ಕನ್ನಡಪ್ರಭ ವಾರ್ತೆ ಜಮಖಂಡಿ
ಸ್ವಂತ ಕರ್ಚಿನಲ್ಲಿ ಕೆರೆಗೆ ನೀರು ತುಂಬುವ ಯೋಜನೆಯನ್ನು ಪೂರ್ಣಗೊಳಿಸಿದ ಶಾಸಕ ಜಗದೀಶ ಗುಡಗುಂಟಿ ಶನಿವಾರ ಕೆರೆಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ತಾಲೂಕಿನ ಸಿದ್ಧಾಪೂರ ಗ್ರಾಮದ 79 ಎಕರೆ ವಿಸೀರ್ಣದ ಕೆರೆ ತುಂಬುವದರಿಂದ ಸುತ್ತಲಿನ 8 ರಿಂದ 10 ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಕೊಳವೆ ಬಾವಿಗಳು ರೀಚಾರ್ಜ ಆಗುತ್ತವೆ ಇದರ ಸಹಾಯ ದಿಂದ ನೀರಾವರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಿಗದಿತ ಪ್ರಮಾಣದ ಮಳೆಯಾಗಿಲ್ಲ, ಜತೆಗೆ ಕೊಯಿನಾ ಹಾಗೂ ಆಲಮಟ್ಟಿ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದ ಅಂತರ ಜಲಮಟ್ಟ ಕುಸಿದಿದ್ದು ಕೊಳವೆ ಬಾವಿಗಳು ನೀರಿನ ಕೊರತೆ ಅನುಭವಿಸುತ್ತಿದ್ದು, ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ ಎಂದರು.
ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಜಾಕ್‌ವೆಲ್‌ನಿಂದ ಸುಮಾರು 22 ಕಿ.ಮೀ. ಪೈಪ್‌ಲೈನ್ ಅಳವಡಿಸಿದ್ದು, ₹ 24 ಕೋಟಿ ವೆಚ್ಚದಲ್ಲಿ ಕೆರೆ ತುಂಬುವ ಯೋಜನೆ ಸಿದ್ಧವಾಗಿದೆ, ಇದರಿಂದ ರೈತರ ಬೆಳೆಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲ ವಾಗುತ್ತದೆ ಎಂದರು, ದೇವರ ಕೃಪೆಯಿಂದ ಅಲ್ಲಲ್ಲಿ ಮಳೆಯಾಗಿ ಕೃಷ್ಣಾ ನದಿಗೆ ನೀರು ಬಂದಿವೆ ಇದರಿಂದ ಕೊಂಚ ನಿರಾಳವಾಗಿದ್ದು, ಬರಗಾಲ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿ ನದಿಗೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ತಾಲೂಕಿನ ಎಲ್ಲ ಏತನೀರಾವರಿ ಯೋಜನೆಗಳನ್ನು ರೈತರ ಹಿತ ದೃಷ್ಠಿ ಯಿಂದ ಚಾಲ್ತಿಯಲ್ಲಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಮುಖಂಡರಾದ ಶಂಕರ ನಿಂಗಸಾನಿ, ಬಸಪ್ಪ ಕಾಗವಾಡ, ಬಸಪ್ಪ ಜಕನೂರ, ಮಹಾದೇವ ತುಂಗಳ, ರಾಜು ತೆಗ್ಗಿ, ಈರಯ್ಯ ಹೆರೇಮಠ, ರಾಜು ಕಲಕಂಬ, ಭೀರಪ್ಪ ತುಂಗಳ, ರೇವಯ್ಯ ಸರಗಣಾಚಾರಿ, ಅಪ್ಪಾಶಿ ಇಂಗಳಗಿ, ರಮೇಶ ಜಾಧವ, ನಾಗಪ್ಪ ಸನದಿ, ದೇವಲ ದೇಸಾಯಿ, ಸಿದ್ರಾಮ ಅಳ್ಳಿಮಟ್ಟಿ,ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ, ಕರೆಪ್ಪ ಜೀರಗಾಳ, ಗುರುಪಾದ ಮ್ಯಾಗಿನಮನಿ, ರಾಯಪ್ಪ ಧನಗರ, ಕೃಷ್ಣಾ ಹುದ್ದಾರ, ಗುರುಲಿಂಗ ಕಡಪಟ್ಟಿ, ಅಶೋಕ ಝುಲಪಿ, ರವಿ ಅಂಬಿ, ಅಡವೆಪ್ಪ ಕೊಂಕಣಿ, ಹಣಮಂತ ಅವರಾಧಿ, ಶ್ರೀಶೈಲ ಹಳಿಂಗಳಿ, ದುಂಡಪ್ಪ ಜೀರಗಾಳ, ಬಾಬು ಹಸರಡ್ಡಿ, ಕರೆಪ್ಪ ಕೆಸಗೊಪ್ಪ ಇತರರು ಇದ್ದರು.