ಸೂರ್ಯ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರಿ ಮತ್ತು ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಕೊಪ್ಪಅಮ್ಮ ಎಂದರೆ ಶಕ್ತಿ ಸ್ವರೂಪಿಣಿ. ನಮ್ಮ ದೇಶದಲ್ಲಿ ಅನಾದಿ ಕಾಲದಿಂದ ಅಮ್ಮನ ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.ತಾಲೂಕಿನ ಸೂರ್ಯ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರಿ ಮತ್ತು ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಕುಂಭಾಭಿಷೇಕ ನೆರವೇರಿಸಿ ಮಾತನಾಡಿ ಆಗಾಧ ಶಕ್ತಿ ಇರುವ ಅಮ್ಮನಿಗೆ ಬೇರೆ ಬೇರೆ ರೂಪಗಳಲ್ಲಿ ಆರಾಧಿಸುತ್ತೇವೆ. ಅಮ್ಮನವರ ಆಶೀರ್ವಾದ ಇದ್ದರೆ ಏಳಿಗೆ ಸಾಧ್ಯ ಎಂದರು.
ತಾಯಿ, ಮಕ್ಕಳಿಗೆ ಮನೆಯಲ್ಲಿ ಕಾಲಕ್ಕೆ ತಕ್ಕಂತೆ ವಿದ್ಯೆ ಹೇಳಿಕೊಡುತ್ತಾಳೆ. ಮಗುವಿಗೆ ಮೊದಲ ಗುರು ತಾಯಿ. ತಾಯಿ ಪೋಷಣೆ ಮಗುವಿಗೆ ಹೇಗೆ ಅವಶ್ಯಕತೆ ಇದೆಯೋ ಹಾಗೆಯೇ, ಅಮ್ಮ ಆಶೀರ್ವಾದ ಎಲ್ಲರಿಗೂ ಅವಶ್ಯ. ಊರಿನ ಒಳಿತಿಗಾಗಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸಂತೋಷದ ವಿಷಯ ಎಂದರು.ಪ್ರತಿಯೊಬ್ಬರು ತಮ್ಮ ಶಕ್ತಿ ಅನುಸಾರ ಏನನ್ನು ಕೊಡುತ್ತಾರೋ ಅದೇ ದೇವರ ಸೇವೆ. ಇನ್ನೊಬ್ಬರೊಂದಿಗೆ ಹೋಲಿಕೆ ಸರಿ ಯಲ್ಲ. ನಮ್ಮ ಧರ್ಮ, ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಲೌಖಿಕ ಪ್ರಪಂಚದಲ್ಲಿ ತುಂಬಾ ಎತ್ತರಕ್ಕೆ ಬೆಳೆಯಬೇಕೆಂದರೆ ಧಾರ್ಮಿಕ ಸಂಸ್ಕಾರ ತಿಳಿದುಕೊಳ್ಳುವುದು ಮುಖ್ಯ ಎಂದರು.ದೇವಸ್ಥಾನ ಸೇವಾ ಸಮಿತಿ ಕೆ.ಎನ್.ಪ್ರಸನ್ನ ಶೆಟ್ಟಿ ಮಾತನಾಡಿ, ದೇವಸ್ಥಾನ ನಿರ್ಮಾಣ ಮಾಡಲು ನಾವು ಬೇರೆ ಊರಿ ನವರಿಂದ ದೇಣಿಗೆ ಸಂಗ್ರಹಣೆ ಮಾಡಿಲ್ಲ. ಇಲ್ಲಿರುವ ಶೇ ೮೫ರಷ್ಟು ಕೂಲಿ ಕಾರ್ಮಿಕರ ಸಹಕಾರ, ಶೇ ೧೫ರಷ್ಟು ಮಂದಿ ಶ್ರೀಮಂತ ವರ್ಗದವರ ಸಹಕಾರದಿಂದ ಸಾಧ್ಯವಾಯಿತು. ನಮ್ಮ ಊರಿನವರೇ ಆಗಿದ್ದುಬೇರೆ ಕಡೆಗೆ ವಾಸವಿರುವವರು ದೇವಾಲಯದ ಪುನರ್ ನಿರ್ಮಾಣದ ಸುದ್ದಿ ತಿಳಿದು ಸಂತೋಷದಿಂದ ಸಹಕಾರ ನೀಡಿದ್ದಾರೆ ಅನೇಕರು ದೊಡ್ಡ ಆರ್ಥಿಕ ಸಹಕಾರ ಮಾಡಿದ್ದು ಸುಮಾರು ಒಂದು ಕೋಟಿಯಷ್ಟು ಹಣದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ ದೇವಸ್ಥಾನದ ಸಮೀಪದಲ್ಲಿ ೧೨೦೦ ವರ್ಷಗಳ ಇತಿಹಾಸ ಸಾರುವ ಕಲ್ಲು ಕಲಾಕೃತಿ ಕುರುಹುಗಳಿವೆ ಎಂದರು.ಗುರುವಾರ ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ಮತ್ತು ಚೌಡೇಶ್ವರಿ ಅಮ್ಮನ ಪ್ರತಿಷ್ಠಾಪನೆ ನಡೆಯಿತು. ಶುಕ್ರವಾರ ರಾತ್ರಿ ೭-೩೦ ರಿಂದ ಬೆಂಗಳೂರಿನ ಶಾರ್ವರಿ ಮಂಜುನಾಥ್‌ರವರಿಂದ ಭರತನಾಟ್ಯ. ರಾತ್ರಿ ೮ ರಿಂದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಶಿವದೂತೆ ಗುಳಿಗ ತುಳು ನಾಟಕ ಪ್ರದರ್ಶನವಾಯಿತು.