ಆರೆಸ್ಸೆಸ್‌ ಹಿರಿಯ ನಾಯಕ ಪಾರಸ್‌ಮಲ್ ವಿಧಿವಶ

| Published : Aug 10 2024, 01:38 AM IST

ಸಾರಾಂಶ

ಸಂಘ ಪರಿವಾರದ ಹಿರಿಯರು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ತುರ್ತು ಪರಿಸ್ಥಿತಿ ವೇಳೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಪಾರಸ್‌ಮಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ಹಾಸನದಲ್ಲಿ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿ ರಾಷ್ಟ್ರಕಾರ್ಯದಲ್ಲಿ ಪಾದರಸದಂತೆ ಓಡಾಟ ಮಾಡುತ್ತಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ಸಂಘ ಪರಿವಾರದ ಹಿರಿಯರು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ತುರ್ತು ಪರಿಸ್ಥಿತಿ ವೇಳೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಪಾರಸ್‌ಮಲ್ (೭೫ ವರ್ಷ) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯಕಾರಣಿ ಸದಸ್ಯರು ಹಾಗೂ ಪ್ರವೀಣ್ ಸೆಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರಾದ ಪಾರಸ್ ಮಲ್ ಇವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದು, ಸಂಘದ ಹಿರಿಯರು, ಕಠಿಣ ಸಂದರ್ಭದಲ್ಲಿ ಹಾಸನದಲ್ಲಿ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿ ರಾಷ್ಟ್ರಕಾರ್ಯದಲ್ಲಿ ಪಾದರಸದಂತೆ ಓಡಾಟ ಮಾಡುತ್ತಿದ್ದರು.

ಇವರ ಪಾರ್ಥಿವ ಶರೀರವನ್ನು ಗಾಂಧಿ ಬಜಾರ್ ನಿವಾಸದಲ್ಲಿ ಸಂಜೆವರೆಗೂ ಇಡಲಾಗಿತ್ತು. ನಂತರ ನಗರದ ಗೊರೂರು ರಸ್ತೆಯಲ್ಲಿರುವ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಕುಟುಂಬದವರು ಅಂತ್ಯಸಂಸ್ಕಾರ ನೆರವೇರಿಸಿದರು.

ಅಂತಿಮ ಕ್ರಿಯೆಯಲ್ಲಿ ಪಾರಸ್‌ ಜಿ ಸ್ನೇಹಿತರು ಹಾಗೂ ಹಾಸನ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಶಾಸಕರಾದ ಹುಲ್ಲಹಳ್ಳಿ ಸುರೇಶ್, ಸಿಮೆಂಟ್ ಮಂಜು, ಮಾಜಿ ಶಾಸಕರಾದ ಪ್ರೀತಂ ಗೌಡರು, ಆರ್‌ಎಸ್‌ಎಸ್‌ ವಿಭಾಗದ ಸಹ ಕಾರ್ಯದರ್ಶಿ ವಿಜಯಕುಮಾರ್, ನಿರ್ಮಲಾನಂದ ಸುರಾನಾ, ಆರ್‌ಎಸ್‌ಎಸ್‌ನ ಮುಖಂಡರಾದ ಲಾ.ನಾ. ಶಾಸ್ತ್ರಿ, ಅರಸೀಕೆರೆ ಸತ್ಯಣ್ಣ, ವಿ.ಎಚ್‌.ಪಿ. ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಹಾಗೂ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.