ್ಳಿ ತಿಂಡಿಗಳ ಘಮಲು, ಮನೆಗೆ ಬಂದ ಅತಿಥಿಗಳ ಮನತಣಿಸುವ ಸೇವೆ. ಶುಚಿ, ರುಚಿ ಇವುಗಳನ್ನೆಲ್ಲಾ ಒಟ್ಟಾಗಿಸಿದರೆ ಮಿರಾಕಲ್ ಗಾರ್ಡನ್ ರೆಸ್ಟೋರೆಂಟ್ ಗೆ ನಿಮ್ಮನ್ನು ಕರೆದೊಯ್ಯುತ್ತದೆ.
ರಾಷ್ಟ್ರೀಯ ಹೆದ್ದಾರಿ 75 ಹಾಸನ- ಬೆಂಗಳೂರು ರಸ್ತೆ. ಮರೂರು ಹ್ಯಾಂಡ್ಪೋಸ್ಟ್ ಬಿಟ್ಟು ಎರಡು ಕಿಮೀ ಮುಂದೆ ಕುಣಿಗಲ್ ಕಡೆಗೆ ಕ್ರಮಿಸಿದರೆ, ಸುಂದರ ಪರಿಸರದಲ್ಲಿ ಗಿಡಮರಗಳ ನೆರಳಿನಲ್ಲಿ ಮಂಜುನಾಥ್ ಮಾಲೀಕತ್ವದ ಮಿರಾಕಲ್ ಗಾರ್ಡನ್ ರೆಸ್ಟೋರೆಂಟ್ ಸಿಗುತ್ತದೆ.ಅಪ್ಪಟ ದೇಸಿ ಊಟ. ರಾಜಮುಡಿ ಅಕ್ಕಿಯ ಅನ್ನ, ಉಳ್ಳೀಕಾಳ್ ಚಟ್ನಿ, ಹುಚ್ಚೆಳ್ ಚಟ್ನಿ, ಯೇಳಿಕಾಯಿ ಚಿತ್ರಾನ್ನ, ಉಪ್ಸಾರು, ಸೊಪ್ಸಾರು, ಉರುಳಿಕಟ್ಟು, ಮೊಳಕೆ ಕಾಳಿನ ಸಾರು, ಮಸೊಪ್ಪು, ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ ಸಾಂಬಾರು, ನಿಮಗಿಷ್ಟವಾದ ಸಿಹಿ, ಅಕ್ಕಿರೊಟ್ಟಿ, ರಾಗಿರೊಟ್ಟಿ, ಜೋಳದ ರೊಟ್ಟಿ, ಉತ್ತರ ಭಾರತ ಶೈಲಿ ಊಟ, ಚೈನೀಸ್ ತಿನಿಸುಗಳನ್ನು ಬಡಿಸುವ ಶಿಸ್ತಿನ ಕೆಲಸಗಾರರು, ಎಳ್ಳೀಕಾಯಿ ಜ್ಯೂಸ್, ಗಿಡಮೂಲಿಕೆ ಜ್ಯೂಸ್‌ಗಳು. ಗಾರ್ಡನ್ನಿನ ಸುತ್ತಲೂ ಔಷಧಿ, ಅಪರೂಪದ ಹಣ್ಣಿನ ಗಿಡಗಳು. ಮಕ್ಕಳಿಗೆ ಆಟಿಕೆಗಳು, ಜಾರುಬಂಡೆ, ಕಲ್ಲುಗಳ ಸುಂದರ ಕೆತ್ತನೆ ಹೀಗೆ ಹಿತಕರ ವಾತಾವರಣ ರೆಸ್ಟೋರೆಂಟ್‌ನಲ್ಲಿದೆ. ಊಟವಾದ ಬಳಿಕ ಬಾಳೆಹಣ್ಣು, ಮೆಲ್ಲಲು ತಾಂಬೂಲ ನೀಡಿ ನಗುಮೊಗದ ಸತ್ಕಾರ. ಮನೆಮಂದಿಯೇ ಅಡುಗೆ ಭಟ್ಟರು:
