Sachin Tipashetti, an activist from Hallikhed (B) village, has been appointed as the new president of the Humnabad Taluk unit of the Karnataka Rakshana Vedike.

ಹುಮನಾಬಾದ್: ಕರ್ನಾಟಕ ರಕ್ಷಣಾ ವೇದಿಕೆಯ ಹುಮನಾಬಾದ್ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಳ್ಳಿಖೇಡ(ಬಿ) ಗ್ರಾಮದ ಹೋರಾಟಗಾರ ಸಚಿನ್ ತಿಪಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಅಧ್ಯಕ್ಷತೆಯಲ್ಲಿ ಹುಮನಾಬಾದ್ ಪಟ್ಟಣದ ಖಾಸಗಿ ಹೋಟೆಲ್ನಲಲ್ಲಿ ನಡೆದ ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಆದೇಶದ ಮೇರೆಗೆ ಸಚಿನ್ ತಿಪಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಪ್ರಕಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ಕರವೇ ವಿವಿಧ ಪ್ರಮುಖರು ಹಾಜರಿದ್ದರು.--ಚಿತ್ರ 7ಬಿಡಿಆರ್56: