ಸಾರಾಂಶ
ಮೆಜೆಸ್ಟಿಕ್ ಹಾಗೂ ಮಾದಿಗೊಂಡನಹಳ್ಳಿ ಬಸ್ ಮಾರ್ಗ ಸಂಖ್ಯೆ - 258 ಕೆ.ಎಂ ಆಗಿದ್ದು ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ, ಮಾದನಾಯಕನಹಳ್ಳಿ, ನೆಲಮಂಗಲ, ಯಂಟಗಾನಹಳ್ಳಿ, ಮಹದೇವಪುರ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಹಾಗೂ ಮಾದಿಗೊಂಡನಹಳ್ಳಿಗೆ 2 ಬಸ್ ಸಂಚರಿಸಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಬೆಳಿಗ್ಗೆ 9 ಮಧ್ಯಾಹ್ನ 2.45 ಹಾಗೂ ಹೊರಡಲಿದ್ದು, ವಾಪಾಸ್ಸು ಮಾದಿಗೊಂಡನಹಳ್ಳಿಯಿಂದ ಬೆಳಿಗ್ಗೆ 11.15 ಮತ್ತು ಮಧ್ಯಾಹ್ನ 3.45 ಬಸ್ ಹೊರಡಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯೂ ಹವಾನಿಯಂತ್ರಣ ರಹಿತ ಸೇವೆಯಲ್ಲಿ ಬೆಂಗಳೂರು ನಗರದಿಂದ ಸೋಲೂರು ಹೋಬಳಿಗೆ ಎರಡು ಮಾರ್ಗದಲ್ಲಿ ಬಸ್ ಸೇವೆಯನ್ನು ಆರಂಭಿಸಿದ್ದು ಕಾಂಗ್ರೆಸ್ ಮುಖಂಡರು ಸೋಲೂರು ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ಚಾಲನೆ ನೀಡಿದರು.ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಸೋಲೂರು ಹೋಬಳಿ ಜನರು ಕೆಎಸ್‍ಆರ್‌ಟಿಸಿ ಬಸ್ ಮೊರೆ ಹೋಗಿದ್ದು ಸರಿಯಾದ ಸಮಯಕ್ಕೆ ಬಸ್ ಬಾರದೇ ಕಾರ್ಮಿಕರಿಗೆ, ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದೀಗ ಬಿಎಂಟಿಸಿ ಬಸ್ ಸಂಚಾರ ಕಲ್ಪಿಸಿದ್ದು ಸೋಲೂರು ಭಾಗದ ಪ್ರಯಾಣಕರಿಗೆ ಅನುಕೂಲವಾಗಲಿದೆ ಎಂದರು.
ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ ಮಾತನಾಡಿ, ಆತಂತ್ರವಾಗಿದ್ದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡಿ ಸುತ್ತಲಿನ ಜನಸಾಮಾನ್ಯೆ ಅನುಕೂಲಕ್ಕಾಗಿ ಶಾಸಕ ಶ್ರೀನಿವಾಸ್ ಅವರು ಬಿಎಂಟಿಸಿ ಬಸ್ ಸಂಚಾರ ಕಲ್ಪಿಸಿದ್ದು, ಈ ಭಾಗದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಬಿಎಂಟಿಸಿಬಸ್ ವೇಳಾಪಟ್ಟಿ:
