ಕನ್ನಡಪ್ರಭ ವಾರ್ತೆ ವಿಜಯಪುರ

ನಿನ್ನೆ ಪ್ರಧಾನಿಗಳ ಭಾಷಣ ನೋಡಿದರೆ ಯಾವ ಘನತೆ‌ ಗೌರವ ಇರಬೇಕು ಅದು ಇರಲಿಲ್ಲ. ಪದೆ ಪದೇ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಪಕ್ಷಗಳನ್ನು ವಿರೋಧಿಸಿ ಮಾತನಾಡಿದರು. ತರಾತುರಿಯಲ್ಲಿ ಮಾಸೂದೆ ಮಂಡಿಸಿದರು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರೊಧ ಆರೋಪದ ವಿಚಾರಕ್ಕೆ ಬಬಲೇಶ್ವರ ತಾಲೂಕಿನ ನಂದ್ಯಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ರವರು ಆಲ್ ಪಾರ್ಟಿ ಮಿಟಿಂಗ್ ಕರೆಯಬೇಕಿತ್ತು. ಅದರ ಬಗ್ಗೆ ಸಾಧಕ ಭಾಧಕ ಬಗ್ಗೆ ಚರ್ಚಿಸಬೇಕಿತ್ತು. ಹಾಗಾದಾರೆ ದಕ್ಷಿಣ ಭಾರತದ ರಾಜ್ಯಗಳು‌ ನಿರ್ಲಕ್ಷ್ಯಕ್ಕೆ ಒಳಾಗುತ್ತಿದ್ದವು. ನಾವೆಲ್ಲರೂ ಅತಿ ಹೆಚ್ಚು ಜಿಡಿಪಿ ಕೊಡುಗೆ ಕೊಡುತ್ತಿದ್ದೆವೆ, ಜನಸಂಖ್ಯೆ ನಿಯಂತ್ರಣ ನಾವು ಪಾಲಿಸಿದ್ದೇವೆ. ದಕ್ಷಿಣ ಭಾರತ ನಿರ್ಲಕ್ಷ್ಯ ಉತ್ತರ ಭಾರತ ಅಭಿವೃದ್ಧಿ ಆಗುತ್ತಿತ್ತು. ಪ್ರಧಾನ ಮಂತ್ರಿಗಳು ಮಸೂದೆ ಮಂಡನೆಯಲ್ಲಿ ಎಡವಿದ್ದಾರೆ.ತಮಿಳುನಾಡು ಮತ್ತು ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. ಮಹಿಳೆಯರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಹಾಗೆ ಮಾಡಿದ್ದಾರೆ. ಮೋದಿಯವರ ಭಾಷಣ ನಾನು‌ ವೈಯುಕ್ತಿಕವಾಗಿ ಒಪ್ಪಲ್ಲ. ಹಿಂದೇ ವಾಜಪೇಯಿ, ಇಂದಿರಾಗಾಂಧಿ, ನರಸಿಂಹರಾವ್, ಮನಮಮೋಹನ ಸಿಂಗ್ ಇದ್ದರು. ಆದರೆ, ಇವರ ತರಹ ಇರಲಿಲ್ಲ, ನಿನ್ನೆ ಪಕ್ಷದ ರ್‍ಯಾಲಿಯಲ್ಲಿ ಮಾತನಾಡಿದಂತೆ ಪ್ರಧಾನಿ‌ ಮಾತನಾಡಿದರು ಎಂದರು.

