ಕನ್ನಡಪ್ರಭ ವಾರ್ತೆ ಶಿರಾ ನಮ್ಮ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.ಅವರು ಶಿರಾ ತಾಲೂಕಿನ ಚಿಕ್ಕನಹಳ್ಳಿ ಹಾಗೂ ಕಡವಿಗೆರೆ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಯುಗಾದಿ ಹಾಗೂ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಚಿದಾನಂದ್ ಎಂ.ಗೌಡ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹಿಂದುಗಳು ಒಗ್ಗಟ್ಟಾಗಬೇಕು ಎಂದು ಭಾಷಣ ಮಾಡಿದರೆ ಅಥವಾ ಕೇಳಿದರೆ ಸಾಲದು. ಅದನ್ನು ಆಚರಣೆಗೆ ತರಬೇಕು. ಅದನ್ನು ಇಂದಿಗೂ ಸಹ ನಮ್ಮ ತಾಯಂದಿರು ತಲೆ ಮಾರಿನಿಂದ ತಲೆಮಾರಿಗೆ ಹಂಚುತ್ತಾ ಸಾಗಿದ್ದು ಸನಾತನ ಧರ್ಮ, ಸಂಸ್ಕೃತಿ ಉಳಿವಿಗೆ ಅವರೂ ಸಹ ಪ್ರಮುಖ ಕಾರಣರು ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮಾಜಿ ನಗರಸಭಾ ಸದಸ್ಯ ಸಂತೇಪೇಟೆ ನಟರಾಜ್, ಎಸ್.ಟಿ.ಮೋರ್ಚಾ ಅಧ್ಯಕ್ಷ ತೇಜೇಶ್ವರ್, ಮಹಿಳಾ ಮೋರ್ಚಾದ ಚನ್ನಮ್ಮ, ಕಾವೇರಮ್ಮ, ಪದ್ಮ ಮಂಜುನಾಥ್, ಪುಷ್ಪಾವತಿ, ರಮ್ಯ, ಸುಮಿತ್ರಮ್ಮ, ಗೀತಾ, ಗಂಗಾಂಬಿಕ, ಸುಕನ್ಯ, ಮುಖಂಡರಾದ ಕುಮಾರ್ ಮಾಸ್ಟರ್, ಲಕ್ಷ್ಮೀಕಾಂತ್, ಷಣ್ಮುಖಪ್ಪ, ಕಲ್ಲೇಶ್, ಉಮೇಶ್, ತಮ್ಮಯ್ಯ, ಮೂಗನಹಳ್ಳಿ ರಾಮು, ದೇವರಾಜು ಎಸ್.ಆರ್.ಎಸ್, ವಿನಯ್ ಕುಮಾರ್, ಲೀಲೇಶರಾದ್ಯ, ಶ್ರೀಕಾಂತ್, ನಾಗರಾಜು, ಕಡವಿಗೆರೆ ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಯ್ಯ, ಮಾಜಿ ತಾ. ಪಂ. ಸದಸ್ಯೆ ಛಾಯಾ ಮಂಜುನಾಥ್, ನಿ.ಶಿಕ್ಷಕ ದೊಡ್ಡಲಿಂಗಯ್ಯ, ಡೈರಿ ಅಧ್ಯಕ್ಷ ಸುರೇಶ್,ನವೀನ್ ಕುಮಾರ್, ಚಂದ್ರಶೇಖರ್, ಉಮಾದೇವಿ ಸೇರಿದಂತೆ ಹಲವರು ಹಾಜರಿದ್ದರು.