ಮಿರಾಕಲ್ ಗಾರ್ಡನ್ ರೆಸ್ಟೋರೆಂಟಿನ ಮಾಲೀಕ ಬಿ.ವಿ.ಮಂಜುನಾಥ್. ರಾಜ್ಯ ಜನತಾದಳದ ಯುವ ಕಾರ್ಯದರ್ಶಿಯಾಗಿಯೂ ತೊಡಗಿಸಿಕೊಂಡಿದ್ದಾರೆ. ಸಾವಯವ ತರಕಾರಿ, ಗಾಣದ ಎಣ್ಣೆಗಳಿಂದ ಸಿದ್ದಪಡಿಸಿದ ಅಡುಗೆ. ಇಲ್ಲಿ ಅಡುಗೆ ಮಾಡುವವರು ಮಾಲೀಕ ಮಂಜುನಾಥ್ ಅಕ್ಕತಂಗಿಯರು, ಚಿಕ್ಕಮ್ಮ ದೊಡ್ಡಪ್ಪ ಹೀಗೆ ಮನೆಮಂದಿಯೇ. ಬೆಲೆಯೂ ನಿಮ್ಮ ಕೈಗೆಟುಕುವಂತೆ. ಹಾಗೆ ಊಟ ಮಾಡಿ ಹೋಗುವವರಿಗೆ ಕನ್ನಡಪ್ರಭ ಪತ್ರಿಕೆ ಕೊಟ್ಟು ಓದಲು ಪ್ರೇರೇಪಿಸುತ್ತಾರೆ.ಸೆಪ್ಟಂಬರ್ 16ಕ್ಕೆ ಮಂಜುನಾಥ್ ಹುಟ್ಟುಹಬ್ಬ ಮತ್ತು ಅವರಿಗೆ ರಾಜಕಾರಣದ ಹಿನ್ನೆಲೆಯೂ ಇರುವ ಕಾರಣ ನೂರಾರು ಅಭಿಮಾನಿಗಳು ರೆಸ್ಟೋರೆಂಟಿನ ಬಳಿ ಜನ್ಮದಿನದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಕೋಟ್ ...............ರೆಸ್ಟೋರೆಂಟಿನೊಳಗೆ ಕಾಲಿಟ್ಟ ಕೂಡಲೇ ಪ್ರಶಾಂತ ವಾತಾವರಣವಿರಬೇಕು. ಅದಕ್ಕಾಗಿ ಹಣ್ಣು, ಔಷಧಿ, ಹೂವಿನ ಗಿಡಗಳ ಬೆಳೆಸಿದ್ದೇವೆ. ಸುಂದರ ಚಿತ್ರಗಳ ಚಿತ್ತಾರ, ಕಲ್ಲುಗಳ ಸಿಂಗಾರ ಹಾಗೂ ಮಹಡಿ ಮನೆಯಂತಹ ಜಾಗದಲ್ಲಿ ಪ್ರಕೃತಿಯ ವಿಹಂಗಮ ನೋಟ ನೋಡುತ್ತಾ ಊಟ ಸವಿಯುವ ವ್ಯವಸ್ಥೆ ಕಲ್ಪಿಸಿದ್ದೇವೆ. ಗ್ರಾಹಕ ತೃಪ್ತಿಯೇ ದೇವರ ಸೇವೆ ಎಂದುಕೊಂಡಿದ್ದೇನೆ.
- ಬಿ.ವಿ.ಮಂಜುನಾಥ್, ರೆಸ್ಟೋರೆಂಟಿನ ಮಾಲೀಕ15ಕೆಆರ್ ಎಂಎನ್ 5,6,7,8.ಜೆಪಿಜಿ
5,6.ಮಿರಾಕಲ್ ಗಾರ್ಡನ್ ರೆಸ್ಟೋರೆಂಟ್7.ವಿಹಂಗಮ ನೋಟದಲ್ಲಿ ತಿನಿಸು ಸವಿಯಲು ಮಹಡಿ ರೆಸ್ಟೋರೆಂಟ್
8.ಮಾಲೀಕ ಬಿ.ವಿ.ಮಂಜುನಾಥ್