ಸಿಎಂ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸಿಎಂ ಬಹಳ ಗಟ್ಟಿಯಾಗಿದ್ದಾರೆ. ಅವರು ಯಾವಾಗಲೂ ಎಂದೂ ಅಸಹಾಯಕರಾಗಿಲ್ಲ. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಕ್ರಮ ಆಗುತ್ತೆ. ನಾನು ಪಕ್ಷದ ಉಲ್ಲಂಘಿಸಿದರೂ ನಮ್ಮ ಮೇಲೆ ಕ್ರಮವಾಗುತ್ತೆ. ಪಕ್ಷದ ಶಿಸ್ತು ಎಲ್ಲರಿಗೂ ಅನ್ವಯ, ಎಲ್ಲರೂ ಪಕ್ಷದ ನಿಯಮಗಳನ್ನು ‌ಪಾಲಿಸಬೇಕು. ಯಾವ ಸಮಾಜದ ವಿರುದ್ಧ ನಮ್ಮ ಪಕ್ಷ ಕ್ರಮ ಕೈಗೊಂಡಿಲ್ಲ, ತಪ್ಪು ಯಾರೇ ಮಾಡಿದರೆ ಅದು ಕ್ರಮ ಆಗುತ್ತೆ ಎಂದರು.ಲೋಕ ಅದಾಲತ್‌ ಸದುಪಯೋಗ ಪಡೆದುಕೊಳ್ಳಿ: ಎಂಬಿಪಾ

ವಿಜಯಪುರ: ಕೃಷ್ಣ ಮೇಲ್ದಂಡೆ ಯೋಜನೆ ಭೂ ಸ್ವಾಧೀನಕ್ಕೆ ಒಳಪಡುವ ಸಂತ್ರಸ್ತರಿಗೆ ನೆರವಾಗಲು ಏಪ್ರಿಲ್ ನಿಂದ ಜುಲೈ 2026ರ ವರೆಗೆ ಲೋಕ ಅದಾಲತ್ ನಡೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.


ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕಾನೂನು‌ ಸೇವಾ ಪ್ರಾಧಿಕಾರ ಈ ಲೋಕ ಅದಾಲತ ಆಯೋಜಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವ ರೈತರು ಈ ಲೋಕಅದಾಲತನಲ್ಲಿ ಪಾಲ್ಗೊಂಡು ಪರಸ್ಪರ ಒಪ್ಪಿಗೆ ಮೇರೆಗೆ ಪ್ರಕರಣವನ್ನು ತಕ್ಷಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇದರಿಂದ ನ್ಯಾಯಕ್ಕಾಗಿ ಹಲವಾರು ತಿಂಗಳುಗಳ ವರೆಗೆ ನ್ಯಾಯಾಲಯಗಳಿಗೆ ಅಲೆದಾಡುವುದು, ವಿಚಾರಣೆಗೆ ಕಾಯುವುದು ತಪ್ಪಲಿದೆ. ಒಂದೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗುವುದರಿಂದ ರೈತರ ಅಮೂಲ್ಯ ಸಮಯ ಉಳಿತಾಯವಾಗಲಿದೆ. ಲೋಕ ಅದಾಲತನಲ್ಲಿ ಪ್ರಕರಣ ಇತ್ಯರ್ಥ ಪ್ರಕ್ರಿಯೆ ಸರಳವಾಗಿದ್ದು, ತಕ್ಷಣ ಇತ್ಯರ್ಥವಾಗುವುದರಿಂದ ರೈತರು ಸಂಕಷ್ಟದಿಂದ ಮುಕ್ತರಾಗಿ ನೆಮ್ಮದಿ ಜೀವನ‌ ಸಾಗಿಸಬಹುದಾಗಿದೆ. ವಿಜಯಪುರ 1ನೇ ಮತ್ತು 3ನೇ ಹೆಚ್ಚುವರಿ ನ್ಯಾಯಾಲಯಗಳಲ್ಲಿ ಏಪ್ರಿಲ್ ನಿಂದ ಮತ್ತು ಮೇ ವರೆಗೆ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಮತ್ತು ಜೂನ್ ಹಾಗೂ ಜುಲೈ 2026ರ ವರೆಗೆ ಸಂಜೆ 4.45 ರಿಂದ 5.45ರ ವರೆಗೆ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಭೂಸ್ವಾಧೀನ ಅಧಿಕಾರಿಗಳ ಕಚೇರಿಗಳನ್ನು ತಕ್ಷಣ ಸಂಪರ್ಕಿಸುವಂತೆ ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.