ದೇಶದ ಸುರಕ್ಷತೆಗೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದೆ: ಮುತಾಲಿಕ್

| Published : Mar 21 2024, 01:06 AM IST

ದೇಶದ ಸುರಕ್ಷತೆಗೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದೆ: ಮುತಾಲಿಕ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಸುರಕ್ಷತೆ ಹಾಗೂ ಹಿಂದೂಗಳ ರಕ್ಷಣೆಯ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಿನಿಂದ ಶ್ರೀರಾಮಸೇನೆ ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳುತ್ತಿದೆ.

ಹುಬ್ಬಳ್ಳಿ:

ದೇಶ ಸುರಕ್ಷತೆ ಹಾಗೂ ಹಿಂದೂಗಳ ರಕ್ಷಣೆಯ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಿನಿಂದ ಶ್ರೀರಾಮಸೇನೆ ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳುತ್ತಿದೆ ಎಂದು ಪ್ರಮೋದ ಮುತಾಲಿಕ್‌ ಹೇಳಿದರು.

ಅವರು ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಅಂಗಡಿವೊಂದರಲ್ಲಿ ಹಿಂದೂ ವ್ಯಕ್ತಿ ಹನುಮಾನ ಚಾಲೀಸಾ ಹಚ್ಚಿದ್ದರಿಂದ ಕೆಲವು ಗೂಂಡಾಗಳು ಅವನ ಮೇಲೆ ಹಲ್ಲೆ ನಡೆಸಿರುವುದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ. ರಾಜ್ಯದಲ್ಲಿ ಇಂತಹ ಗೂಂಡಾ ಪ್ರವೃತ್ತಿ ಹೆಚ್ಚಾಗುತ್ತಿರುವುದು ಖಂಡನೀಯ.

ಗೂಂಡಾಗಿರಿ ನಡೆಯಲ್ಲ:

ಮುಸ್ಲಿಮರ ರಂಜಾನ್ ಹಬ್ಬದಲ್ಲಿ ಹಿಂದೂಗಳು ಪೂಜೆ ಮಾಡಬಾರದಾ?, ಹನುಮಾನ ಚಾಲಿಸ್ ಹಾಗೂ ಭಕ್ತಿ ಗೀತೆ ಹಚ್ಚಬಾರದಾ? ಇದೇನು ಪಾಕಿಸ್ತಾನವಾ ಎಂದು ಪ್ರಶ್ನಿಸಿದ ಮುತಾಲಿಕ್, ಇದು ಭಾರತ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಬದ್ಧವಾದ ಸಂವಿಧಾನ ರಚಿಸಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕೇ ಹೊರತು, ಗೂಂಡಾಗಿರಿ ನಡೆಸುವುದಲ್ಲ ಎಂದು ಎಚ್ಚರಿಸಿದರು.

ವಿಷಯಾಂತರ ಸರಿಯಲ್ಲ:

ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ದೊಡ್ಡ ಪ್ರತಿಭಟನೆ ನಡೆಯುತ್ತಿದ್ದು, ಕೆಲವರು ಅದನ್ನು ವಿಷಯಾಂತರ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಇರುವುದರಿಂದ ಇವರ ಆಟ ನಡೆಯುತ್ತಿದೆ. ಇಂತಹ ಮನಸ್ಥಿಯವರನ್ನು ಎದುರಿಸಲು ಹಿಂದೂ ಸಮಾಜ ಸಿದ್ಧವಾಗಿದೆ. ಮುಸ್ಲಿಮರು ತಮ್ಮ ಪಾಡಿಗೆ ಹಬ್ಬ ಆಚರಣೆ ಮಾಡಿಕೊಳ್ಳಲಿ. ನಾವೇನೂ ತೊಂದರೆ ಕೊಡುವುದಿಲ್ಲ. ಆದರೆ, ನಮ್ಮ ಆಚರಣೆಗೆ ತೊಂದರೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದಲ್ಲಿ ಇದು ನಿರಂತರವಾಗಿ ನಡೆಯುತ್ತಿದೆ. ಲೋಕಸಭಾ ಚುನಾವಣೆ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.

ಶ್ರೀರಾಮ ಸೇನೆ ರಾಜಕೀಯ ಪಕ್ಷವಲ್ಲ. ಬಿಜೆಪಿ ಯಾರಿಗೇ ಟಿಕೆಟ್ ನೀಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.