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಿಂದ ಸೋಲೂರು ಬಿಎಂಟಿಸಿ ಬಸ್ ಮಾರ್ಗ ಸಂಖ್ಯೆ 242 ಸಿಕೆ ಆಗಿದೆ. ಕೆ.ಆರ್ ಮಾರುಕಟ್ಟೆಯಿಂದ ಸುಂಕದಕಟ್ಟೆ ಮಾರ್ಗವಾಗಿ ಕಡಬಗೆರೆ ಕ್ರಾಸ್, ತಾವರೆಕೆರೆ, ವರದೇನಹಳ್ಳಿ ಹ್ಯಾಂಡ್ ಪೋಸ್ಟ್, ಮೋಟಗಾನಹಳ್ಳಿ, ಕೋಡಿಹಳ್ಳಿ, ನಾಗನಹಳ್ಳಿ, ಶೆಟ್ಟಿಪಾಳ್ಯ, ಗುಡೇಮಾರನಹಳ್ಳಿ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಯಿಂದ ಸೋಲೂರಿಗೆ ಎರಡು ಬಸ್ ಸಂಚಾರ ಮಾಡಲಿದೆ. ಕೆ.ಆರ್. ಮಾರುಕಟ್ಟೆಯನ್ನು ಬೆಳಿಗ್ಗೆ 5.35 ಮತ್ತು 7.30 ಹಾಗೂ ಸಂಜೆ 5.20 ಮತ್ತು 7 ಗಂಟೆಗೆ ಬಸ್ ಹೊರಟರೆ, ಬಳಿಕ ಸೋಲೂರನ್ನು ಬೆಳಿಗ್ಗೆ 5.35, 7.30, ಸಂಜೆ 4.00 ರಾತ್ರಿ 8 ಗಂಟೆಗೆ ಬಸ್ ಹೊರಡಲಿದೆ.ಮೆಜೆಸ್ಟಿಕ್‌ನಿಂದ ಬಸ್ ವೇಳಾಪಟ್ಟಿ:
ಮೆಜೆಸ್ಟಿಕ್ ಹಾಗೂ ಮಾದಿಗೊಂಡನಹಳ್ಳಿ ಬಸ್ ಮಾರ್ಗ ಸಂಖ್ಯೆ - 258 ಕೆ.ಎಂ ಆಗಿದ್ದು ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ, ಮಾದನಾಯಕನಹಳ್ಳಿ, ನೆಲಮಂಗಲ, ಯಂಟಗಾನಹಳ್ಳಿ, ಮಹದೇವಪುರ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಹಾಗೂ ಮಾದಿಗೊಂಡನಹಳ್ಳಿಗೆ 2 ಬಸ್ ಸಂಚರಿಸಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಬೆಳಿಗ್ಗೆ 9 ಮಧ್ಯಾಹ್ನ 2.45 ಹಾಗೂ ಹೊರಡಲಿದ್ದು, ವಾಪಾಸ್ಸು ಮಾದಿಗೊಂಡನಹಳ್ಳಿಯಿಂದ ಬೆಳಿಗ್ಗೆ 11.15 ಮತ್ತು ಮಧ್ಯಾಹ್ನ 3.45 ಬಸ್ ಹೊರಡಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.‘ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿಯವರ ಬಳಿ ನೆಲಮಂಗಲ ತಾಲೂಕಿಗೆ ಬಿಎಂಟಿಸಿ ಬಸ್ ಸೇವೆ ಒದಗಿಸಲು ಮನವಿ ಮಾಡಿದ್ದೆ. ಸಾರಿಗೆ ಸಚಿವರು ನಗರದಿಂದ 40 ಕಿ.ಮೀ. ವ್ಯಾಪ್ತಿವರೆಗೂ ಬಿಎಂಟಿಸಿ ಬಸ್ ಸಂಚಾರ ಒದಗಿಸಲು ಸಭೆಯಲ್ಲಿ ಸಮ್ಮತಿ ಸೂಚಿಸಿದ್ದರು. ಅದರಂತೆ ಸೋಲೂರಿಗೆ ಬಿಎಂಟಿಸಿ ಬಸ್ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಯಿರುವ ಹಳ್ಳಿಗಳಿಗೂ ಬಿಎಂಟಿಸಿ ಬಸ್ ಸೇವೆ ಒದಗಿಸಲಾಗುತ್ತದೆ.’
-ಶ್ರೀನಿವಾಸ್, ಶಾಸಕರು, ನೆಲಮಂಗಲ