ತಾಯಿ ಎದೆ ಹಾಲು ಮಗುವಿನ ಬೆಳವಣಿಗೆಗೆ ಸಹಾಯಕಾರಿ

| Published : Aug 10 2024, 01:38 AM IST

ತಾಯಿ ಎದೆ ಹಾಲು ಮಗುವಿನ ಬೆಳವಣಿಗೆಗೆ ಸಹಾಯಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ಮಗುವಿನ ವೈಯಕ್ತಿಕ ಶುಚಿತ್ವ ಬಗ್ಗೆ ಮತ್ತು ಸಮಯಕ್ಕೆ ಸರಿಯಾಗಿ ತಾಯಿಯ ಎದೆಹಾಲು ಕೊಡುವುದರ ಕುರಿತು ತಿಳಿಸಿದರು

ಗದಗ: ತಾಯಿ ಎದೆ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ಒಂದು ಗಂಟೆಯಲ್ಲಿ ಸ್ತನ್ಯಪಾನ ಮಾಡಿಸಬೇಕು, ತಾಯಿಯ ಎದೆಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿ ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಾಯಕಾರಿ ಎಂದು ಚಿಕ್ಕಮಕ್ಕಳ ತಜ್ಞ ಡಾ. ಶ್ರೀನಿವಾಸ ಹೇಳಿದರು.

ಅವರು ನಗರದ ಜಿಮ್ಸ್ ಸರ್ಕಾರಿ ಬಿಎಸ್ ಸಿ ನರ್ಸಿಂಗ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಮ್ಸ್ ಸರ್ಕಾರಿ ಬಿಎಸ್ಸಿ ನರ್ಸಿಂಗ್‌ ಕಾಲೇಜು ಸಹಯೋಗದೊಂದಿಗೆ ನಡೆದ ಗರ್ಭೀಣಿ, ಬಾಣಂತಿಯರಿಗೆ ಸ್ತನ್ಯಪಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಮ್ಸ್ ಚಿಕ್ಕಮಕ್ಕಳ ತಜ್ಞ ಡಾ.ಈರಣ್ಣ ಹಳೇಮನಿ ಮಾತನಾಡಿ, ತಾಯಿ ಮಗುವಿನ ವೈಯಕ್ತಿಕ ಶುಚಿತ್ವ ಬಗ್ಗೆ ಮತ್ತು ಸಮಯಕ್ಕೆ ಸರಿಯಾಗಿ ತಾಯಿಯ ಎದೆಹಾಲು ಕೊಡುವುದರ ಕುರಿತು ತಿಳಿಸಿದರು.

ಡಿವೈಡಿಎಚ್‌ಇಓ ಗೀತಾ ಕಾಂಬಳೆ ಮಾತನಾಡಿ, ಕಾಂಗರೂ ವಿಧಾನ ಅನುಸರಿಸಿ ತಾಯಿ ಮಗು ರಕ್ಷಣೆ ಮಾಡಬೇಕು. ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ.ಪ್ರತಿಯೊಬ್ಬ ಹಾಲುಣಿಸುವ ತಾಯಂದಿರು ಮಗುವಿಗೆ ತನ್ನ ಮೊದಲನೆ ಹಾಲನ್ನು ಮಗುವಿಗೆ ಕುಡಿಸುತ್ತೇನೆ ಎಂದು ಮಾನಸಿಕವಾಗಿ ಸದೃಢರಾಗಿರಬೇಕೆಂದು ತಿಳಿಸಿದರು.

ಈ ವೇಳೆ ಡಿವೈಡಿಎಚ್‌ಇಓ ಡಾ.ಅರವಿಂದ ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳು ಇದ್ದರು.