ಇನ್ನೂ ನಿರಂತರ ವಿದ್ಯುತ್‌ ಪೂರೈಕೆ

| Published : Dec 11 2023, 01:15 AM IST

ಇನ್ನೂ ನಿರಂತರ ವಿದ್ಯುತ್‌ ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನೂ ನಿರಂತರ ವಿದ್ಯುತ್‌ ಪೂರೈಕೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆತಾಲೂಕಿನ ಬೀಳಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹಳೇ ಸಾಳಗುಂದಿ ಗ್ರಾಮಕ್ಕೆ ನಿರಂತರ ಜ್ಯೋತಿ ಫೀಡರ್ 24/7 ವಿದ್ಯುತ್ ಪೂರೈಸುವ ಕಾಮಗಾರಿಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.ಶನಿವಾರ ಹಳೇ ಸಾಳಗುಂದಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ಫೀಡರ್‌ನಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಅದರಿಂದ ಸಾಳಗುಂದಿ ಗ್ರಾಮದ ಜನರು 24/7 ವಿದ್ಯುತ್ ಪೂರೈಕೆಯಿಂದ ವಂಚಿತರಾಗಿದ್ದರು. ಆದ್ದರಿಂದ ಬೆಳಕು ಯೋಜನೆ ಅಡಿಯಲ್ಲಿ 33/11 ಕೆವಿ ವಿ.ವಿ. ಕೇಂದ್ರ ಅನಗವಾಡಿಯಿಂದ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು. ಈ ಕಾಮಗಾರಿ ವೆಚ್ಚವು ₹14.69 ಲಕ್ಷಗಳಷ್ಷು ಇದೆ. ಈ ಕಾಮಗಾರಿಯಿಂದ ಸಾಳಗುಂದಿ ಗ್ರಾಮದ 43 ಮನೆಗಳಿಗೆ ನಿರಂತರ 24/7 ವಿದ್ಯುತ್ ಪೂರೈಕೆಯ ಸೌಲಭ್ಯ ದೊರೆಯುತ್ತದೆ ಎಂದರು.ಈ ಕಾಮಗಾರಿಯನ್ನು ಮೇ.ಅಜಿತ ಎಲೆಕ್ಟ್ರಿಕಲ್ ಬಾಗಲಕೋಟೆ ಅವರಿಗೆ ನೀಡಲಾಗಿದೆ. ಈ ಕಾಮಗಾರಿವು ಬೇಗನೆ ಹಾಗೂ ಗುಣಮಟ್ಟದ್ದಾಗಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಸಾಳಗುಂದಿ ಗ್ರಾಮದ ಗ್ರಾಪಂ ಸದಸ್ಯೆ ಮಲ್ಲವ್ವ ಮುರನಾಳ, ಹಿರಿಯರಾದ ಸಿದ್ದಪ್ಪ ಮೇಟಿ, ರುದ್ರಪ್ಪ ಬಣಕಾರ, ಪರಮೇಶ್ವರ ಬಣಕಾರ, ಬಸವರಾಜ ಗೌಡರ, ಶ್ರೀಶೈಲ ಮುರನಾಳ ಹಾಗೂ ಕೆಇಬಿ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.